43 ಜನ ಬೆನ್ನು ಮುರಿತ ವಿಶೇಷಚೇತನರ ಪರವಾಗಿ ಸಕ್ಷಮ ಸಂಸ್ಥೆಯಿಂದ ಮನವಿ..
04/05/2022 ಬುಧವಾರ ಇವತ್ತು ಚನ್ನಹಳ್ಳಿ ಗ್ರಾಮ, ಆಯನೂರು (ಪೋಸ್ಟ್) ಶಿವಮೊಗ್ಗ (ತಾ) (ಜಿಲ್ಲೆ)ಯಿಂದ ವಿನಾಯಕ ಸಿ.ಸಿ ಎಂಬ ಬೆನ್ನು ಮುರಿತ ವಿಶೇಷಚೇತನರು ಜಿಲ್ಲಾ ಘಟಕ ಸಕ್ಷಮ . ಶಿವಮೊಗ್ಗ ಕ್ಕೆ ಬೇಟಿ ನೀಡಿ. ವಿನಾಯಕ ಸಿ.ಸಿ ಬೆನ್ನು ಮುರಿತ ವಿಶೇಷಚೇತನನಾದ ನಾನು 85 . ಅಂಗವಿಕಲತೆಯನ್ನು ಹೊಂದಿರುತ್ತೇನೆ. ಹಾಗೂ ನನಗೆ ಗೋತ್ತಿರುವಂತಹ ಮತ್ತು ನನ್ನ ಸಂಪರ್ಕದಲ್ಲಿ ಇರುವಂತಹ ಬೆನ್ನು ಮುರಿತ ವಿಶೇಷಚೇತನರು ಸುಮಾರು 45 ಜನಕ್ಕಿಂತ ಹೆಚ್ಚು ವಿಶೇಷಚೇತನರು ಸಂಪರ್ಕದಲ್ಲಿ ಇದ್ದಾರೆ. ಈಗ ಇರುವಂತಹ ವಿಶೇಷಚೇತನರಲ್ಲಿ 21 ಬಗೆಯ ವಿಶೇಷಚೇತನರು ಇರುವುದನ್ನು ನಾವು ನೋಡಿದ್ದೇವೆ. ಆದರೆ ಈ 21 ಬಗೆಯ ವಿಶೇಷಚೇತನರಿಗಿಂತ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಈ ಬೆನ್ನು ಮುರಿತ ವಿಶೇಷಚೇತನರಲ್ಲಿ ಅತಿ ಹೆಚ್ಚು ಸಮಸ್ಯೆ ಇದೆ. ಬೆನ್ನು ಮುರಿತ ವಿಶೇಷಚೇತನರು ಹೇಗೆ ಎಂದರೆ; 1) ಮರದ ಮೇಲಿಂದ ಬಿದ್ದಾಗ 2)ಅಪಘಾತದಲ್ಲಿ 3)ವಿದ್ಯುತ್ ಕಂಬಗಳ ಮೇಲಿಂದ ಬಿದ್ದಾಗ 4) ಟಿ.ಬಿ ( ಫೈನಲ್ ) 5) ಬಾರವಾದ ವಸ್ತು ಮೈಮೇಲೆ ಬಿದ್ದಾಗ 6) ಕಟ್ಟಡ ಮೇಲಿಂದ ಕೆಳಕ್ಕೆ ಬಿದ್ದಾಗ ಇದರಿಂದಾಗಿ ಬರುವಂತಹ ಸಮಸ್ಯೆಗಳು ಸಮಸ್ಯೆಗಳು 1) ಸೊಂಟ ಮತ್ತು ಕುತ್ತಿಗೆ ಬಾಗದಿಂದ ಸ್ಪರ್ಷ ಇರುವುದಿಲ್ಲ 2).ಚಲನವಲನ ಇರುವುದಿಲ್ಲ 3) ಒತ್ತಡದಿಂದ ಗಾಯ 4) ಮಲ ಮೂತ್ರ ಸ್ವಾಧೀನದಲ್ಲಿ ಇರುವುದಿಲ್ಲ 5).90 ‘/. ಹಾಸಿಗೆಯನ್ನೇ ಅವಲಂಬಿಸಿರುತ್ತಾರೆ 6) 100 /. ಇನ್ನೊಬ್ಬರನ್ನು ಅವಲಂಬಿತರಾಗುತ್ತಾರೆ ಈಷ್ಟೇಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವಂತಹ ಬೆನ್ನು ಮುರಿತ ವಿಶೇಷಚೇತನರಿಗೆ ಬೇಕಾಗುವ ಸೌಲಭ್ಯಗಳು ಹೀಗಿವೆ. 1).ನೀರಿನ ಅಥವಾ ಗಾಳಿ ಹಾಸಿಗೆ 2)ಕುಳಿತುಕೊಳ್ಳಲು ಮೆತ್ತನೆಯ ಗಾಳಿದಿಂಬು 3) ಗಾಲಿಕುರ್ಚಿ (ವೀಲ್ವೇರ್) 4)ಪೋರ್ಟೆಬಲ್ ಕಮೋಡ್ 5 ) .ಪೊಲಿಸ್ ಕ್ಯಾಥೆಟರ್ ( ಬಳಸಿ ಬಿಸಾಡುವಂತದ್ದು) (Dolly’s catheter Disposable) 6) 23ee (Gloves Disposable) 7) .ಕಾಂಡೊಮ್ಸ್- Nirodh for Male patients 8) .ಸೋಂಕು ನಿರೋಧಕ ಔಷಧಿ ಹಾಗೂ ದ್ರಾವಣಗಳು 9) ಅನೆಸ್ತಟಿಕ್ ಜೆಲ್ಲಿ (Jelly) 10) ರೋಗ ನಿರೋಧಕ ಮಾತ್ರೆಗಳು (Antibiotic Drugs) 11)ಇನ್ನಿತರ ವಸ್ತುಗಳನ್ನು (ಅವಶ್ಯಕತೆಗೆ ತಕ್ಕಂತೆ) ಈ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಕೊಡುವ ಮಂಜೂರಾತಿ ಆದೇಶ ಇದ್ದರು ಕೂಡ ಕೊಡುತ್ತಿಲ್ಲ.ಆದರೆ ಬೆರಳೆಣಿಕೆಯಷ್ಟು ಕೆಲವು ಜಿಲ್ಲೆಗಳಲ್ಲಿ ಒದಗಿಸುತ್ತಿದ್ದಾರೆ.ಆದರೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಈ ಸೌಲಭ್ಯಗಳನ್ನು ಮರೆಮಾಚುತ್ತಿದ್ದಾರೆ . ಹಾಗೂ ಈ ಸೌಲಭ್ಯಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಬೇಸರ ಸಂಗತಿಯಾಗಿದೆ.ಹಾಗಾಗಿ ದಯಮಾಡಿ ಇದಕ್ಕೆ ಸಂಬಂಧಿಸಿದಂತಹ ಇಲಾಖೆಯ ಗಮನಕ್ಕೆ ತಂದು ಈ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ನೀಡಿ . ತಮ್ಮ ಈ ಸಕ್ಷಮ ಸಂಸ್ಥೆಯ ಮೂಲಕ ನಮಗೆ ಈ ಎಲ್ಲಾ ಸೌಲಭ್ಯಗಳನ್ನು ಕೊಡಿಸಿಕೊಡಬೇಕಾಗಿ ತಮ್ಮಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನನಗೆ ಸಂಪರ್ಕದಲ್ಲಿ ಇರುವಂತಹ 43 ಜನ ಬೆನ್ನು ಮುರಿತ ವಿಶೇಷಚೇತನರ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿಯನ್ನು ಸಲ್ಲಿಸಿದರು.
ವರದಿ – ಸಂಪಾದಕೀಯ