ಬಡ ಸೊಂಕಿತರ ಬೆನ್ನಿಗೆ ನಿಂತ ಗಂಗಾವತಿಯ ಉದ್ಯಮಿ ಶ್ರೀ ಕೆ ಕಾಳಪ್ಪ
ಗಂಗಾವತಿಯಲ್ಲಿ ಇತ್ತಿಚಿನ ದಿನಗಳಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ನಿ ಕೊರತೆ ಕಾಣ್ತಾಯಿದೆ ಹಾಗೂ ಬೆಡ್ ಬೇಕಾದರೆ ಹಾಗೂ ಇನ್ನಿತರ ತುರ್ತು ಚಿಕಿತ್ಸೆ ಬೇಕಾದರೆ ದುಡ್ಡು ಇದ್ದವರಿಗೆ ಮಾತ್ರ ಬೆಡ್ ಅನ್ನುವ ವಿಷಯ ಎಲ್ಲರಿಗೂ ಗೊತ್ತೆ ಇದೆ ಆ ನಿಟ್ಟಿನಲ್ಲಿ ಗಂಗಾವತಿ ತಾಲ್ಲೂಕಿನ ತಾಲೂಕ ಆಸ್ಪತ್ರೆಗೆ ದಾಖಲಾಗುವ ಕೊವಿಡ ರೋಗಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸರಿ ಸುಮಾರು 50 ರಿಂದ 60 ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಿಸಿರುವದು ಬೆಳಕಿಗೆ ಬಂದಿದೆ ಕೊವಿಡ ರೋಗಿಗಳಿಗೆ ಒಬ್ಬರಿಗೆ ಸಿಟಿ ಸ್ಕ್ಯಾನ್ ಮಾಡಲು ವೆಚ್ಚ 4 ರಿಂದ 5 ಸಾವಿರ ರೂ ತಗಲುತ್ತದೆ ಇಂತಹ ಸಂದರ್ಭದಲ್ಲಿ ಮಾನವಿತೆಯ ಗುಣಗಳನ್ನು ಅಳವಡಿಸಿ ಕೊಂಡು ಮಾನವ ಮಾನವನಿಗೆ ಸಹಾಯ ಮಾಡುವದು ಮಾನವಿತೆಯ ಗುಣ ಧರ್ಮ ಎನ್ನುತ್ತಾ ಸಹಾಯ ಮಾಡಿದ್ದಾರೆ ಒಟ್ಟಿನಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಜಿಲ್ಲೆಯಲ್ಲಿ ಗ್ರಾಮಗಳಲ್ಲಿ ಇವರಂತೆ ಬಡ ರೋಗಿಗಳಿಗೆ ಸಹಾಯ ಕರುಣೆ ತೋರಿದರೆ ಬಡ ರೋಗಿಗಳಿಗೆ ನೆರವಾಗಲಿದೆ. ವರದಿ – ಅಮಾಜಪ್ಪ ಹೆಚ್.ಜುಮಲಾಪೂರ