ದಾಖಲೆ ಸಮೇತ ಬಹಿರಂಗವಾಗಿ ಬನ್ನಿ : ಸಂಗಮೇಶ ಬುತ್ತಿ,,,,,
ಯಲಬುರ್ಗಾ ಪಟ್ಟಣದ ಕಾಂಗ್ರೆಸ್ ಕಚೇರಿಯ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಯಾವುದೇ ಇಲಾಖೆ ಕ್ಷೇತ್ರದ ಜನತೆಗೆ ಯಾವುದೇ ದಾಖಲೆಗಳಿಲ್ಲದೆ ತಪ್ಪು ದಾರಿ ನೀಡಿ ದಿಕ್ಕು ತಪ್ಪಿಸುತ್ತಿರುವ ಈ ಕ್ಷೇತ್ರದ ಬಿಜೆಪಿ ನಾಯಕರಿಗೆ ಮಾತನಾಡುವ ಅರಿವಿಲ್ಲ. ಎಷ್ಟೇ ತಪ್ಪು ಮಾಹಿತಿ ನೀಡಿದರು ಸಹ ಜನ ಮರವಾಗುವುದು ಸಾಧ್ಯವಿಲ್ಲ ಎಂದು ಕುಕನೂರು ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಸಂಗಮೇಶ್ ಗುತ್ತಿ ಅವರು ತಿಳಿಸಿದರು. ಮರುಳ ಗ್ರಾಮದಲ್ಲಿ ನಿರ್ಮಿಸಿರುವ ಜಾಕ್ವೆಲ್ ನಿಂದ ಇತ್ತೀಚೆಗೆ ಯಲಬುರ್ಗಾ ತಾಲೂಕಿನ ಕಲಾಲಬಂಡಿ ಕೆರೆಗೆ ನೀರನ್ನು ಸರಬರಾಜು ಮಾಡಲಾಗಿದ್ದು ಈ ಕೆಲಸವು ಬಸವರಾಜ ರಾಯರೆಡ್ಡಿ ಅವರು ಕ್ಷೇತ್ರದ ಶಾಸಕರಾಗಿದ್ದಾಗ ಮಂಜೂರು ಮಾಡಲಾದ ಯೋಜನೆ ಮತ್ತು ಅನುದಾನದಿಂದ ಸಾಧ್ಯವಾಗಿರುತ್ತದೆ. ಇದೇ ವಿಷಯವನ್ನು ನಾವೇ ಮಾಡಿದ್ದು ಎಂದು ಕ್ಷೇತ್ರದ ಭಾರತೀಯ ಜನತಾ ಪಕ್ಷದ ಮುಖಂಡರು ಹೇಳಿಕೊಳ್ಳುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ಮುಂದಾಗಿದ್ದಾರೆ, ಅವರು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಹೇಳಿದರು. ಮಾಜಿ ಸಚಿವರು ಆದ ಬಸವರಾಜ ರಾಯರೆಡ್ಡಿ ಅವರು ದೂರದೃಷ್ಟಿಯುಳ್ಳ ಜನನಾಯಕ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು ಅವರ ಮುಂದಾಲೋಚನೆಯ ಫಲವಾಗಿ ಇತ್ತೀಚೆಗೆ ಕಲಾಲಬಂಡಿ ಕೆರೆಗೆ ಕೃಷ್ಣಯ ನೀರು ಸರಬರಾಜು ಆಗಿರುತ್ತದೆ. ದಿನಹ ಇದರಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರ ದಾಗಲಿ ಹಾಲಿ ಸಚಿವರಾದ ಆಗಲಿ ನಯಾಪೈಸೆಯಷ್ಟೂ ಕೆಲಸ ಇರುವುದಿಲ್ಲ.ವಿಷಯಕ್ಕೆ ಪೂರಕವಾಗಿ ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ದು, ಭಾರತೀಯ ಜನತಾ ಪಕ್ಷದ ಮುಖಂಡರಲ್ಲಿ ಸಹ ಯಾವುದೇ ತರಹದ ದಾಖಲೆಗಳಿದ್ದರೆ ತಾವು ಮುಕ್ತವಾಗಿ ಸಾರ್ವಜನಿಕರೆದುರು ಚರ್ಚೆಗೆ ಸಿದ್ಧ ಎಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು ಸಂಗಮೇಶ್ ಅಪ್ಪಯ್ಯ ಹಿರೇಮಠ ರಾಜಶೇಖರ ನಿಂಗೋಜಿ, ಅಪ್ಪಣ್ಣ ಜೋಷಿ ಗುನ್ನಾಳ ಶಿವನಗೌಡ ದಾನರೆಡ್ಡಿ , ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ, ಕುಕನೂರ್, ರೈಮಾನ್ ಸಾಬ್‌ಮನ್‌ನವರ್.ಈಶ್ವರ ಮಾಳಗಿ, ಮಲ್ಲಣ್ಣ ಜಕ್ಕಲಿ, ಭೀಮಣ್ಣ ನಡು ಲಮನಿ, ಮಂಜು ಯಡಿಯಾಪುರ, ಮುತ್ತಣ್ಣ ರಾಜೂರ್, ಪ್ರಶಾಂತ್ ರಾಟಿಮನಿ, ಗವಿಸಿದ್ದಪ್ಪ ಶಲುಡಿ, ಹಾಗೂ ಇನ್ನಿತರ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಭಾಗವಹಿಸಿದರು.
ವರದಿ – ಹುಸೇನಬಾಷಾ ಮೊತೇಖಾನ್