ಭದ್ರಾ ಮೇಲ್ದಂಡೆ ಯೋಜನೆಯಿಂದ ದಾವಣಗೆರೆ ಜಿಲ್ಲೆಯ ಜಗಳೂರು ಮತ್ತು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೆರೆಗಳಿಗೆ ನೀರುಣಿಸುವ ಬಗ್ಗೆ,,,,
ಭದ್ರಾ ಮೇಲ್ದಂಡೆ ಯೋಜನೆಯಿಂದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಜಗಳೂರು ಕೆರೆಯಿಂದ ಮುಂದೆ ಹೊಸಕೆರೆ ಕೆರೆ , ಗಡಿಮಾಕುಂಟೆ ಕೆರೆ, ಮತ್ತು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಿನಿ ಕೆರೆ, ಕೊಟ್ಟೂರು ಕೆರೆ, ಲೊಟ್ಟನ ಕೆರೆ ಕೆರೆ, ತಿಮ್ಮಲಾಪುರ ಕೆರೆ, ಕೊರಚರಹಟ್ಟಿ, ಕುಪ್ಪಿನಕೆರೆ ಕೆರೆ ಮತ್ತು ಕೂಡ್ಲಿಗಿ ಕೆರೆಗಳಿಗೆ ಸಂಪೂರ್ಣ ಶಾಶ್ವತ ನೀರಾವರಿಯಾಗುತ್ತದೆ. ಇದು ನೈಸಗರ್ಿಕ ಕಾಲುವೆಯಾಗಿದೆ. ಪ್ರಾಕೃತಿಕವಾಗಿ ಇದು ಹಳ್ಳದ ಹಾದಿಯಾಗಿದ್ದು ಅಲ್ಲಲ್ಲಿ ಸ್ವಲ್ಪ ಹಳ್ಳ ದಿಣ್ಣೆ ಗಳನ್ನು ಮಟ್ಟಸವಾಗಿ ಮಾಡಿದರೆ ಇದೊಂದು ನೈಸಗರ್ ಕ ಕಾಲುವೆಯೇ ಆಗಿದೆ . ಇದಕ್ಕಾಗಿ ಸಕರ್ಾರವು ಸ್ವಲ್ಪ ಆಸಕ್ತಿ ವಹಿಸಿದರೆ ಅಲ್ಪ ಖಚರ್ಿನಲ್ಲಿಯೇ ಅಂದರೆ ನೂರಾರು ಕೋಟಿ ಖಚರ್ು ಮಾಡುವ ಬದಲು ಸಮರ್ಥ ನುರಿತ ಹಿರಿಯ ನಿವೃತ್ತ ನೀರಾವರಿ ಅಭಿಯಂತರವರ ಸಲಹೆಗಳಮೇರೆಗೆ ಕೇವಲ ಕೆಲವು ಕೋಟಿಗಳ ಖಚರ್ಿನಲ್ಲಿಯೇ ಈ ಕೆಲಸಮಾಡಬಹುದು. ಇದರಿಂದ ಜಗಳೂರು- ಕೊಟ್ಟೂರು- ಕೂಡ್ಲಿಗಿ 120 ಕಿ.ಮಿ.ಗಳ ಆಸುಪಾಸಿನ ಎಲ್ಲಾಹಳ್ಳಿಗಳಿಗೆ ನೀರಾವರಿ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪುತ್ತದೆ.ಮತ್ತು ನೀರಿನ ಅಂತರ್ಜಲಮಟ್ಟವೂ ಸಹ ಏರುತ್ತದೆ. ಇದಕ್ಕೆ ಸಂಬಂಧಿಸಿದಂತಹ ಕೃಷಿ ಉದ್ಯಮ, ಹೈನೋಧ್ಯಮ ಎಲ್ಲವೂ ಈ ಎರೆಡು ಜಿಲ್ಲೆಗಳ ಹೀಂದುಳಿದ ತಾಲೂಕುಗಳ ಆಥರ್ಿಕ ನಕ್ಷೆಯನ್ನೇ ಬದಲಾಯಿಸ ಬಹುದು. ಇದಕ್ಕೆ ಜನಾಸಕ್ತಿ ಮತ್ತು ಜನಪ್ರತಿನಿಧಿಗಳ ಹೋರಾಟ ಮತ್ತು ಸಂಬಂಧಪಟ್ಟ ಎಲ್ಲಾಹಳ್ಳಿಗಳ ರೈತರಿಗೆ ತಿಳುವಳಿಕೆ ಕೊಡುವ ಮೂಲಕ ಸಕರ್ಾರದ ಗಮನಕ್ಕೆ ತಂದು ಅತೀ ಶೀಘ್ರದಲ್ಲಿ ಕಾರ್ಯ ರೂಪಕ್ಕೆ ಬರುವಂತೆ ಮಾಡಬೇಕು . ಇದನ್ನು ಓದುವ ಎಲ್ಲರೂ ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮನಿಮ್ಮ ಭಾಗದಲ್ಲಿ ಜನರಿಗೆ ತಿಳಿಸಿ ನಮ್ಮ ಗ್ರಾಮಗಳ , ಊರುಗಳ, ತಾಲೂಕುಗಳ, ಜಿಲ್ಲೆಗಳ ಅಭಿವೃದ್ಧಿಗೆ ತಕ್ಕಮಟ್ಟಿಗೆ ಸ್ಪಂದಿಸೋಣ. ಕೊನೆಯಲ್ಲಿ ಒಂದು ಮಾತು.. ಈ ಎಲ್ಲಾ ಯೋಜನೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಇದರ ರೂಪುರೇಶಗಳನ್ನು ಒಂದು ನಕ್ಷೆಯ ರೂಪಕ್ಕೆ ತಂದು ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ತಿಳಿಯುವಂತೆ ಮಾಡುವಲ್ಲಿ ಶ್ರಮಪಟ್ಟವರು ಸರ್ ಎಂ. ವಿಶ್ವೇಶ್ವರಾಯ ಇಂಜಿನಿಯರ್ಸ್ ಅಸೋಸಿಯೇಷನ್, ಕೊಟ್ಟೂರು ನ ಅಧ್ಯಕ್ಷರಾದ ನಿವೃತ್ತ ನೀರಾವರಿ ಅಭಿಯಂತರವರಾದ ಶ್ರೀ ಎಂ.ಎನ್.ಗೌಡ್ರು . ಇವರ ಈ ಇಳಿವಯಸ್ಸಿನ ಹುಮ್ಮಸ್ಸಿನಿಂದ ಈ ಒಂದು ಯೋಜನೆ ನಕ್ಷೆಯ ರೂಪಕ್ಕೆ ಬಂದಿದೆ. ಹಾಗೇಯೇ ಇವರಿಗೆ ಜೊತೆಯಾಗಿದ್ದು ಮಠಾಧೀಶರ ಧರ್ಮ ಪರಿಷತ್ತು , (ರಿ) ಕೊಟ್ಟೂರು. ಇದನ್ನು ಎಲ್ಲಾ ಯುವಕರಾದಿಯಾಗಿ ರೈತರು ಮತ್ತು ಎಲ್ಲಾ ಜನರು ಹೋರಾಟ ಮಾಡಿದರೆ ಈ ಯೋಓಜನೆ ಕೈಗೂಡುತ್ತದೆ.
ವರದಿ – ಸಂಪಾದಕೀಯ