ಯೋಗೋತ್ಸವಕ್ಕೆ ಚಾಲನೆ : ಹಂಪಿ ವಿಜಯ ವಿಠ್ಠಲ ಆವರಣದಲ್ಲಿ ಮೊಳಗಿದ ಪ್ರಣವ ಭ್ರಾಮರಿ…….

Spread the love

ಯೋಗೋತ್ಸವಕ್ಕೆ ಚಾಲನೆ : ಹಂಪಿ ವಿಜಯ ವಿಠ್ಠಲ ಆವರಣದಲ್ಲಿ ಮೊಳಗಿದ ಪ್ರಣವ ಭ್ರಾಮರಿ…….

ಯೋಗ ವಿಶ್ವವಿದ್ಯಾಲಯಕ್ಕೆ ಹಂಪಿ ಯೋಗ್ಯ : ಅವಧೂತ ವಿನಯ್ ಗುರೂಜಿ  (ಹಂಪಿ): ವಿಜಯನಗರ ಸಾಮ್ರಾಜ್ಯದ ಕೇಂದ್ರ ಸ್ಥಾನ ಹಂಪಿಯಲ್ಲಿ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಲು ಯೋಗ್ಯ ಸ್ಥಳ ಎಂದು ಅವಧೂತ ವಿನಯ್ ಗುರೂಜೀ ಅಭಿಪ್ರಾಯಪಟ್ಟರು. ಭಾನುವಾರ ಐತಿಹಾಸಿಕ ಹಂಪಿ ಪರಿಸರದ ವಿಜಯವಿಠ್ಠಲ ದೇವಸ್ಥಾನದ ಪ್ರಾಂಗಣದಲ್ಲಿ ವಿಶ್ವಯೋಗ ದಿನದ ಪೂರ್ವಭಾವಿಯಾಗಿ ಪ್ರತಿ ಭಾನುವಾರ ಹಂಪಿ ಸ್ಮಾರಕಗಳ ಪ್ರಾಂಗಣದಲ್ಲಿ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ, ಆಯುಷ್ಯ ಇಲಾಖೆ, ಶ್ವಾಸ ಯೋಗ ಸಂಸ್ಥೆ ಹಾಗೂ ಪತಂಜಲಿ ಯೋಗ ಸಂಸ್ಥೆಗಳು ಸಹಯೋಗದಲ್ಲಿ ಹಮ್ಮಿಕೊಂಡ ಯೋಗ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅವರು ಹಂಪಿಯ ಪರಿಸರ ಯೋಗ್ಯ ಮತ್ತು ವೈಜ್ಞಾನಿಕವಾಗಿ ನಿರ್ಮಾಣವಾದ ತೆರೆದ ವಿಶ್ವವಿದ್ಯಾಲಯವಾಗಿದ್ದು ಇಂತಹ ವಾತಾವರಣ ಹಂಪಿಯಲ್ಲಿ ಮಾತ್ರ ಸಾಧ್ಯ ಈ ಕಾರಣಕ್ಕಾಗಿ ಯೋಗ ವಿಶ್ವವಿದ್ಯಾಲಯ ಈ ಸ್ಥಳದಲ್ಲಿಯೇ ಅಗುವುದು ಸೂಕ್ತ, ಯೋಗೋತ್ಸವ ಡ್ರೋಣ್ ನಲ್ಲಿ ಕಂಡಿದ್ದು ಯೋಗ ವಿಜ್ಞಾನ, ನಮ್ಮ ಸಂಸ್ಕೃತಿಯ ಭಾಗವಾಗಿ ಹಾಗೂ ಜೀವನ ಪದ್ದತಿಯಾಗಿ ರೂಪಗೊಳ್ಳುತ್ತದೆ ಈ ಹಿನ್ನೆಲೆಯಲ್ಲಿ ಹಂಪಿಯ ಪರಿಸರದಲ್ಲಿ ನಡೆಯುತ್ತಿರುವುದು ಯೋಗ ವಿಶೇಷವಾಗಿದೆ ಸದೃಢ ಮನಸ್ಸಗಳು ಸದೃಡ ನಾಡುಕಟ್ಟಲು ಸಹಕಾರಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಮಾತನಾಡಿ ವಿಶ್ವದಲ್ಲಿ ಆರೋಗ್ಯ ಬಗ್ಗೆ ಜಾಗೃತಿ ಮೂಡುತ್ತಿದೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಯೋಗ ಅವಶ್ಯಕವಾಗಿದೆ ಎಂದರು. ಆಯುಷ್ಯ ಇಲಾಖೆಯ ಅಧಿಕಾರಿ ಡಾ.ಡಾ.ಸುಜಾತ ಪಟೀಲ್, ಪತಂಜಲಿ ಯೋಗ ಸಮಿತಿಯ ಭವರ್ ಲಾಲ್ ಆರ್ಯ್ಯ ಮಾತನಾಡಿದರು.ಬೆಳಿಗ್ಗೆ 6 ಗಂಟೆಗಾಗಲೇ ನೂರಾರು ಜನ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಚಿವ ಆನಂದ್ ಸಿಂಗ್ ಯೋಗದಲ್ಲಿ ಶ್ವಾಸ ಗುರು ವಚನಾನಂದ ಸ್ವಾಮೀಜಿ ಯೋಗ ಪಾಠ ಹಾಗೂ ಅದರ ಮಹತ್ವದ ಕುರಿತು ಮಾಹಿತಿಯೊಂದಿಗೆ ಯೋಗಾಭ್ಯಾಸ ಮಾಡಿಸಿದರು.

ವರದಿ – ವಿ.ಜೆ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *