ವಿಶೇಷಚೇತನರಿಗೆ ಜಿಲ್ಲಾ ಘಟಕ ಸಕ್ಷಮ. ಶಿವಮೊಗ್ಗದ ವತಿಯಿಂದ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ (UDID) ಕಾರ್ಡ್ ಮಾಡಿಸಿ ಕೊಡಲಾಯಿತು,,

Spread the love

ವಿಶೇಷಚೇತನರಿಗೆ ಜಿಲ್ಲಾ ಘಟಕ ಸಕ್ಷಮ. ಶಿವಮೊಗ್ಗದ ವತಿಯಿಂದ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ (UDID) ಕಾರ್ಡ್ ಮಾಡಿಸಿ ಕೊಡಲಾಯಿತು,,

02/05/2022 ಸೋಮವಾರ ಅಂದರೆ ನಿನ್ನೆ ಎರಡನೇ ಮುಖ್ಯ ರಸ್ತೆ , ನೇತಾಜಿ ಸರ್ಕಲ್ ಹತ್ತಿರ , ವಿಜಯನಗರ , ಶಿವಮೊಗ್ಗ -577 205 ದಿಂದ ಬಿ.ಎಸ್ ಸತೀಶ್ ಎಂಬ ವಿಶೇಷಚೇತನರು ಜಿಲ್ಲಾ ಘಟಕ ಸಕ್ಷಮ . ಶಿವಮೊಗ್ಗ ಕ್ಕೆ ಬೇಟಿ ನೀಡಿ.ನಾನು ಅಂಗವಿಕಲ ( ವಿಕಲಚೇತನ ವ್ಯಕ್ತಿಯಾಗಿದ್ದು 50 / . ಅಂಗವಿಕಲತೆ ಇರುತ್ತದೆ . ನಾನು ಕಳೆದ ವರ್ಷ ಅಂದರೆ 20/09/2021 ನೇ ತಾರೀಖಿನಂದು UDID ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುತ್ತೇನೆ . ವೈದ್ಯರು ಪರೀಕ್ಷೆ ಮತ್ತು ಶಿಫಾರಸು ಇರುವ ದಾಖಲೆಯನ್ನು ( ಸರ್ಟಿಫಿಕೇಟ್ ) ಸಹ ಸಲ್ಲಿಸಿರುತ್ತೇನೆ . ಆದರೆ ಏಳು ತಿಂಗಳು ಕಳೆದರೂ ಇದುವರೆಗೂ ನನಗೆ UDID ಕಾರ್ಡ್ ಬಂದಿಲ್ಲ.ತಮ್ಮ ಈ ಸಕ್ಷಮ ಸಂಸ್ಥೆಯ ಮೂಲಕ ದಯವಿಟ್ಟು ಈ ವಿಷಯವಾಗಿ ನನಗೆ ಸಹಾಯ ಮಾಡಿಕೊಡಬೇಕಾಗಿ ಸವಿನಯಾ ಮನವಿ ಎಂದು ಜಿಲ್ಲಾ ಘಟಕ ಸಕ್ಷಮ . ಶಿವಮೊಗ್ಗಕ್ಕೆ ಮನವಿಯನ್ನು ಸಲ್ಲಿಸಿದರು . ಈ ಮನವಿಯನ್ನು ಸ್ವೀಕರಿಸಿದ  ಸಕ್ಷಮ ಸಂಸ್ಥೆ ಅತೀ ಶೀಘ್ರದಲ್ಲಿಯೇ ತಮಗೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ( UDID ) ಕಾರ್ಡ್ ನ್ನೂ ಕೊಡಿಸಿಕೊಡುವುದಾಗಿ ಭರವಸೆಯನ್ನು ಕೊಟ್ಟಂತೆ 03/ 05/2022 ಮಂಗಳವಾರ ಇವತ್ತು ಒಂದೇ ದಿನದಲ್ಲೇ ಈ ವಿಶೇಷಚೇತನರಿಗೆ ಜಿಲ್ಲಾ ಘಟಕ ಸಕ್ಷಮ. ಶಿವಮೊಗ್ಗದ ವತಿಯಿಂದ ವೈದ್ಯಕೀಯ ಮಾಸಾಶನ ದ ಪ್ರಮಾಣ ಪತ್ರ ( UDID ) ಕಾರ್ಡ್ ನ್ನೂ ಮಾಡಿಸಿ ಕೊಡಲಾಯಿತು . ಸಕ್ಷಮ ಭಾರತ್ ಸಮರ್ಥ್ ಭಾರತ್,

ವರದಿ -ಸಂಪಾದಕೀಯ

Leave a Reply

Your email address will not be published. Required fields are marked *