ತಹಸಿಲ್ದಾರ್ ಕಚೇರಿಗೆ ದಿಡಿರ್ ಬೇಟಿ ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್..
ಬೆಳಗಾವಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಬೆಳಂ ಬೆಳಿಗ್ಗೆ ನಗರದ ತಹಸಿಲ್ದಾರ ಕಚೇರಿಗೆ ಬೇಟಿ ನೀಡಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ತಹಸಿಲ್ದಾರ ಕಚೇರಿ ಮತ್ತು ಬೆಳಗಾವಿಒನ್ ಸೇವಾ ಕೇಂದ್ರಕ್ಕೆ ದಿಡಿರ್ ಬೇಟಿ ನೀಡಿದ್ದು ಅಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಸಾರ್ವಜನೀಕರಿಗೆ ಸಮರ್ಪಕ ಸೇವೆ ನೀಡುವಂತೆ ಸೂಚನೆ ನೀಡಿದ ಅವರು ಮಾಸ್ಕ ಹಾಕದೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಚೇರಿ ಕೆಲಸಕ್ಕೆಂದು ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸರಿಯಾಗಿ ಆಸನ ವ್ಯವಸ್ಥೆ ಮಾಡಿಎಂದು ಹೇಳಿದ ಅವರು ಸಿಬ್ಬಂದಿಗಳಾದ ನೀವುಗಳೇ ಮಾಸ್ಕ ಹಾಕಿಕೊಂಡಿಲ್ಲ ಸರಕಾರದ ಆದೇಶವಿರುವುದು ನಿಮಗೆ ಗೊತ್ತಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡಿದ್ದು ಕೊರೋನಾ ತಡೆಗಟ್ಟಲು ಸಾರ್ವಜನೀಕರಿಗೆ ಕುಳಿತಕೊಳ್ಳಲು ಬಾರದಂತೆ ಆಸನಗಳನ್ನು ಮುಂದೆ ಸರೆಸಿ ಇಟ್ಟಿದ್ದೇವೆ ಎಂದು ಹೇಳುತ್ತಿರಿ ನಿಮ್ಮ ಮಾಸ್ಕಗಳು ಎಲ್ಲಿವೆ. ಮಾಸ್ಕ ಹಾಕದಿದ್ದರೆ ಕೊರೋನಾ ಬರುತ್ತದೆ ಕುರ್ಚಿ ಮೇಲೆ ಕುಳಿತರೆ ಅಲ್ಲಾ ಎಂದು ಕ್ಲಾಸ್ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಕಚೇರಿಯ ಸಮಯವಾದರೂ ಕಚೇರಿಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಜಿಲ್ಲಾಧಿಕಾರಿಗಳು. ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗೆ ನೋಟೀಸ್ ನೀಡುವಂತೆ ಆದೇಶಿಸಿದರು.
ವರದಿ – ಮಹೇಶ ಶರ್ಮಾ