ಜಂಗಮ ಸೋವೇನಹಳ್ಳಿ:ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಟಾಮನೆ…..

Spread the love

ಜಂಗಮ ಸೋವೇನಹಳ್ಳಿ:ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಟಾಮನೆ…..

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ಜಂಗಮಸೋವೇನಹಳ್ಳಿ ಗ್ರಾಮದ ಶ್ರೀ ಗುರು ಬಸವೇಶ್ವರ ಸ್ವಾಮಿಯ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಶ್ರೀ ಗುರುಬಸವೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ರವಿವಾರ ಗೊಧೋಳಿ ಸಮಯದಲ್ಲಿ ಗಂಗೆ ಪೂಜೆ ಯೊಂದಿಗೆ ಪೂಜಾ ಕೈಂಕಾರ್ಯ ಆರಂಭವಾಗಿ ಶ್ರೀ ಷ ಬ್ರ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ನೇತೃತ್ವದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀ ಬಸವೇಶ್ವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಸುಮಂಗಲಿಯರು ಪೂರ್ಣಕುಂಬ ಕಳಸಗಳನ್ನು ಹೊತ್ತು ಭಕ್ತಿ ಸಮರ್ಪಿಸಿದರು. ಗ್ರಾಮದ ವೀರಗಾಸೆ ತಂಡ ಪುರವಂತರ ವೇಷದೊಂದಿಗೆ ರೌದ್ರನರ್ತನ ಮಾಡಲಾಯಿತು ಮೇಳ ಸಮಾಳ ನಂದಿಕೋಲು ಕುಣಿತ, ಡೋಲುವಾದನ ಇನ್ನಿತರ ಜನಪದ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ರಾತ್ರಿಯಿಡೀ ವಿವಿಧ ಪೂಜಕಾರ್ಯ ನೆಡಸಲಾಯಿತು ಬ್ರಾಹ್ಮೀ ಮೊಹೊರ್ಥದಲಿ ರಾಜಶೇಖರಶಾಸ್ತ್ರಿ ಶಿವಕುಮಾರ್ ಶಾಸ್ತ್ರಿಗಳು  ಪೂಜಾ ಹವನ ಹೋಮ ಮಾಡಿ ನೂತನ ದೇವಾಲಯ ಹಾಗು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು ಈ ಸಂದರ್ಭದಲ್ಲಿ  ಗ್ರಾಮದ ಭಕ್ತರು ಭಕ್ತಿ ಸಮರ್ಪಿಸಿದರು. ದಿವ್ಯ ಸಾನಿದ್ಯ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು, ಉಜ್ಜಿನಿ ಪೀಠ ನಾಡು ಉತ್ತಮ ಮಳೆ ಬೆಳೆಯಾಗಿ  ಸುಭಿಕ್ಷೆಯಾಗಲಿ. ಸೌಹಾರ್ದತೆ ಸೌಜನ್ಯ ವಿನಯ ನಮ್ರತೆ ವಿಶಾಲಭಾವದ ದೃಷ್ಟಿ ಯಿಂದ ಮನುಷ್ಯ ನೆಮ್ಮದಿಯಿಂದ ಇರಲು ಸಾದ್ಯ ಎಂದರು.  ಉಜ್ಜಿನಿ ಶೀ್ರಗಳ ನೇತೃತ್ವದಲ್ಲಿ, ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಕೂಡ್ಲಿಗಿ ಮಾತನಾಡಿದರು, ಗುರು ಹಿರಿಯರು ಗಳಿಗ ಗೌರವ ಕೊಡವ ಉತ್ತಮ ಮೌಲ್ಯಯುತ  ಸಂಸ್ಕಾರ ನೀಡಿದರೆ, ಇತರರಿಗೆ ಮಾದರಿ ಶಕ್ತಿ ಯಾಗಬಲ್ಲರು ಎಂದರು. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಡೋಣೂರು ಚಾನುಕೋಟಿ ಮಠ ಕೊಟ್ಟೂರು ಅರ್ಶೀವಚನ ನೀಡಿದರು. ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಭೂತ ಭುಜಂಗ ಮಠ ಕೊಟ್ಟೂರು, ಹಿರೇಹಡಗಲಿ ಹಾಲವೀರಪ್ಪ ಸ್ವಾಮಿಗಳು, ಶ್ರೀ ಹಾಲಸಿದ್ದೇಶ್ವರ ಸ್ವಾಮಿಗಳು ಹಾಲಸ್ವಾಮಿ ಮಠ ಹಗರಿಬೊಮ್ಮನಹಳ್ಳಿ. ಶ್ರೀವೇದಮೂರ್ತಿ ಗುರುಪಾದಯ್ಯ ಸ್ವಾಮಿಗಳು ಕಣವಿ ನಾಯಕನಹಳ್ಳಿ. ಎನ್ ಎಂ ಪ್ರಭುಸ್ವಾಮಿ ನಾಣ್ಯಪುರ. ಎಚ್ಎಮ್ ವೀರೇಶ್ ಸ್ವಾಮಿ ಹೊಸಕೆರೆ, ಸಿ ಎಂ ಕೊಟ್ರಯ್ಯ ಜಂಗಮಸೋವೆನಹಳ್ಳಿ. ಗ್ರಾಮ ಪಂಚಾಯತಿ ಸದಸ್ಯರಾದ ಯು.ಪಕೀರಪ್ಪ ಶ್ರೀಮತಿ ನಿರ್ಮಲ ಕೊಟ್ರೇಶಪ್ಪ ಉಪಸ್ಥಿತರಿದ್ದರು. ಶ್ರೀ ಬಸವೇಶ್ವರ ಸ್ವಾಮಿ  ಸಮಿತಿ ಪದಾಧಿಕಾರಿಗಳು ಸದಸ್ಯರು ಇದ್ದರು. ಗೌಡರ ಜಯಣ್ಣ, ಗುನ್ನಳ್ಳಿ ಹನುಮಂತಪ್ಪ,ನಂದಿ ಜಂಬಣ್ಣ,ಹರಪನಹಳ್ಳಿ ತಿಮ್ಮಣ್ಣ,ಎಸ್‌ ಎಸ್ ವೀರಪ್ಪ,ಸಿಎಂ ಬಸಯ್ಯ,ವಿ ಶರಣಪ್ಪ ,ಜಿ ವೀರಣ್ಣ, ಸಿ ಯಂ ಮಲ್ಲಿಕಾರ್ಜುನ ಶ್ರೀಬಣಕಾರ ಕೊಟ್ರೇಶಪ್ಪ,ದಾಸಪ್ಪರ ಹುಲೆಪ್ಪ,ಯು ಸ್ವಾಗಿರಪ್ಪ,ಶ್ರೀ ಬಾರಿಕರ ಹುಲೆಪ್ಪ ಹಾಗೂ ಗ್ರಾಮಸ್ಥರು  ಪಾಲ್ಗೊಂಡಿದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *