ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮುಧೋಳದ ಒಂದು ವರಿ ವರ್ಷದ ಪೋರ!….

Spread the love

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮುಧೋಳದ ಒಂದು ವರಿ ವರ್ಷದ ಪೋರ!….

ಪಟಾ ಪಟ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸುವ ಪೋರ! ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ್ ವಡ್ಡರ ಇವರ ಮಗನಾದ 1 ವರ್ಷ 7 ತಿಂಗಳ ತೊದಲು ನುಡಿಯ ಕಂದನ ಹೆಸರು ರೀತಿಕ್,  ತನ್ನ ಒಂದೊಂದು ಕಾರ್ಯ ಆರಂಭಿಸಿದರೆ ಹೆತ್ತವರಿಗೆ ಆಗೋ ಸಂತೋಷ ಅಷ್ಟಿಷ್ಟಲ್ಲ. ಇನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಸಾಧನೆ ಮಾಡಿದರೆ ಅವರ ಖುಷಿಗೆ ಪಾರವೇ ಇರಲ್ಲ ಆಟ ಆಡುವ ವಯಸ್ಸು ಅವನದು, ಅಮ್ಮ ಕೇಳುವ ಪ್ರಶ್ನೆ ಗೆ ಪಟಾ ಪಟ್ ಅಂತ ಉತ್ತರಿಸುವ ತೊದಲು ನುಡಿಯ ಕಂದನ ಹೆಸರು ರೀತಿಕ್ ಮುಧೋಳ ಗ್ರಾಮದ ನಿವಾಸಿಯಾದ ನಾಗರಾಜ್ ಹಾಗೂ ಜ್ಯೋತಿ ದಂಪತಿಗಳ ಮಗ. ರೀತಿಕ್  ಆದರೆ ಆತನ ಜ್ಞಾನ ನೋಡಿದರೇ ಇಡೀ ಜಗತ್ತೇ ಅಚ್ಚರಿ ಪಡುತ್ತದೆ, ತನ್ನ ಅಪಾರ ಜ್ಞಾಪಕ ಶಕ್ತಿಯಿಂದ ಆ ರೀತಿಕ್ ದಾಖಲೆ ಮಾಡಿದ್ದಾನೆ. ತನ್ನ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸಾಧನೆ ಮಾಡಿದ್ದಾನೆ. ಎರಡು ವರ್ಷದ ಈ ಬಾಲಕ ಜನರಲ್ ನಾಲೆಡ್ಜ್, ಅಂಕಿ ಸಂಖ್ಯೆಗಳನ್ನು ಅಳ್ಳು ಹುರಿದಂತೆ ಹೇಳುತ್ತಾನೆ. ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರದ ನಕ್ಷೆಯನ್ನು ನೋಡುತ್ತಲೇ ದೇಶವನ್ನು ಗುರುತಿಸುತ್ತಾನೆ. ಎರಡೂ ವರ್ಷದಲ್ಲಿಯೇ ಇಂತಹದೊಂದು ಸಾಧನೆ ಮಾಡಿದ್ದು, ಹೆತ್ತವರ ಹರ್ಷವನ್ನು ಇಮ್ಮಡಿಗೊಳಿಸಿದೆ. ಅಮ್ಮನ ಮಡಿಲನ್ನೇ ತನ್ನ ಪಾಠ ಶಾಲೆಯನ್ನಾಗಿ ಮಾಡಿಕೊಂಡ ರೀತಿಕ್ ಸಮಾಜದ ಅರಿವು ಇಲ್ಲದ ವಯಸ್ಸಿನಲ್ಲಿಯೇ ಅರ್ಥಪೂರ್ಣ ಸಾಧನೆ ಮಾಡಿದ್ದಾನೆ. ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್-2022ರಲ್ಲಿ ತನ್ನ ಹೆಸರನ್ನು ದಾಖಲು ಮಾಡಿರುವ ರೀತಿಕ್ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ, 150ಕ್ಕಿಂತ ಹೆಚ್ಚು ವಸ್ತುಗಳನ್ನು ತನ್ನ ಬುದ್ದಿ ಶಕ್ತಿಯಿಂದ ನಿಖರವಾಗಿ ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರಿಕಾರ್ಡ್‌ನಲ್ಲಿ ತನ್ನ ಹೆಸರು ಸೇರ್ಪಡಿ ‘ಯಾಗುವಂತೆ ಮಾಡಿ ಎಲ್ಲರ ಗಮನ ಸೆಳೆಯುವಂತೆ ಮಾಡಿರುವ ತಂದೆ,ತಾಯಿಗೆ ಒಬ್ಬ ಆದರ್ಶ ಪುತ್ರನಾಗಿದ್ದಾನೆ, ರೀತಿಕ್ ತಾಯಿ ಜ್ಯೋತಿಯವರು ಮನೆ ಕೆಲಸದ ಜೊತೆಗೆ ಮಗನ ಬುದ್ಧಿಶಕ್ತಿ ಹೆಚ್ಚಿಸುವದಕ್ಕೆ ಶ್ರಮ ಗುರುತಿಸುವ ಕೆಲಸ ಮಾಡಿದ್ದಾರೆ. 15 ಪ್ರಾಣಿಗಳು, 7 ಬಣ್ಣಗಳು, ಪಕ್ಷಿಗಳು, ತರಕಾರಿ ಗಳು. 8 ರಾಷ್ಟ್ರೀಯ ನಾಯಕರನ್ನು 7 ಹಣ್ಣುಗಳನ್ನು 5 ಆಕಾರಗಳನ್ನು 5 ಗೆರೆಗಳು,0ದಿನ ಬಳಕೆ ವಸ್ತುಗಳು, 8 ವಾಹನಗಳನ್ನು 4 ಕ್ರೀಡೆಗಳು, 10ದೇಹದ ಭಾಗಗಳು ಸೇರಿದಂತೆ ರತೀಕ್ ಕೇವಲ ಹೇಳುವ ವಸ್ತುಗಳನ್ನು ಶುಭ ಹಾರೈಸಿದ್ದಾರೆ. ಸುಮಾರು 20 ವೀಡಿಯೋ ಸನ್ನಿವೇಶನಗಳನ್ನು ಸರ ಹಿಡಿಯುವ ಕೆಲಸವನ್ನು ಜ್ಯೋತಿಯವರು ಮಾಡಿ ಇಂಡಿಯಾ ಬುಕ್ ಆಫ್ ರೀಕಾರ್ಡ್ ಸಂಸ್ಥೆಗೆ ತಲುಪಿಸಿದ್ದಾರೆ. ಸಂಸ್ಥೆಯವರು ರಿತೀಕ್‌ನ ವಿಡಿಯೋಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿ ದಾಖಲೆ ನಿರ್ಮಿಸಿದ್ದಾನೆ ಇನ್ನಿತರ ವಸ್ತುಗಳನು, ಗುರುತಿಸುವ ಹೆಸರು ಸೇರ್ಪಡೆಗೆ ಮಾದರಿಯಾಗಬೇಕಿದೆ. ರೀತಿಕ್ ಸಾಧನೆ ಪ್ರತಿಯೊಬ್ಬರಿಗೆ ಮಾದರಿ ಯಾಗಬೇಕು.

ವರದಿ : ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *