ಐಪಿಎಸ್ ಅಧಿಕಾರಿ ಡಾ.ರವೀಂದ್ರನಾಥ್ ರಾಜೀನಾಮೆ ಅಂಗೀಕರಿಸದಂತೆ ಸರ್ಕಾರಕ್ಕೆ ಮನವಿ- ಮೋಹನ್ ಕುಮಾರ್ ದಾನಪ್ಪ..
ಮೇ:10, ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಪರಿಶಿಷ್ಟ ವರ್ಗಕ್ಕೆ ಸೇರಿದ ಪ್ರಸ್ತುತ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ದಕ್ಷ ಪ್ರಾಮಾಣಿಕ ಅಧಿಕಾರಿ ಡಾ.ರವೀಂದ್ರನಾಥ್ ರವರು ಸರ್ಕಾರದ ನಡೆ ಬೇಸತ್ತು ತಮ್ಮ ಐಪಿಎಸ್ ಸೇವೆಗೆ ರಾಜಿನಾಮೆ ಪತ್ರವನ್ನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದು ಅವರ ರಾಜೀನಾಮೆಯನ್ನ ಅಂಗೀಕರಿಸದಂತೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ರವೀಂದ್ರನಾಥ್ ರವರು ದಲಿತ ಸಮುದಾಯಕ್ಕೆ ಸೇರಿದ ಒಂದೇ ಕಾರಣಕ್ಕೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷದ ಸರ್ಕಾರಗಳು ಅವರಿಗೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳು ನೀಡದೆ ಕಛೇರಿಯು ಇಲ್ಲದಂಥ ಹುದ್ದೆಗಳನ್ನ ನೀಡಿದ್ದು, ತಮಗಿಂತ ಕಿರಿಯ ಅಧಿಕಾರಿಗೆ ಡಿಜಿಪಿ ಸ್ಥಾನ ನೀಡಿದ ನಂತರ ಡಿಜಿಪಿ ಸ್ಥಾನ ನೀಡಿದ್ದು ಒಟ್ಟಾರೆಯಾಗಿ ಅವರನ್ನು ಮೂಲೆ ಗುಂಪಾಗಿಸಿದ್ದದ್ದು, ಸರ್ಕಾರಗಳು ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸತ್ತು ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರದಲ್ಲಿ ಮಾನ್ಯತೆ ಇಲ್ಲದಿರುವುದರಿಂದ ದುಃಖದಿಂದ ಇಂದು ರಾಜಿನಾಮೆ ಸಲ್ಲಿಸಿರುವುದು ದಲಿತ ಸಮುದಾಯಕ್ಕೆ ಮತ್ತು ಅವರ ಅಪಾರ ಅಭಿಮಾನಿ ಬಳಗಕ್ಕೆ ನೋವಿನ ಸಂಗತಿಯಾಗಿರುತ್ತದೆ, ಡಿಜಿಪಿ ರವೀಂದ್ರನಾಥ್ ಅವರು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಿಂಚಿನ ಕಾರ್ಯಾಚರಣೆ ನಡೆಸಿ ರಾಜ್ಯದಲ್ಲಿ ಸುಳ್ಳು ಜಾತಿ ಪತ್ರ ಪಡೆದವರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲದೆ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ಮೇಲಿರುವ ಸುಳ್ಳು ಜಾತಿ ಪತ್ರ ಪಡೆದು ಐಪಿಎಸ್ ಹುದ್ದೆ ಪಡೆದಿದ್ದರ ಬಹಳ ಹಿಂದಿನ ಪ್ರಕರಣವನ್ನ ಪತ್ತೆ ಹಚ್ಚಿ ವಿಚಾರಣೆ ಕೈಗೆತ್ತಿಕೊಂಡು, ದೂರಿನ ಕಡತವನ್ನ ಮುಚ್ಚಿಟ್ಟಿದ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ವಿಚಾರಣೆ ಕೈಗೆತ್ತಿಕೊಂಡಿದ್ದರಿಂದ ಸರ್ಕಾರ ಅವರನ್ನು ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಲಿದ್ದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೆಟ್ಟ ಪರಿಣಾಮ ಬೀರುವ ಸಂಭವವಿರುತ್ತದೆ ಆದ್ದರಿಂದ ರವೀಂದ್ರನಾಥ್ ಅವರ ರಾಜೀನಾಮೆಯನ್ನ ಅಂಗೀಕರಿಸದೆ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆ ನೀಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪ ನವರು ರಾಜ್ಯ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆ ಮುಖಾಂತರ ಮನವಿ ಸಲ್ಲಿಸಿದ್ದಾರೆ!
ವರದಿ – ಮಹೇಶ ಶರ್ಮಾ