ಪಟ್ಟಣದಲ್ಲಿ 700 ಫಲಾನುಭವಿಗಳಿಗೆ ಶೀಘ್ರದಲ್ಲೇ ಮನೆಗಳ ಹಂಚಿಕೆ : ಅಮರೇಶ್ ಹುಬ್ಬಳ್ಳಿ……
ಯಲಬುರ್ಗಾ ಪಟ್ಟಣ ಪಂಚಾಯತಿ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ 15 ವಾರ್ಡುಗಳ ಅರ್ಹ ಪಾರದಶ೯ಕವಾಗಿ ಹಂಚಿಕೆಯಾಗಲಿವೆ. ಇದರಿಂದ ಗುಡಿಸಲು ಮುಕ್ತ ಪಟ್ಟಣವನ್ನಾಗಿ ಮಾಡೋಣ ಎಂದರು, ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರವರ ಪ್ರಯತ್ನದಿಂದ ರಾಜ್ಯ ಸರ್ಕಾರ ವಸತಿ ಇಲಾಖೆ ಮೂಲಕ ಯಲಬುರ್ಗಾಕ್ಕೆ 700 ಮನೆಗಳು ಮಂಜೂರಾಗಿವೆ. ಶೀಘ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯ ನಡೆಯಲಿದೆ. ಎಂದು ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು. ಜೊತೆಗೆ ಹಸಿ ಕಸದ ಬುಟ್ಟಿಗಳನ್ನು ಶೀಘ್ರದಲ್ಲೇ ವಿತರಣೆ ನಡೆಯಲಿದ್ದು ಪ್ರತಿ ಮನೆಗೂ ಎರಡು ಬುಟ್ಟಿಗಳನ್ನು ಹಂಚಿಕೆ ಮಾಡಲಾಗುವುದು. ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಟ್ಟಣದ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅನುಷ್ಠಾನಕ್ಕೆ ತರಲಾಗಿದೆ ಎಂದರು. ಪಪಂ ಮುಖ್ಯಾಧಿಕಾರಿ ಶಿವಕುಮಾರ ಮಾತನಾಡಿ, ಕಟ್ಟಿಮನಿ 15ನೇ ಹಣಕಾಸಿನಲ್ಲಿ 64 ಲಕ್ಷ ರೂ., ಎಸ್ ಎಫ್ ಸಿ ಅನುದಾನದಲ್ಲಿ 18 ಲಕ್ಷರೂ, ಎಸ್‌ಪಿ, ಎಸ್‌ಟಿಪಿ ಯೋಜನೆಯಡಿ ಲಕ್ಷ ರೂ. ಅನುದಾನಗಳನ್ನು ಕ್ರಿಯಾಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷರ ಹೊಸ ಆಯ್ಕೆ : ಪಟ್ಟಣ ಪಂಚಾಯತಿಯ ಒಂದು ವರ್ಷದ ಅವಧಿಗೆ 12ನೇ ವಾರ್ಡಿನ ಸದಸ್ಯ ಕಳಕಪ್ಪ ತಳವಾರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಪಪಂ ವತಿಯಿಂದ, ಪಪಂ ಉಪಾಧ್ಯಕ್ಷರಾದ ಶಾಂತಾ ಮಾಟೂರ, ಸದಸ್ಯರಾದ ವಸಂತ ಭಾವಿಮನಿ, ಅಂದಯ್ಯ ಕಳ್ಳಿಮಠ, ಬಸಲಿಂಗಪ್ಪ ಕೊತ್ತಲ, ಅಶೋಕ ಅರಕೇರಿ, ರೇವಣಪ್ಪ ಹಿರೇಕುರುಬರ, ಹನಮಂತ ಭಜಂತ್ರಿ, ರಿಯಾಜ್ ಖಾಜಿ, ವಿಜಯಲಕ್ಷ್ಮೀ ಬೆಲೇರಿ, ಬಸಮ್ಮ ಬಣಕಾರ, ಶ್ರೀದೇವಿ ಗುರುವಿನ್, ಕಲಾವತಿ ಮರದಡ್ಡಿ, ನಂದಿತಾ ದಾನರೆಡ್ಡಿ ಇನ್ನೂ ಹಲವರು ಉಪಸ್ಥಿತರಿದ್ದರು
ವರದಿ – ಸಂಪಾದಿಕೀಯ