ಜನರ ರಕ್ಷಣೆಗೆ ಹಗಲೀರುಳು ಎನ್ನದೇ ಸೇವೆ ಸಲ್ಲಿಸುತ್ತಿರುವ ಆರಕ್ಷಕರಿಗೊಂದು ಸಲ್ಯೂಟ್
ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಇಂದು ಕೊರೋನಾ 2ನೇ ಅಲೆ ದೇಶ ವ್ಯಾಪ್ತಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ 14 ದಿನಗಳ ಲಾಕ್ ಡೌನ್ ಆದೇಶ ಹೊರಡಿಸಿದೆ. ಅನಗತ್ಯವಾಗಿ 10 ಗಂಟೆಯ ನಂತರ ವಾಹನಗಳು ರಸ್ತೆಗಿಳಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಬೇಕು ಹಾಗೂ ಜನರು ಸಹ ಅನಗತ್ಯವಾಗಿ ಓಡಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಪಟ್ಟಣದ ಪೋಲಿಸರು ಪ್ರತಿಯೊಂದು ವಾಹನಗಳು ಚೆಕ್ ಮಾಡಿ ಅಗತ್ಯವಿದಲ್ಲಿ ಮಾತ್ರ ಬಿಟ್ಟು ಕಳಿಸುತ್ತಾ ಅನಗತ್ಯವಾಗಿ ಓಡಾಡುವಂತಹ ವಾಹನಗಳು ತಡೆದು ದಂಡ ವಿಧಿಸುತ್ತಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಟ ಪ್ರತಿಯೊಂದು ವಾಹನವನ್ನು ಚೆಕ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕರೋನಾ ರೋಗ ಇವರನ್ನು ಬಾಧಿಸಬಹುದು. ಆದರೆ ಇದನ್ನೆಲ್ಲ ಲೆಕ್ಕಿಸದೇ ನಾಗರಿಕರ ಹಿತಾಸಕ್ತಿಗಾಗಿ ಅವರ ರಕ್ಷಣೆಗಾಗಿ ಪೋಲಿಸರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಅನವಶ್ಯಕವಾಗಿ ಹೊರಗಡೆ ಬರುವ ಜನತೆಗೆ ಲಾಠಿ ಬಿಸಿ ಮುಟ್ಟಿಸುತ್ತಾ ಹೊರಗಡೆ ಬರದಂತೆ ಎಚ್ಚರಿಕೆ ನೀಡುತ್ತಿರುವ ಇಂತಹ ಪೋಲಿಸರಿಗೊಂದು ಸಲಾಂ. ವರದಿ –. ಆನಂದ ಸಿಂಗ್ ಕವಿತಾಳ