ಡಾ!! ಎ ಪಿ ಜೆ ಅಬ್ದುಲ್ ಕಲಾಂ  ಗ್ರಾಮೀಣಾಭಿವೃದ್ಧಿ ಸಂಸ್ಥೆ ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ…..

Spread the love

ಡಾ!! ಪಿ ಜೆ ಅಬ್ದುಲ್ ಕಲಾಂ  ಗ್ರಾಮೀಣಾಭಿವೃದ್ಧಿ ಸಂಸ್ಥೆ ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ…..

ಜೀವನದಲ್ಲಿ ಬಂದು ಹೋಗುವ ಮೌಲ್ಯಯುತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ ಎಂದು ಆರ್ ಡಿ ಸಿ ಸಿ ಬ್ಯಾಂಕ್ ರಾಯಚೂರು ನಿರ್ದೇಶಕರಾದ ಬಸವರಾಜ್ ಗೌರಾ ಅವರು ಹೇಳಿದರು,

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಡಾ, ಎ ಪಿ ಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ಚಾಲನೆ ನೀಡುವ ಮೂಲಕ ಮಾತನಾಡಿದರು, ಈಗಿನ ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುವ ಮೂಲಕ ಯುವಕರು ಮುಂದಾಗಿದ್ದಾರೆ, ಇತ್ತೀಚಿನ ದಿನಗಳಲ್ಲಿ ಸಿಗುತ್ತಿರುವ ಅವಕಾಶಗಳನ್ನು ಹಿಂದಿನ ಕಾಲದಲ್ಲಿ ಸಿಗುತ್ತಿರಲಿಲ್ಲ ಹಿರಿಯರು ಕಿರಿಯರು ಎಂಬ ಯಾವುದೇ ಭೇದಭಾವವಿಲ್ಲದೆ ಈ ತರಬೇತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬಹುದು ಎಂದು ಮಾತನಾಡಿದರು, ನಂತರ ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಶಾಖ ನಿಡಗುಂದಿಕೊಪ್ಪ ಮಾತನಾಡಿದರು, ಡಾ, ಎ ಪಿ ಜೆ ಅಬ್ದುಲ್ ಕಲಾಂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಮಹಮ್ಮದ್ ಗೌಸ್ ಆರಬಳ್ಳಿನ ಮಾತನಾಡಿದರು, ಹಾಗೂ ಕಾರ್ಯದರ್ಶಿಗಳಾದ ಅಬ್ದುಲ್ ರಜಾಕ್ ಹಿರೇಮನಿ ಅವರು ಈ ನಮ್ಮ ಮುಧೋಳ ಗ್ರಾಮದಲ್ಲಿ ಪ್ರಥಮವಾಗಿ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು ನೀಡುತ್ತಿದ್ದು ನುರಿತ ಶಿಕ್ಷಕರಿಂದ ತರಬೇತಿಯನ್ನು ನೀಡುತ್ತದೆ ಪ್ರತಿಯೊಬ್ಬರೂ ಈ ತರಬೇತಿಯಲ್ಲಿ ಭಾಗವಹಿಸಬಹುದು, ಪ್ರಾಸ್ತವಿಕವಾಗಿ ಮಾತನಾಡಿದ ಜಗದೀಶ್ ಬಳಿಗಾರ್ ಶಿಕ್ಷಕರು ಮತ್ತು ಬಸವರಾಜ್ ಶಿಳ್ಳಿನ ವಕೀಲರು ಹಾಗೂ ಅಮೀರ್ ಬನ್ನೂರು ರಾಜ್ಯ ಸಂಚಾಲಕ ಕಿದ್ನಿ ಫೌಂಡೇಶನ್ ಕರ್ನಾಟಕ ಮಾತನಾಡಿದರು, ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಶಿವಾನಂದ ಅರಬರ, ಉಪಾಧ್ಯಕ್ಷರಾದ ಚಂದ್ರಾಭಾಯಿ ಕುದರಿ, ತ್ರಿಲಿಂಗೇಶ್ವರ ವಿದ್ಯಾವರ್ಧಕ ಕಮಿಟಿ ಅಧ್ಯಕ್ಷರು ಚಂದ್ರು ದೇಸಾಯಿ, ಕೊಪ್ಪಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರತನ್ ದೇಸಾಯಿ, ಮುಖಂಡರಾದ ಕಳಕಪ್ಪ ಕಂಬಳಿ  ನಿವೃತ್ತ ಸಾರಿಗೆ ನಿಯಂತ್ರಣ ಅಧಿಕಾರಿಗಳಾದ ಉಮೇಶ್ ವಿವೇಕಿ, ನಾಗಪ್ಪ ಓಲಿ, ವೀರಣ್ಣ ತಮಿನಾಳ, ದಾವಲ್ ಸಾಬ್ ಮೋತೆಖಾನ್, ಖಾಜಾಸಬ್ ಹಿರೇಮನಿ, ಗ್ರಾಮದ ಇನ್ನು ಹಲವಾರು ಉಪಸ್ಥಿತರು ಭಾಗವಹಿಸಿದ್ದರು,

ವರದಿ – ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *