ಸಿಂಧನೂರಿನಲ್ಲಿ “ಬಹುತ್ವ ಭಾರತದದ ಭಾವೈಕ್ಯತೆ ಸಮಾವೇಶ” ಯಶಸ್ವಿಯಾಗಿ ಜರುಗಿತು.  

Spread the love

ಸಿಂಧನೂರಿನಲ್ಲಿಬಹುತ್ವ ಭಾರತದದ ಭಾವೈಕ್ಯತೆ ಸಮಾವೇಶಯಶಸ್ವಿಯಾಗಿ ಜರುಗಿತು.  

ದಿನಾಂಕ 8-05-2022 ರಂದು 20 ಕ್ಕೂ ಹೆಚ್ಚು ವಿವಿಧ ಜಾತಿ ಜನಾಂಗದ  ಸಂಘಟನೆಯ ಅಧ್ಯಕ್ಷರು/ ಮುಖಂಡರು  ಭಾಗವಹಿಸಿದ್ದು ಸಮಾವೇಶಕ್ಕೆ  ವಿಶೇಷ ಮೆರುಗು ತಂದಿತು. ಬಸವಪ್ರಭು ಮಹಾ ಸ್ವಾಮಿ ಗಳು ಸೇರಿದಂತೆ ಅನೇಕರು  ಮೌಲ್ಯ ಯುತ ವಿಚಾರಗಳನ್ನು  ಜನರಿಗೆ ಉಣಬಡಿಸಿದರು. ಹಲವಾರು ವೈಚಾರಿಕ ಭಿನ್ನಾಭಿಪ್ರಾಯ ಇದ್ದಂತಹ  ಸಂಘಟನೆಗಳು  ಒಂದುಗೂಡಿ   (ದಲಿತ ಅಲ್ಪಸಂಖ್ಯಾತ ಹಿಂದುಳಿದ ಪ್ರಗತಿಪರ ಒಕ್ಕೂಟ” ರಚನೆ ಇತ್ಯಾದಿ )  ಕೆಲಸ ಮಾಡುತ್ತಿರುವುದು  ಈ ನೆಲದ ಒಳ್ಳೆಯತನಕ್ಕೆ ಸಾಕ್ಷಿಯಾಗಿದೆ.ಹಲವು ಪಕ್ಷಗಳಲ್ಲಿದ್ದರೂ, ಸಾಮಾಜಿಕ ಸಾಮರಸ್ಯ ಬೆಸೆಯುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತು ಶ್ರಮಿಸಿದ್ದು ಶ್ಲಾಘನೀಯ. ಸಿಂಧನೂರಿನ ಬಹುತೇಕ ಜನರು ಸ್ವತಂತ್ರವಾಗಿ ಯೋಚಿಸುವ ಸ್ವಾತಂತ್ರ್ಯ ವಾಗಿ ತೀರ್ಮಾನಿಸುವ  ಪ್ರೌಢತೆಯುಳ್ಳವರಾಗಿದ್ದಾರೆ.  ಎಲ್ಲಾ ಧರ್ಮ, ಜಾತಿಯಲ್ಲಿ ಕೂಡಾ ಶಾಂತಿ ಸೌಹಾರ್ದತೆ ಬಯಸುವ ಮತ್ತು ಜಾತಿಯತೆ, ಅಸ್ಪೃಶ್ಯತೆ ಆಚರಣೆಯನ್ನು ವಿರೋಧಿಸುವ ಜನರಿದ್ದಾರೆ.ಈ ಕಾರಣದಿಂದಲೆ  ಸಿಂಧನೂರಲ್ಲಿ ಭ್ರಾತೃತ್ವ, ಶಾಂತಿ ಸೌಹಾರ್ದತೆ ಗಟ್ಟಿಯಾಗಿ ನೆಲೆಯೂರಿದೆ. ಬಸವಣ್ಣನವರ  ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದಿಸುವ ಪ್ರಗತಿಪರ ಮನಸ್ಸುಗಳು ಈ ನೆಲದಲ್ಲಿ  ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿವೆ.ಬುದ್ಧ ಬಸವ ಅಂಬೇಡ್ಕರ್, ಕನಕದಾಸ, ವಾಲ್ಮೀಕಿ  ಇತರೆ  ಮಹಾತ್ಮರ  ಆಶಯಗಳನ್ನು  ಮೈಗೂಡಿಸಿಕೊಂಡು ಬದ್ಧತೆಯಿಂದ ಬದುಕುವ ಜನರಿದ್ದಾರೆ. ಟಿಪ್ಪು ಸುಲ್ತಾನರ ತ್ಯಾಗದ  ಆದರ್ಶಗಳನ್ನು  ಮುನ್ನಡೆಸುವ ಮನಸ್ಸುಗಳು ಇಲ್ಲಿ ಸೇವೆಯಲ್ಲಿ ತೊಡಗಿವೆ. ಈ ಹಿನ್ನೆಲೆಯಲ್ಲಿ ಸಿಂಧನೂರ ವಿವಿಧ ಹೂ ಗಳ ಶಾಂತಿಯ ತೋಟವೆಂದರೆ ತಪ್ಪಾಗಲಾರದು.  ಡಿ.ಹೆಚ್.ಪೂಜಾರ

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *