ಬೇಧವಿಲ್ಲದ ನಾಡು ನಮ್ಮದು, ಜೊತೆಗೂಡಿ ಬಂದ ಹಬ್ಬಗಳೆ ಸಾಕ್ಷಿ,,,,

Spread the love

ಬೇಧವಿಲ್ಲದ ನಾಡು ನಮ್ಮದು, ಜೊತೆಗೂಡಿ ಬಂದ ಹಬ್ಬಗಳೆ ಸಾಕ್ಷಿ,,,,

ಸಮಸ್ತ ನಾಡಿನ ಜನತೆ ಇಂದು ಕೂಡಿ ಬಾಳಬೇಕು ಇರುವತನಕ ನಗು/ನಗುತ, ಕೂಡಿ ಬಾಳಿದರೆ ಸ್ವರ್ಗ ದೊರೇತಂತೆ,ಈ ಭೂಮಿಮೇಲೆ ಇರುವುದುಮೂರು ದಿನ ಯಾಕೆ ಈ ದ್ವೇಶ, ಹಸೂಯೆ, ಅಂಹಕಾರ, ಇದನೆಲ್ಲ ತೊರೇದು ಬಾಳು ಜನರ ಜೊತೆ, ನಾನು/ನೀನು ಎಂಬುವುದು ಬೀಡು, ಭೇಧವಿಲ್ಲದೆ ದೊಡ್ಡ ಹಬ್ಬಗಳು ಜೋತೆಗೂಡಿ ಬಂದಿವೆ, ಈ ಉದಾಹರಣೆ ಸಾಕು ಮನುಜ ಕೂಡಿ ಬಾಳು ಈ ಉಸಿರು ಇರುವತನಕ,,  ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಮಾದರಿಯನ್ನು – ಸಂಸತ್ತಿನ ಪರಿಕಲ್ಪನೆಯನ್ನು ತೋರಿಸಿಕೊಟ್ಟವರು ಬಸವಣ್ಣ. ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹಗಲಿರುಳು ಶ್ರಮ ವಹಿಸಿದ ಸಾಮಾಜಿಕ ಹರಿಕಾರ, ಸಮಾಜ ಸುಧಾರಕರು ಮಾಹಾಮಾನವತಾವಾದಿ ಜಗಜ್ಯೋತಿ ಶ್ರೀ ಮಹಾತ್ಮಾ ಬಸವೇಶ್ವರ ಜಯಂತಿಯಂದು ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಹಾರ್ದಿಕ ಶುಭಾಶಯಗಳು.

ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ಜಗತ್ತು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ, ಸಂದೇಶಗಳು ಸೂರ್ಯ ಚಂದ್ರ ಇರುವವರೆಗೂ ಅಜ್ರಾಮರ. ಬಸವಣ್ಣನವರ ಪ್ರತಿಯೊಂದು ವಚನಗಳು ಎಲ್ಲರಿಗೂ ದಾರಿದೀಪ. ಕಾಯಕವೇ ಕೈಲಾಸ, ಜೊತೆಗೆ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಶಾಂತಿ, ಸಹನೆ, ತ್ಯಾಗ, ಸಹೋದರತ್ವದ ಬಾಂಧವ್ಯವನ್ನು ಸಾರುವ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬ ದೇಶದ  ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ ಮತ್ತು ಎಲ್ಲರಿಗೂ ಸುಖ, ಶಾಂತಿ,ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಜಾತಿಯಲ್ಲಿ ವಿಷ ಬೀಜ ಬಿತ್ತುವ ಕುಂತಂತ್ರಿಗಳಿಗೆ ನಾಚಿಗೆಯಾಗಬೇಕು, ಜಾತಿ,ಧರ್ಮ, ಬೇಧ ಭಾವವಿಲ್ಲದೆ ನಾಡ ಹಬ್ಬಗಳೆ ಬೇರೆತು ಬಂದಿದ್ದಾವೆ, ಇದನ್ನು ನೋಡಿಯಾದರು ಕಲಿಯಬೇಕು ಈ ಜನತೆ, ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ರಂಜಾನ ಹಬ್ಬದ ಹಾರ್ದಿಕ ಶುಭಾಶಯಗಳು…

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *