ಇಲಕಲ್:ಪೊಲೀಸರ ಬರ್ಜರಿ ಬೇಟೆ ಮೊಬೈಲ್ ಅಂಗಡಿ ಕಳ್ಳತನ ಮಾಡಿದ ಇಬ್ಬರು ಕಳ್ಳರ ಬಂದನ..
ಆಶ್ರಪ್. ಅಬ್ದುಲ್ ಕರೀಮ್ ಚಿತ್ತವಾಡಗಿ ಎಂಬುವವರ. ಮೊಬೈಲ್ ಅಂಗಡಿ ಯನ್ನು ದಿನಾಂಕ 15.03.2022. ರಂದು ರಾತ್ರಿ 9.30.ಗಂಟೆಯಿಂದ 16.03.2022ರಂದು ಬೆಳಿಗ್ಗೆ 6ಗಂಟೇಯ ಅವಧಿಯಲ್ಲಿ ಇಲಕಲ್ ಬಸ್ಟಾಂಡ್ ಹತ್ತಿರ ಇರುವ ಪಿಟ್ಟನೆಸೀ ಜೋನ್ ಮೊಬೈಲ್ ಅಂಗಡಿಯ ಕೀಲಿ ಮುರಿದು ರೂ 1500000 ಲಕ್ಷಿ ಕಿಮ್ಮತ್ತಿನ ವಿವಿಧ ಕಂಪನಿಯ 102 ಮೊಬೈಲ್ ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದಿನಾಂಕ್ 16.03.2022. ರಂದು ಇಲಕಲ್ ಶಹರ ಠಾಣೆಯಲ್ಲಿ ಫಿರ್ಯಾದಿ ನಿದ್ದರು ಆ ಮೇರಿಗೆ ಇಲಕಲ್ ಶಹರ ಪೊಲೀಸ್ ಠಾಣೆ ಗುನ್ನೆ ನಂಬರ 31/22 ಕಲಂ 457.370 ಐಪಿಸಿ ಪ್ರಕಾರಣ ದಾಖಲಾಗಿತ್ತು. ಶ್ರೀ ಲೋಕೇಶ್. ಬಿ. ಜಗಲಾಸರ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಮತ್ತು ಪ್ರಭುಗೌಡ ಕಿರೇದಳ್ಳಿ ಡಿ ಎಸ್ ಪಿ. ಬಾಗಲಕೋಟೆ ರವರ ಮಾರ್ಗದರ್ಶನ್ ದಲ್ಲಿ ತನಿಖಾಧಿಕಾರಿಗಳ ಆದ ಶ್ರೀ ಹೊಸಕೇರಪ್ಪ. ಕೆ. ಸಿಪಿಐ ಹುನಗುಂದ ವೃತ್ತ. ಶ್ರೀ ಸೋಮನಗೌಡ ಬಿ ಗೌಡರ ಪಿಎಸ್ಐ ಹುನಗುಂದ. ಸಿಬ್ಬಂದಿ ಅವರಾದ ಗಣೇಶ್ ಪವಾರ್ ಆರ್ ಎನ್ ಗುಡುದಾರಿ ಆನಂದ್ ಗೋಲಪ್ಪನವರ್ ಇವರು ಮೊಬೈಲ್ ಅಂಗಡಿ ಕಳ್ಳತನ ಮಾಡಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ದಿನಾಂಕ.06.05.2022 ರಂದು ದಸ್ತಗಿರಿ ಮಾಡಿ ಅವರಿಂದ ರೂ 11.17.723/. ಕಿಮ್ಮತ್ತಿನ 71 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಯವರ ಈ ಕಾರ್ಯವನ್ನು ಶ್ರೀ ಲೋಕೇಶ್ ಬಿ ಜಗಲಾಸರ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ರವರು ಮುಕ್ತ ಕಂಠದಿಂದ ಶ್ಲಾಗಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
ವರದಿ – ಸಂಪಾದಿಕೀಯ