ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವುದರ ಮೂಲಕ ಅಂಬೇಡ್ಕರ್ ಜಯಂತಿ ಆಚರಣೆ,,,,,,
ಚಿಕ್ಕಬಳ್ಳಾಪುರ: ಸ್ವಚ್ಚ ಗ್ರಾಮ ಯೋಜನೆಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ಹಳ್ಳಿ ಮಂಚನಬಲೆ ಗ್ರಾಮದಲ್ಲಿ ದಿವಂಗತ ಗಂಗಪ್ಪ ಬುರೆಪ್ಪ ಅವರ ಸ್ಮರಣಾರ್ಥ ನೂತನವಾಗಿ ವಕೀಲ ವೃತ್ತಿ ಜೀವನ ಆರಂಭಿಸಿದ ಯುವ ಚೇತನ,ಉಪನ್ಯಾಸಕ ,ದಲಿತ ಯುವಕರ ಮಾರ್ಗದರ್ಶಕ,ಮಂಚನಬಲೆ ಗ್ರಾಮದ ದಲಿತ ಕುಟುಂಬದ ಮೊದಲ ವಕೀಲ ಬಿ. ಗಂಗರಾಜು ಅವರು ತಮ್ಮ ಸ್ವಂತ ಮನೆಯನ್ನೇ ಡಾ. ಬಿ.ಆರ್.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವನ್ನಾಗಿ ಸ್ಥಾಪನೆ ಮಾಡುವುದರ ಮೂಲಕ ಅಂಬೇಡ್ಕರ್ ಜಯಂತಿ ಯನ್ನೂ ಆಚರಣೆ ಮಾಡಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿ.ಗಂಗರಾಜು,ನಮ್ಮ ಜನಾಂಗದಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಯೊಬ್ಬರೂ ಉನ್ನತ ಹುದ್ದೆಗೆ ನೇಮಕ ಆಗಬೇಕು,ಅಂಬೇಡ್ಕರ್ ಅವರ ಜೀವನ ಚರಿತ್ರೆ,ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂತೆ ಅಧ್ಯಯನಶೀಲತೆ,ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉನ್ನತ ಸ್ಥಾನದಲ್ಲಿ ನಿಲ್ಲಬೇಕು.ನಮ್ಮ ಅಧ್ಯಯನ ಕೇಂದ್ರದಲ್ಲಿ ಅಭ್ಯಾಸ ಮಾಡುವ ಪ್ರತಿಯೊಬ್ಬರೂ ಒಂದನೇ ತರಗತಿಯಿಂದ ಪದವಿ ಹಂತದವರೆಗೂ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಬೇಕಾಗುವ ಪುಸ್ತಕಗಳು,ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಬೇಕಾಗುವ ಅಧ್ಯಯನ ಸಾಮಗ್ರಿಗಳನ್ನು ಜೊತೆಗೆ ಪ್ರತಿದಿನ ಮುಂಜಾನೆ ದಿನಪತ್ರಿಕೆಗಳು,ಮಾಸ ಪತ್ರಿಕೆಗಳನ್ನು ಸಹ ಒದಗಿಸಲಾಗುವುದು. ವಿದ್ಯೆಯು ಒಂದು ಕದಿಯಲಾರದ ವಸ್ತು ಇದನ್ನು ಪ್ರತಿಯೊಬ್ಬರೂ ಸಂಪಾದನೆ ಮಾಡಬಹುದು ಶ್ರದ್ಧೆ,ಆಸಕ್ತಿ ಇರಬೇಕು ಎಂದು ಹೇಳಿದರು . ಇದೇ ಸಂದರ್ಭದಲ್ಲಿ ಚಂದನ ವಾಹಿನಿಯ ಜಿಲ್ಲಾ ವರದಿಗಾರರಾದ ಚಂದ್ರಶೇಖರ್ ಮಾತನಾಡಿ,
ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಜೀವನದ ಇತಿಹಾಸವನ್ನು ಸರಳವಾಗಿ ಹೇಳುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು,ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ, ಏಕತೆ, ಐಕ್ಯತೆ, ಸಮಗ್ರತೆ,ಒಗ್ಗಟ್ಟು,ಭಾವೈಕ್ಯತೆ ಇವೆಲ್ಲವುಗಳನ್ನು ನಾವು ಅಳವಡಿಸಿಕೊಳ್ಳಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಅಧ್ಯಯನ ಮಾಡಿಕೊಂಡರೆ ಇಡೀ ಜೀವನ ಸಾರ್ಥಕತೆ ಹೊಂದುತ್ತದೆ.ಅಂಬೇಡ್ಕರ್ ಅವರು ಭಾರತದಲ್ಲಿ ಪ್ರಪ್ರಥಮವಾಗಿ ಭಾರತರತ್ನ ಪ್ರಶಸ್ತಿ ಪಡೆದವರಾಗಿದ್ದಾರೆ. ನಾವು ಅಂಬೇಡ್ಕರ್ ಅವರ ಮಕ್ಕಳು, ಮೊಮ್ಮಕ್ಕಳಾಗಿ ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯುವ ಗುರಿಯನ್ನು ತಲುಪಲು ಆಳವಾದ ಅಧ್ಯಯನ ಮಾಡಬೇಕು. ಈ ದೇಶದ ಅತ್ಯುನ್ನತ ನಾಗರಿಕ ಹುದ್ದೆಗಳಿಗೆ ಪ್ರಪಂಚದ ನಾನಾ ದೇಶಗಳನ್ನು ಸುತ್ತಿ ಅಖಂಡ ಭಾರತಕ್ಕೆ ಸಂವಿಧಾನವನ್ನು ರಚಿಸಿದ್ದಾರೆ ಎಂದು ತಿಳಿಸಿದರು. ಪತ್ರಕರ್ತ ಗಂಗುಲಪ್ಪ ಅವರು ಮಾತನಾಡಿ, ವಿಧ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಅಧ್ಯಯನ ಕೇಂದ್ರಗಳಲ್ಲಿ ಒದಗಿಸಿಕೊಂಡರೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ ಎಂದರು.ಮಕ್ಕಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಾರುವ ಹಾಡುಗಳನ್ನು ಹೇಳಿಕೊಡುವ ಮೂಲಕ ಅಂಬೇಡ್ಕರ್ ಅವರ ಸಾಧನೆಗಳನ್ನು ತಮ್ಮ ಹಾಡುಗಳಿಂದಲೆ ತಿಳಿಸಿಕೊಟ್ಟರು.ಮಕ್ಕಳಿಗೆ ಸತ್ಯ,ಸಮಾನತೆ,ಶಿಸ್ತುಗಳನ್ನು ಹೇಗೆ ಪಾಲಿಸಬೇಕು ಎಂದು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಿಕ್ಷಕರು,ಯುವಕರ ಕಣ್ಮಣಿ,ಬುದ್ಧ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡ ಬುದ್ಧರ ಅನುಯಾಯಿ,ನಮ್ಮೆಲ್ಲರ ಮಾರ್ಗದರ್ಶಿ,ಹಿರಿಯ ಸಹೋದರರು ,ನಮ್ಮ ಮಂಚನಬಲೆ ದಲಿತ ಸಮುದಾಯದಲ್ಲಿ ಮೊಟ್ಟ ಮೊದಲ ಡಾಕ್ಟರೇಟ್ ಪದವಿ ಪಡೆದ ಟಿ. ಶಿವಪ್ಪ ಅವರು ಮಾತನಾಡಿ,ನಮ್ಮ ದಲಿತ ಸಮುದಾಯದ ಮಕ್ಕಳು ಈ ಅಧ್ಯಯನ ಕೇಂದ್ರದಲ್ಲಿ ಅಭ್ಯಾಸ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಮಕ್ಕಳು ಶ್ರದ್ದೆಯಿಂದ ತಮ್ಮ ಅಮೂಲ್ಯವಾದ ಸಮಯವನ್ನು ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಅವರಿಗೆ ಮೂಲಭೂತವಾಗಿ ಅಧ್ಯಯನಕ್ಕೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಗಳನ್ನು ಒದಗಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಜೊತೆಗೆ ಉನ್ನತ ವ್ಯಾಸಂಗಕ್ಕೆ ,ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಸಹಾಯ ಹಸ್ತ, ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು. ನಮ್ಮ ಮಾತೃ ಹೃದಯಿ ಶಿಕ್ಷಕಿ,ಸರಳ ಸಜ್ಜನಿಕೆಯ ಹೃದಯವಂತಿಕೆ ಶಿಕ್ಷಣ ಪ್ರೇಮಿ,ಪರಿಸರ ಪ್ರೇಮಿ,ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಅನುಯಾಯಿ, ವೈಚಾರಿಕ ಮನೋಭಾವ, ಚಿಂತನಾ ಶೀಲಾ ಸ್ವಭಾವ, ಸದಾ ಕ್ರಿಯಾಶೀಲ ಚಟುವಟಿಕೆಗಳಿಗಾಗಿ ಹೆಸರಾದ ನಮ್ಮೆಲ್ಲರ ಅಕ್ಷರದ ಅಕ್ಕ ಶ್ರೀಮತಿ ಸರಸ್ವತಿ ಗಂಗರಾಜು ಅವರು ಮಾತನಾಡಿ, ಮಕ್ಕಳು ಸದಾ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಉತ್ತಮವಾದ ಮೌಲ್ಯಗಳನ್ನು ಪಡೆಯಲು ಸಾಧ್ಯ.ವಿಧ್ಯಾರ್ಥಿಗಳ ಆಲೋಚನೆಗಳನ್ನು ,ಆದರ್ಶಗಳನ್ನು ಬದಲಾವಣೆಗೆ ಒಳಪಡಿಸಿಕೊಳ್ಳಬೇಕೆಂದರೆ ಅವರಿಗೆ ಉತ್ತಮವಾದ ವಾತಾವರಣ ಸೃಷ್ಟಿ ಮಾಡಿಕೊಡಬೇಕು ಇದನ್ನರಿತು ನಾವು ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಗಂಗರಾಜು ಅವರ ತಾಯಿ ಶ್ರೀಮತಿ ಸತ್ಯಮ್ಮ ಅವರು ಮಾತನಾಡಿ,ಮಕ್ಕಳು ಕಷ್ಟಪಟ್ಟು ಓದಿ ,ಎಲ್ಲ ಮಕ್ಕಳು ಈ ಗ್ರಂಥಾಲಯದ ಉಪಯೋಗ ಮಾಡಿಕೊಂಡು, ಉತ್ತಮ ಆಲೋಚನೆ ರೂಪಿಸಿಕೊಂಡು ಅಧ್ಯಯನ ಮಾಡಿ ಒಳ್ಳೆಯ ಸಾಧನೆಯನ್ನು ಮಾಡಿ ಎಂದರು. ಆಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆಶಾ ಮಂಚನಬಲೆ ಅವರು ಮಾತನಾಡಿ, ಅಂಬೇಡ್ಕರ್ ಅವರನ್ನು ಕೇವಲ ಪುಸ್ತಕಗಳಲ್ಲಿ ನೋಡುವುದು,ಅವರ ಬಗ್ಗೆ ಭಾಷಣಗಳನ್ನು ಮಾಡುವುದು ಮಾತ್ರವಲ್ಲ,ಮೂರ್ತಿ ಪೂಜೆ ಮಾಡಿ ಅವರಿಗೆ ಆಗೌರವವನ್ನು ತೋರದೇ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಬದುಕು ಬರಹಗಳನ್ನು ಅಧ್ಯಯನ ಮಾಡಿ ಅವರ ಹಾದಿಯಲ್ಲಿ ನಾವು ಸಾಗಿ ನಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ ಅವರನ್ನು ಪ್ರಗತಿ ಪಥದತ್ತ ಸಾಗಲು ಅನುವು ಮಾಡಿಕೊಡಬೇಕು.ನಮ್ಮ ವಿಧ್ಯಾರ್ಥಿಗಳಿಗೆ ಉತ್ತಮವಾದ ಮೌಲ್ಯಗಳನ್ನು ಪಡೆಯಲು,ಅಧ್ಯಯನ ಕೇಂದ್ರವನ್ನು ತೆರೆದಿದ್ದು ಶಿಕ್ಷಣಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡಿರುವುದು ಸಂತಸದ ವಿಷಯ ಇದನ್ನು ಪ್ರತಿಯೊಬ್ಬರೂ ಒಳ್ಳೆಯರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಹೇಳಿದರು.ಸದರಿ ಕಾರ್ಯಕ್ರಮದಲ್ಲಿ ಶಂಕರಪ್ಪ, ಮರಿಯಪ್ಪ, ಗಂಗರಾಜು, ಯುವಕರಾದ ಮೋಹನ್, ಗಂಗರಾಜು, ಗಂಗಾಧರ್, ಪ್ರೇಮ್,ವೈಷ್ಣವಿ,ವೈಶಾಲಿ,ಮುಂತಾದ ಮಕ್ಕಳು ಪಾಲ್ಗೊಂಡಿದ್ದರು. ವರದಿ – ಸಂಪಾದಕೀಯ