ಕುಡ್ಲೀಗಿ ತಾಲೂಕಿನ ಬಿಬಿತಾಂಡ:ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ-

Spread the love

ಬಿಬಿತಾಂಡ:ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಬಂಡೇ ಬಸಾಪುರ ತಾಂಡದಲ್ಲಿ ಇತ್ತಿಚೆಗೆ 19ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು.‍ ಅಗತ್ಯ  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳುವಂತೆ,ಶಿವಪುರ ಗ್ರಾಮದ ಸಿ.ಎಮ್.ಎಲ್.ಪಿ ಅಂಜಲಿ,ಎ.ಎನ್ ಎಮ್.ಶೈಲಾರವರು ಗ್ರ‍ಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ. ತರಾಟೆಗೆ ತೆಗೆದುಕೊಂಡ ತಾಂಡಾದವರು-ಗ್ರಾಮದಲ್ಲಿ ಹತ್ತಾರು ಕೋವಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು,ಈ ವರೆಗೂ ಗ್ರಾಮಕ್ಕೆ ಬಾರದ ಪಿಡಿಓ ಮಂಗಳ ಗೌರಿಯರನ್ನು.ತಾಂಡದ ಮುಖಂಡರು ಸಾಕಷ್ಟು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ. ಗ್ರಾಮದ ಯುವಕರೇ ಸ್ವತಃ ಹಣ ವ್ಞ ಮಾಡಿ ಗ್ರಾಮವನ್ನ ಸ್ಯಾನಿಟೇಷನ್‌ ಮಾಡಿಸಿದ್ದಾರೆ,ಕೆಲವರಿಗೆ ಮಾಸ್ಕ್ ವಿತರಿಸಿದ್ದಾರೆ ಆದರೆ ಗ್ರ‍ಾಪಂ ನಿಂದ ಯಾವುದೇ ಕ್ರಮಗಳನ್ನ ಕೈಗೊಳ್ಳದೇ ನಿರ್ಲಕ್ಷ್ಯತೋರಿದ್ದಾರೆಂದು ತಾಂಡದ ಗ್ರಾಮಸ್ಥರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಗ್ರಾಮದ ಯುವ ಮುಖಂಡ ಲಕ್ಷ್ಮೀಪತಿ ನಾಯ್ಕ ಮಾತನಾಡಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ವಾಗಿದ್ದು.ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ನೀರಿನ ತೊಟ್ಟಿಗಳನ್ನ ಸ್ವಚ್ಛಗೊಳಿಸಬೇಕಿದೆ, ಕಾಲುವೆಗಳು ಗಬ್ಬೆದ್ದು ನಾರುತ್ತಿವೆ ಮಾಂಮಸದ ಅಂಗಡಿಯವರು ನಿಯಮಗಳನ್ನ ಪಾಲಿಸುತ್ತಿಲ್ಲ. ತ್ಯಾಜ್ಯ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಇದರಿಂದಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದು ಲಕ್ಷ್ಮೀಪತಿ ನಾಯ್ಕ ದೂರಿದ್ದಾರೆ. ಗ್ರಾಮದ ಮುಖಂಡ ರತ್ನಾ ನಾಯ್ಕ ಮಾತನಾಡಿ ಗುಳೇ ಹೋಗಿ ಬಂದಿರುವವರೆ ಮೇಲೆ ತೀವ್ರ ನಿಗಾ ಇಡಬೇಕಿದೆ, ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಬೇಕೆಂದು ಅಭಿವೃದ್ಧಿ ಅಧಿಕಾರಿಗೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ತೋಕ್ಯಾನಾಯ್ಕ ಸೇರಿದಂತೆ ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು. ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *