ಐನೋರಹಳ್ಳಿ ಮಲ್ಲೇಶ್ ರೈತನ‌ ಮನೆಗೆ ಬೇಟಿ  ನೀಡಿ ರೈತ ಕುಟುಂಬದಕ್ಕೆ ದೈರ್ಯತುಂಬಿದರು,,

Spread the love

ಐನೋರಹಳ್ಳಿ ಮಲ್ಲೇಶ್ ರೈತನ‌ ಮನೆಗೆ ಬೇಟಿ  ನೀಡಿ ರೈತ ಕುಟುಂಬದಕ್ಕೆ ದೈರ್ಯತುಂಬಿದರು,,

ಹೌದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪ ಐಕನಹಳ್ಳಿ ಗ್ರಾಮದ ರೈತ ಕುಟುಂಬವಾದ ಇಂದ್ರಮ್ಮ, ಬೋರೇಗೌರ ರವರ ಪುತ್ರ ಸಚಿನ್ (26)  ಎಂಬಾತ ಕಳೆದ ಮೂರು ನಾಲ್ಕು ತಿಂಗಳ ಇಂದ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ  ಸಂರ್ಭದಲ್ಲಿ ಆಕಸ್ಮಿಕವಾಗ ವಿದ್ಯುತ್ ತಗಲಿ ಸಾವನ್ನಪಿದ್ದು ಕುಟುಂಬದಕ್ಕೆ ಆಸರೆ ಇಲ್ಲದಂತಾಗಿತ್ತು ಇದರ ಬಗ್ಗೆ ಗ್ರಾಮಸ್ಥರು  ಎ.ಪಿ.ಎಂ.ಸಿ  ಮಾಜಿ ಅಧ್ಯಕ್ಷ ರಾದ ಐನೋರಹಳ್ಳಿ‌ ಮಲ್ಲೇಶ್ ರವರಿಗೆ ಮಾಹಿತಿ ತಿಳಿಸಿದ್ರು ಇದಕ್ಕೆ ಸ್ಪಂದಿಸಿ ಕೋಡಲೇ ಕೃಷ್ಣರಾಜಪೇಟೆ ತಾಲ್ಲೂಕು ಎ.ಪಿ.ಎಂ.ಸಿಯ ಸರ್ವ ಸದಸ್ಯರ ಸಹಕಾರದೊಂದಿಗೆ ರೈತ ಸಂಜೀವಿನಿ ಯೋಜನೆಯಡಿ  ಒಂದು ಲಕ್ಷ ಪರಿಯಾರ ವಿತರಣೆ ಮಾಡಲಾಯಿತು.. ನಂತರ ಮಾತನಾಡಿ ರಾಜ್ಯದೇ ಯಾವುದೇ ರೈತರು ಕೃಷಿ ಚಟುವಟಿಕೆ ಕೆಲಸ ಮಾಡುವಾಗ ರೈತ ಮೃತ ಪಟ್ಟರೆ  ರೈತ ಸಂಜೀವಿನಿ ಯೋಜನೆಯಡಿ ಪರಿಯಾರ ನೀಡಲಿದ್ದು ಮೊದಲಿಗೆ ಕಡ್ಡಾಯವಾಗಿ ಪೋಲೀಸ್ ಠಾಣೆಗೆ ದೂರು ದಾಖಲಿಸಬೇಕು ನಂತರ ಎ.ಪಿ.ಎಂ.ಸಿ ಅಧಿಕಾರಿಗಳಿಗೂ ಸಹ ದೂರು ದಾಖಲಿಸಿ ಎರಡೂ ಒಂದೇ ರೀತಿಯಲ್ಲಿ ಒಂದಾಣಿಕೆ ಆದ್ರೆ ಅಧಿಕಾರಿಗಳು ಪರಿಶೀಲಿಸಿ ಅರ್ಹ ಪಲಾನುಭಾವಿಗಳಿಗೆ ಪರಿಯಾರ  ನೀಡಲಾಗುವುದು ಎಲ್ಲಾ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ರು. ಇದೇ ಸಂರ್ಭದಲ್ಲಿ  ಕಳೆದ ಎ.ಪಿ.ಎಂ.ಸಿ ಚುನಾವಣೆಲ್ಲಿ  ಪಕ್ಷ ಬೇದ ಮರೆತು ಎಲ್ಲಾ ರೈತರು ಹೆಚ್ಚು ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ದು ಅಧ್ಯಕ್ಷರಾಗಿಯೂ ಆಯ್ಕೆ ಮಾಡಿದರು ಇಲ್ಲಿಗೆ ಐದು ವರ್ಷ ಪೂರ್ಣಗೊಂಡಿದ್ದು ನಮ್ಮ ಅವದಿಯಲ್ಲಿ ನನ್ನ‌ ಕೈಲಾದ ಸೇವೆಯನ್ನು ರೈತರಿಗೆ ಮಾಡಿದ್ದೇನೆ  ಎಲ್ಲಾ ರೈತರಿಗೂ, ಎಲ್ಲಾ ಪಕ್ಷದ ನಾಯಕರಿಗೂ, ಇಲ್ಲಿಯವರೆಗೂ ಸಹಕಾರ ನೀಡಿದ ಎಲ್ಲಾ ಮಾಧ್ಯಮದ ಸ್ನೇಹಿತರಿಗೂ ಧನ್ಯವಾದ ತಿಳಿಸಿದ್ರು.. ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್, ಹೋಬಳಿ ಅಧ್ಯಕ್ಷ ಕಾಯಿ‌ ಮಂಜೇಗೌಡ, ಐಕನಹಳ್ಳಿ  ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ, ಸದಸ್ಯ ಉದಯ್ ಕುಮಾರ್, ಕಿಕ್ಕೇರಿ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ, ಐಕನಹಳ್ಳಿ ಹಾಲಿನ ಡೈರಿ ಕಾರ್ಯದರ್ಶಿ ದೇವೇಗೌಡ, ಮುಖಂಡರಾದ ಸೊಳ್ಳೆರಪುರ ಸ್ವಾಮಿ, ಸುರೇಶ್, ಗುಂಡ, ಸೇರಿದಂತೆ ಮತ್ತಿತ್ತರರು ಇದ್ದರು…

ವರದಿ -ಮಹೇಶಶರ್ಮಾ

Leave a Reply

Your email address will not be published. Required fields are marked *