ಬಸವ ಶಿವಾಜಿ ಜಯಂತಿ ರಂಜಾನ್ ಹಬ್ಬವನ್ನು ಜೊತೆಗೂಡಿ ಆಚರಿಸುವುದರ ಮೂಲಕ “ಭಾವೈಕ್ಯತೆಗೆ ಬೆಳಕಾಯಿತು ಬಳ್ಳಿಗೇರಿ”.

Spread the love

ಬಸವ ಶಿವಾಜಿ ಜಯಂತಿ ರಂಜಾನ್ ಹಬ್ಬವನ್ನು ಜೊತೆಗೂಡಿ ಆಚರಿಸುವುದರ ಮೂಲಕಭಾವೈಕ್ಯತೆಗೆ ಬೆಳಕಾಯಿತು ಬಳ್ಳಿಗೇರಿ“.

ಅಂದಿನ ಆನೆಗುಂದಿ ಅರಸರ ಕಾಲದಲ್ಲಿ ಐತಿಹಾಸಿಕ ದೇವಾಲಯಗಳಾದ ವೀರಭದ್ರ ದೇವಾಲಯ, ಬಸವೇಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯಗಳನ್ನು ಅತೀ ಭಾರವಾದ ಕಲ್ಲು ಬಂಡೆಗಳಿಂದ ಜೋಡಿಸಿ ಕಟ್ಟಲಾಗಿದೆ.ದೇವಾಲಯದ ಒಳಗೆ ಮತ್ತು ಹೊರಗೆ ಕಲ್ಲಿನ ಮೇಲೆ ಅತಿ ಸುಂದರವಾದ ಕಲಾತ್ಮಕವಾದ ಕೆತ್ತನೆಯ ಕುಂಚದಲ್ಲಿ ಅರಳಿರುವ ಹಲವು ದೇವ ದೇವತೆಗಳ ಮೂರ್ತಿಗಳು, ಮಧ್ಯದಲ್ಲಿ ಕಲ್ಲಿನ ಕಂಬಗಳು, ಪ್ರಾಣಿ ಚಿತ್ರಗಳು, ಕಲ್ಲಿನ ಮೇಲೆ ಬರೆದಿರುವ ಶಿಲಾಶಾಸನಗಳ ಲಿಪಿ ಬರಹಗಳು ಬಳ್ಳಿಗೇರಿ ಗ್ರಾಮದ ಗತವೈಭವದ ಇತಿಹಾಸವನ್ನು ಸಾರಿದರೆ ದಿವಂಗತ ಶ್ರೀ ಅಪ್ಪಣ್ಣಜ್ಜ ವಸ್ತಾದ್ ಅವರು ಹಾಗೂ ಶ್ರೀ ಸಾತಯ್ಯಜ್ಜ ಹಿರೇಮಠ ಅವರ ಕಾಲದಲ್ಲಿ ಹರದೇಶಿ ಮತ್ತು ನಾಗೇಶಿ ಗೀಗಿ ಪದ ಮತ್ತು ಭಜನಾಪದಗಳನ್ನು ಸ್ವತಹ: ರಚಿಸಿ ಹಾಡುವುದರ ಮೂಲಕ ಹೀಗೆ ಜನಪದ, ಕಲೆ,ಸಾಹಿತ್ಯ, ಬಯಲಾಟ ವೈವಿಧ್ಯಮಯಗಳಿಂದ ಪ್ರಚಾರ ಪಡೆದು ಕಲಾವಿದರ ಹಾಗೂ ಕಲಾವಂತರ ತವರೂರು ಬಳ್ಳಿಗೇರಿ ಎಂಬ ಹೆಸರಿನಿಂದ ಪ್ರಖ್ಯಾತಿಯ ಪ್ರಸಿದ್ಧಿಯನ್ನು ಪಡೆದರೆ ಅದೇ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಹಲವು ಧಾರ್ಮಿಕ ಹಬ್ಬ ಹರಿದಿನಗಳನ್ನು ಗ್ರಾಮಸ್ಥರೆಲ್ಲರೂ ಜೊತೆಗೂಡಿ ಆಚರಿಸುವುದರ ಮೂಲಕ ಮತ್ತೊಂದು ಇತಿಹಾಸದ ಮೈಲುಗಲ್ಲಿನ ಗುರಿಯನ್ನು ಮುಟ್ಟಿದ್ದಾರೆ. ಕವಿ ಸಿದ್ದಯ್ಯ ಪುರಾಣಿಕರು ಹಿಂದೂ-ಮುಸ್ಲಿಂನಾಗು ಬೌದ್ಧ ಕ್ರೈಸ್ತನೆ ಆಗು ಜೈನ ಪಾರ್ಸಿಯೇ ಆಗು ಏನಾದರೂ ಸರಿಯೇ ಮೊದಲು ಮಾನವನಾಗು ಎಂದು ಹೇಳುವಂತೆ ಹಿಂದೂ-ಮುಸ್ಲಿಂ ಲಿಂಗಾಯತ ಮರಾಠಾ ಎನ್ನುವ ಜಾತಿ ಭೇದ ಭಾವದ ಬೇಲಿಯನ್ನು ಕಿತ್ತೆಸೆದು ನಾವೆಲ್ಲರೂ ಒಂದೇ ಎನ್ನುವ ಭಾವನೆಗಳೊಂದಿಗೆ 03-05-2022ರಂದು ಬಸವ ಜಯಂತಿ ಶಿವಾಜಿ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ಹಬ್ಬವನ್ನು ಒಂದೇ ದಿನದಂದು ಬಳ್ಳಿಗೇರಿ ಗ್ರಾಮದ ಪ್ರಮುಖ ಮುಖಂಡರಾದ ಶ್ರೀ ಚಂದ್ರಕಾಂತ ಇಮ್ಮಡಿ. ಶ್ರೀ ನಿಂಗಪ್ಪಾ ಖೋಕಲೆ. ಹಾಗೂ ಗ್ರಾಮಸ್ಥರೆಲ್ಲರೂ ಜೊತೆಗೂಡಿ ಬಸವ ಜಯಂತಿ ಶಿವಾಜಿ ಜಯಂತಿಯ ನಿಮಿತ್ಯ ಹಿಂದೂ ಬಾಂಧವರು ಸಿಹಿ ಪದಾರ್ಥಗಳನ್ನು ಹಂಚಿದರೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಪ್ರಯುಕ್ತ ತಂಪು ಪಾನೀಯ ಹಂಚುವುದರೊಂದಿಗೆ ಸಂಭ್ರಮದಿಂದ ಆಚರಿಸಿ ಸಂತೋಷ ಪಡುವುದರ ಮೂಲಕ ಭಾವೈಕ್ಯತೆ ಮತ್ತು ಏಕತೆಯ ಸಂದೇಶಕ್ಕೆ ಸಾಕ್ಷಿಯಾಗಿದ್ದಾರೆ.

ಹೌದು ನಾವು ಹುಟ್ಟುವುದು ಬೇರೆ ಬೇರೆ ಯಾಗಿದ್ದರೂ ಸಹ ನಾವು ಉಣ್ಣುವ ಅನ್ನ ಉಡುವ ಬಟ್ಟೆ ಕುಡಿಯುವ ನೀರು ಉಸಿರಾಡುವ ಗಾಳಿ ಒಂದೇ ಆಗಿರುತ್ತದೆ.ಅಷ್ಟೇ ಅಲ್ಲ ಪ್ರತಿಯೊಬ್ಬ ಮನುಷ್ಯರಾದ ನಮ್ಮೆಲ್ಲರ ಮೈಯಲ್ಲಿ ಹರಿದಾಡುವುದು ಕೆಂಪು ರಕ್ತವೇ ಆಗಿದೆ.ಅದಕ್ಕಾಗಿಯೇ ಇವನಾರವ ಇವನಾರವ ಎಂದೆನಿದಿರಯ್ಯಾ ಇವನಮ್ಮವ ಇವನಮ್ಮವ ಎಂದೆನಿಸಯ್ಯಾ. ದೇವನೊಬ್ಬ ನಾಮ ಹಲವು ಎಂಬ ವಚನಗಳನ್ನು ರಚಿಸಿ ಬರೀ ಬಾಯಿ ಮಾತಿನಲ್ಲಿ ಹೇಳದೇ ನುಡಿದಂತೆ ನಡೆದು ತೋರಿಸಿ ವಿಶ್ವಗುರು ಅಷ್ಟೇ ಅಲ್ಲ   ಜಗಜ್ಯೋತಿ ಬಸವಣ್ಣನವರು ದೇವಮಾನವರಾಗಿದ್ದಾರೆ.ಅಂತೆಯೇ ಹಿಂದೂ ಮುಸ್ಲಿಂ ಭಾಯಿ ಭಾಯಿ ದೋನೊಂಕಾ ಮತ್ಲಬ್ ಏಕ್ ಹೈ ಎನ್ನುವ ಹತ್ತಾರು ಸಂದೇಶಗಳು ಮನುಷ್ಯನಲ್ಲಿರುವ ಗೊಂದಲಗಳನ್ನು ದೂರ ಮಾಡುತ್ತವೆ. ಒಟ್ಟಾರೆ ಮುಂಬರುವ ಜಾತ್ರೆ ಉತ್ಸವಗಳು ಹಬ್ಬ ಹರಿದಿನಗಳನ್ನು ಎಲ್ಲರೂ ಜೊತೆಗೂಡಿ ಆಚರಿಸುವುದರ ಮೂಲಕ ಬಳ್ಳಿಗೇರಿ ಗ್ರಾಮದ ಹಿರಿಮೆ ಗರಿಮೆಯನ್ನು ಮತ್ತಷ್ಟು ಹೆಚ್ಚಿಸುವಂತಾಗಲಿ.

ಶ್ರೀ ಹನಮಂತ ಬಿ ಕುರಬರ. ಬೆನ್ನು ಹುರಿ ಅಪಘಾತದ ದಿವ್ಯಾಂಗರು. ಸಾ:ಬಳ್ಳಿಗೇರಿ. ತಾ: ಅಥಣಿ.ಜಿ: ಬೆಳಗಾವಿ. ಮೊ:9632189967..

ವರದಿ – ಮಹೇಶಶರ್ಮಾ

Leave a Reply

Your email address will not be published. Required fields are marked *