ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಇಂದು 12 ನೇ ವಾರ್ಡಿನ ವಿದ್ಯಾನಗರದ ವಿಶ್ವಚೇತನ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಪ್ರಥಮ ಬಾರಿಗೆ ಈ ಸ್ಕೂಲಿನಲ್ಲಿ ಆಯೋಜನೆ ಮಾಡಿ ವಿದ್ಯಾರ್ಥಿಗಳು ವರ್ಷಪೂರ್ತಿ ವಿದ್ಯಾಭ್ಯಾಸದಲ್ಲಿ ತೊಡಗಿರುವುದರಿಂದ ಮಕ್ಕಳ ಮನಸ್ಸಿಗೆ ಹಾಗೂ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಕೌಶಲ್ಯತೆ ಹಾಗೂ ಕ್ರಿಯಾಶೀಲತೆ ಯನ್ನು ಮಕ್ಕಳಲ್ಲಿ ಬೆಳೆಸಲು ಬೇಸಿಗೆ ಶಿಬಿರದ ಕಾರ್ಯಕ್ರಮದಡಿಯಲ್ಲಿ ಸರಿಸುಮಾರು 70 ವಿದ್ಯಾರ್ಥಿಗಳ ದಾಖಲಾಗಿದ್ದರು ವಿದ್ಯಾರ್ಥಿಗಳು ಬೇರೆ ಬೇರೆ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ಸಹ ಇದ್ದರು ಹಾಗೂ ಕೆಲವು ಹಳ್ಳಿಗಳಿಂದಲೂ ಸಹ ಈ ಒಂದು ಬೇಸಿಗೆ ಶಿಬಿರದಲ್ಲಿ ದಾಖಲಾತಿ ಯಾಗಿದ್ದರು ಈ ಶಿಬಿರದಲ್ಲಿ ಹಾರ್ಟ್ಸ್ ಅಂಡ್ ಕ್ರಾಫ್ಟ್ ,ಕರಾಟೆ ,ಡ್ಯಾನ್ಸ್, ಸ್ಪೋಕನ್ ಇಂಗ್ಲೀಷ್ ,ಯೋಗ, ಗೇಮ್ಸ್ ಅಂಡ್ ಸ್ಪೋರ್ಟ್ಸ್, ಫ್ಯಾನ್ಸ್ ಸಾಂಗ್ಸ್ ,ಫೀಲ್ಡ್ ವರ್ಕ್ , ಗಾರ್ಡನಿಂಗ್ ,ಹ್ಯಾಂಡ್ ರೈಟಿಂಗ್ ,ಇನ್ನು ಇತರೆ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಬೇಸಿಗೆ ಶಿಬಿರದ ಮುಖ್ಯ ಕಾರ್ಯದರ್ಶಿಯಾದ ಅಧ್ಯಕ್ಷತೆಯನ್ನು ಸಹ ಶಿಕ್ಷಕರಾದ ಮರಿಯ ಮೇಡಂ ವಹಿಸಿಕೊಂಡಿದ್ದರು ಹಾಗೂ ಡ್ಯಾನ್ಸ್ ಮಾಸ್ಟರ್ ಪವನ್ ಕುಮಾರ್ ಬಳ್ಳಾರಿ ಇವರು ವಹಿಸಿಕೊಂಡಿದ್ದರು ಹಾಗೂ ಕರಾಟೆ ಮಾಸ್ಟರ್ ಎಮ್ಮನೂರು ವಹಿಸಿಕೊಂಡಿದ್ದರು ಎಲ್ಲಾ ವಿದ್ಯಾರ್ಥಿಗಳು ಬೇಸಿಗೆ ಶಿಬಿರವನ್ನು ಎಲ್ಲ ಚಟುವಟಿಕೆಗಳಲ್ಲಿ ಬಹಳ ಆಸಕ್ತಿಯಿಂದ ಮತ್ತು ಉತ್ಸಾಹದಿಂದ ಭಾಗವಹಿಸಿದ್ದರು ಹಾಗೂ ಕೊನೆಯ ದಿನವಾದ ಇಂದು ವಿದ್ಯಾರ್ಥಿಗಳು ಶಿಬಿರದ ಮೂಲಕ ತಾವು ಕಲಿತಿರುವ ಅಂತ ವಸ್ತುಗಳು ಹಾಗೂ ಇನ್ನಿತರ ಡ್ರಾಯಿಂಗ್ ಇವನ್ನೆಲ್ಲ ಕ್ರೂಡೀಕರಿಸಿ ವಿದ್ಯಾರ್ಥಿಗಳ ಭಾಗವಹಿಸಿ ಮಾಡಿರುವಂತ ವಸ್ತುಗಳ ಪ್ರದರ್ಶನವನ್ನು ಅಳವಡಿಸಲಾಗಿತ್ತು ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಸಂತ ಮೈಕಲ್ ಸ್ಕೂಲಿನ ಆನಂದ್ ಪ್ರಸಾದ್ ಫಾದರ್ ಇವರು ಉದ್ಘಾಟಿಸಿದರು ಮಕ್ಕಳು ಅವರನ್ನು ಸ್ವಾಗತಿಸಿದರು ಈ ಸಂದರ್ಭದಲ್ಲಿ ವಿಶ್ವಚೇತನ ಸ್ಕೂಲಿನ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು ಹಾಗೂ ಬೇಸಿಗೆ ಶಿಬಿರಕ್ಕೆ ದಾಖಲಾಗಿರುವಂತೆ ಎಲ್ಲಾ ವಿದ್ಯಾರ್ಥಿಗಳ ಪೋಷಕರಿಗೆ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು
ವರದಿ :ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428