ಸಂವಿಧಾನ ಹೋರಾಟದ ಬದ್ಧ ಹಕ್ಕಿಗಾಗಿ ಪೂರ್ವಭಾವಿ ಸಭೆ…..
ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂವಿಧಾನ ಬದ್ದ ಹಕ್ಕಿಗಾಗಿ ಇದೇ ದಿನಾಂಕ 20, ರಂದು ಯಲಬುರ್ಗಾ ಪಟ್ಟಣದಲ್ಲಿ ಹೋರಾಟದ ಕುರಿತಂತೆ ಪೂರ್ವ ಭಾವಿ ಸಭೆ ನಡೆಯಿತು. ಈ ವೇಳೆ ಈರಪ್ಪ ಕುಡಗುಂಟಿ ಮಾತನಾಡಿ, ತಾಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಜನಸಂಖೆ ಶೇ 75 ರಷ್ಟು ಜನಸಂಖ್ಯೆ ಹೊಂದಿದೆ. ಇನ್ನು ಸರಕಾರ ಮೀಸಲಾತಿ ಹೆಚ್ಚಳ ಮಾಡಬೇಕು. ಮತ್ತು ಇತ್ತೀಚೆಗೆ ಅಲ್ಪಸಂಖ್ಯಾತರ ಮೇಲೆ ಶೋಷಣೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತರಿಗೆ ಶೋಷಣೆ ಆದಂತೆ ನಮ್ಮದಲಿತರಿಗೂ ತೊಂದರೆ ಅನುಭವಸ ಬೇಕಾಗುತ್ತದೆ. ಆದ್ದರಿಂದ ನಾವುಗಳು ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ಕರೆ ತರಬೇಕು ಎಂದು ಹೇಳಿದರು, ಪೂರ್ವ ಭಾವಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯರುಗಳಾದ ವಸಂತ ಭಾವಿಮನಿ, ಹನಮಂತಪ್ಪಭಜಂತ್ರಿ, ಮುಖಂಡರುಗಳಾದ ಅಂದಪ್ಪ ಹಾಳಕೇರಿ, ಪುಟ್ಟರಾಜ ಪೂಜಾರ, ನಾಗಪ್ಪ ವಡ್ಡರ, ರೀಯಾಜ್ ಖಾಜಿ, ಮಾನಪ್ಪ ಪೂಜಾರ, ನಾಗರಾಜ ತಲ್ಲೂರ, ಡಿ, ಕೆ, ಪರಶುರಾಮ ಶಿವಾನಂದ ಬಣಕಾರ, ಓಬಳಪ್ಪ ಕುಲಕರ್ಣಿ, ದೇವೇಗೌಡ ತಿಪ್ಪನಾಳ ಗುಂಡನಗೌಡ ಸಾಲಭಾವಿ, ಛತ್ರಪ್ಪಛಲವಾದಿ, ಸೀನಪ್ಪ ಪೂಜಾರ,ಶೇಖರಪ್ಪ ರಾಠೋಡ, ರಾಜಪ್ಪ ಹಗೆದಾಳ, ರಮೇಶ ಹುಲೇಗುಡ್ಡಬಾಲರಾಜ ತಾಳಕೇರಿ, ಚನ್ನಬಸವ ಕುಲಕರ್ಣಿ, ಬಲವಂತ ಕಲ್ಲೂರ್ ವೆಂಕಟೇಶ ನಾಯ್ಕ, ಶ್ರೀಕಾಂತಗೌಡ ಮಾಲಿ ಪಾಟೀಲ್ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು, ವರದಿ – ಹುಸೇನಬಾಷಾ ಮೋತೆಖಾನ