ವಿಶೇಷ ಲೇಖನ – ಜಗವ ಗೆದ್ದ ಬುದ್ಧ.
ಸಮಾಜ ಸುಧಾರಕರಲ್ಲಿ ಬುದ್ಧ ರವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ, ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಜೊತೆಗೆ ಲೋಕ ಕಲ್ಯಾಣಕ್ಕಾಗಿ ಇಡೀ ಅವರ ಜೀವನ ಸಮಾಜದ ಉನ್ನತಿಗಾಗಿ ತ್ಯಾಗ ಮಾಡಿ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷಿಯಾಗಿ ನಿಂತಿದ್ದಾರೆ.ಸಾಮಾಜಿಕ ಅಸಮಾನತೆಯನ್ನು ಕುರಿತು ಪ್ರತಿಭಟನಾತ್ಮಕ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಮೂಲಕ ತಳಸಮುದಾಯದ ಶೋಚನೀಯ ಬದುಕನ್ನು ಹಸನಗೊಳಿಸುವ ಕಾರ್ಯ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.
ಆದರೆ ಇಂದಿನ ಸಮಾಜದಲ್ಲಿ ಕ್ರೌರ್ಯದ ಸ್ವರೂಪವು ಮಾತ್ರ ಪ್ರಬಲಗೊಳ್ಳುತ್ತಲೆ ಮುನ್ನೆಲೆಗೆ ಬರುತ್ತಿದೆ. ಈ ಸಂದರ್ಭದ ಒತ್ತಡವನ್ನು ಪ್ರತಿರೋಧಿಸುವ ವಿಭಿನ್ನ ಆಯಾಮಗಳಲ್ಲಿ ಇಲ್ಲಿ ಎದುರಾಗುತ್ತಲಿವೆ. ಈ ಹಿನ್ನೆಲೆಯಲ್ಲಿ
ಉಳ್ಳವರ ಸಿರಿತನದ ದಾಹಕ್ಕೆ ಬಲಿಯಾಗುವ ದಮನಿತರ ಸ್ಥಿತಿಯನ್ನು ಕಂಡು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಜನಸಾಮಾನ್ಯರ ನೋವಿನ ದೃಶ್ಯವನ್ನು ನಾವೆಲ್ಲರೂ ಕಣ್ಣಾರೆ ಕಾಣುತ್ತಿದ್ದೇವೆ.ಇದಲ್ಲದೆ ಜಾತಿ, ಧರ್ಮದ ಹೆಸರಿನಲ್ಲಿ ಮೂಲಭೂತವಾದ ಮತ್ತು ಕೋಮುವಾದವು ದಿನದಿಂದ ದಿನಕ್ಕೆ ವಿಕೃತ ಸ್ವರೂಪವನ್ನು ತಾಳುತ್ತಿದೆ. ಆದರೆ ಇಲ್ಲಿ ಮಾನವೀಯ ಅಂತಃಕರಣದ ನೆಲೆಯಲ್ಲಿ ನಿಂತು ಅನ್ಯಧರ್ಮಿಯ ವಿರುದ್ಧ ಮಾತನಾಡುವುದು ಸೇರಿ ಅನೇಕ ಹಿಂಸಾತ್ಮಕ ಕೆಲಸದಲ್ಲಿ ಕೆಲ ವ್ಯಕ್ತಿಗಳು ನಿರಂತರಾಗಿದ್ದಾರೆಂದು ಹೇಳಲು ವಿಷಾದನೀಯವಾಗುತ್ತಿದೆ.
ಅನ್ಯಧರ್ಮಿಯರು ಪರಸ್ಪರ ಕಿತ್ತಾಟ ಮಾಡುವಂತಹ ಈ ಚಿಲ್ಲರೆ ಪ್ರವೃತ್ತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ ಇಲ್ಲ ಎಂಬುದನ್ನು ನಾವ್ಯಾರು ಮರೆಯಬಾರದು. ಸಾಮಾಜಿಕ ಬದುಕಿನಲ್ಲಿ ಮನುಷ್ಯನ ವರ್ತನಗೆ ಬೇಸತ್ತು,ಮನುಷ್ಯ ಮನುಷ್ಯನ ನಡುವೆ ನಿರ್ಮಾಣಗೊಂಡಿರುವ ಅಸಮಾನತೆಯನ್ನು ಮೆಟ್ಟಿನಿಲ್ಲುವ ನೆಲೆಯಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕಾಗಿದು ಅನಿವಾರ್ಯವಾಗಿದೆ.ಈ ಗುಣಗಳು ಸರ್ವಧರ್ಮಿರಲ್ಲಿ ಮೂಡಿದಾಗ ಮಾತ್ರ ಇಂದಿನ ಆಧುನಿಕ ಸಮಾಜದಲ್ಲಿ ಸಮತವಾದದ ಮೌಲ್ಯಾಧಾರಿತ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಅದಕ್ಕಾಗಿ ಅಸಮಾನತೆ, ಅನ್ಯಾಯ, ಶೋಷಣೆ ಹಾಗೂ ಡಂಭಾಚಾರಗಳನ್ನು ಬೆರಳು ಮಾಡಿ ತೋರುವ
ಸಮಾಜದಲ್ಲಿನ ಅಸಮಾನ ನೆಲೆಗಳನ್ನು ಮೆಟ್ಟಿನಿಂತು, ಸಮಸಮಾಜವನ್ನು ಬಯಸುವ ಮತ್ತು ಕಟ್ಟುವ ಆಶಯ ನೀತಿಯ ಇವರ ತತ್ವಗಳನ್ನು ಮುನ್ನೆಲೆಗೆ ತರುವ ಕೆಲಸವನ್ನು ತುರ್ತಾಗಿ ಮಾಡಬೇಕಾದ ಸನ್ನಿವೇಶ ಸಧ್ಯ ಎದುರಾಗಿದೆ.ಆದರಿಂದ ವರ್ತಮಾನದಲ್ಲಿ ಬುದ್ಧರ ತತ್ವಗಳು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕತೆ ಇದೆ.
ಶತಮಾನಗಳಿಂದ ಶೋಷಣೆಗೆ ಗುರಿಯಾಗಿರುವ ದಮನಿತರ ಬದುಕಿಗಾಗಿ ಬೆಳಕೊಂದನ್ನು ನೀಡುವ ನಿಟ್ಟಿನಲ್ಲಿ, ನಿರ್ಲಕ್ಷಕ್ಕೆ ಒಳಗಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಎಷ್ಟೋ ಸಮುದಾಯದ ಜಗತ್ತಿನ ಜನರ ದನಿಯಾಗಿ ನಿಲ್ಲುವ ಮೂಲಕ ಜಗವ ಗೆದ್ದವರು ನಮ್ಮ ಬುದ್ಧರು. ಜಗವ ಗೆದ್ದ ಬುದ್ಧರ ಆದರ್ಶ ತತ್ವಗಳು :
ಭಗವಾನ ಬುದ್ಧರು ಆಸೆಯೇ ದುಖಃಕ್ಕೆ ಮೂಲ ಎಂದು ಸಾರಿದ ಇವರು,ಇವರ ತತ್ವಗಳ ಸಾರವನ್ನು ತಿಳಿಸುವ ಈ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಹಾಗೂ ವರ್ತಮಾನದ ಈ ಕಾಲಕ್ಕೆ ಪ್ರೇರಣೆಯಾಗಿವೆ.ಶೋಕವಿಲ್ಲದ ನಾಡು, ವ್ಯಕ್ತಿಯ ನಿರ್ಮಾಣ ಬುದ್ಧನ ಆಶಯವಾಗಿತ್ತು. ತನ್ನ ಬಿಕ್ಕು ಸಂಘಗಳ ಮೂಲಕ ಎಲ್ಲರನ್ನೂ ತಲುಪುವ ಮತ್ತು ಶೋಕವಿಲ್ಲದ ನೈಜ ಪ್ರಜಾ ಪ್ರಭುತ್ವದ ನಾಡನ್ನು ಕಟ್ಟುವ ಧ್ಯೇಯ ಹೊಂದಿದ್ದರು.ಅಂತೆಯೇ ಬುದ್ಧ ಸರ್ವ ಜನಾಂಗದವರು ಒಪ್ಪಿಕೊಳ್ಳುವ ಮಹಾನ್ ವ್ಯಕ್ತಿಯಾಗಿದ್ದಾರೆ.ಹಾಗಿಯೇ ಇವರನ್ನು ಜಗವ ಗೆದ್ದ ಬುದ್ಧ ಎಂದು ಜನಸಾಮಾನ್ಯರು ಪ್ರೀತಿಯಿಂದ ಕರೆಯುತ್ತಾರೆ. ಆದುದರಿಂದಲೇ
ಇವರ ಧ್ಯೇಯ ಒಂದೇ ಕಟ್ಟ ಕಡೆಯ ವ್ಯಕ್ತಿಯೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳಬೇಕೆಂಬ ನೀತಿ ಇವರದಾಗಿತ್ತು. ಹಾಗೆ ಮಾನವನ ಉಜ್ವಲ
ಭವಿಷ್ಯ ರೂಪಿಸುವುದು ಇವರ ಪ್ರಮುಖ ಮುಖ್ಯ ಗುರಿಯಾಗಿತ್ತು ಎನ್ನುವುದು ಮರೆಯುವಂತಿಲ್ಲ.ಆದಕಾರಣ ನಾವೆಲ್ಲರೂ ಇವರ ಆದರ್ಶ ನಿಲುಗಳು, ಇವರು ಕೊಟ್ಟ ತತ್ವಗಳನ್ನು ವರ್ತಮಾನ ಈ ಕಾಲದ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಸಂತೋಷದಿಂದ ಬಾಳಲು ಸಾಧ್ಯ ಎನ್ನುವುದು ಸುಳ್ಳಲ್ಲ ಬಂಧುಗಳೆ. ವ್ಯಕ್ತಿಯು ವರ್ತಮಾನ ಕಾಲದಲ್ಲಿ ಶುದ್ಧ ಮನಸ್ಸಿನಿಂದ ಹಾಗೂ ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆ ಸದುದ್ದೇಶದ ಈಡೇರಿಕೆಗಾಗಿ ನಿರಂತರ ನಿಸ್ವಾರ್ಥ ಪ್ರಯತ್ನವನ್ನು ಮಾಡುತ್ತಲಿದ್ದರೆ ಅವನ ಇಡೀ ಜೀವಮಾನವೇ ಸಾರ್ಥಕ ಕಾಣಲಿದೆ. ಏಕೆಂದರೆ ಭವಿಷ್ಯತ್ ಕಾಲವು ವರ್ತಮಾನ ಕಾಲಕ್ಕೆ ಬಂದೇ ಭೂತಕಾಲಕ್ಕೆ ಸೇರುತ್ತದೆಯಾದುದರಿಂದ ವರ್ತಮಾನ ಕಾಲವನ್ನು ವ್ಯರ್ಥಮಾಡದಿರೆಂಬ ನೀತಿಯು ಬುದ್ಧನದಾಗಿತ್ತು. ಹೀಗಾಗಿ ಈ ಮಾಹಾತ್ಮರ ತತ್ವಗಳ ಬಗೆ ವರ್ತಮಾನದಲ್ಲಿ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎನ್ನುವುದು ಮರೆಯಬೇಡಿ.ವಿಪರ್ಯಾವೆಂದರೆ ಮನುವಾದಿ ವ್ಯವಸ್ಥೆ ಈ ದಾರ್ಶನಿಕರನ್ನು ಸಹಾ ಆವರಿಸಿಕೊಂಡು ಬಿಟ್ಟಿದೆ. ಇವರ ತ್ಯಾಗ ಸ್ಫೂರ್ತಿ ಇಂದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುವುದೇ ಅತ್ಯಂತ ನಾಚಿಕೆಯ ವಿಚಾರ, ಅರ್ಥಹೀನ ವಿಚಾರಗಳನ್ನು ನಾಡಿನಲ್ಲಿ ಪ್ರಸಾರ ಮಾಡುವ ವ್ಯಕ್ತಿಗಳ ಬಗ್ಗೆ ಜಾಗೃತಿ ನಾವೆಲ್ಲರೂ ವಹಿಸಬೇಕು ಹಾಗೂ ಈ ದಾರ್ಶನಿಕರ ತತ್ವಗಳನ್ನು ಹೆಚ್ಚು ಹೆಚ್ಚಾಗಿ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಪ್ರಗತಿಪರ ವಿಚಾರಧಾರೆಯ ಚಿಂತಕರು ಮಾಡಬೇಕಾಗಿದೆ.ಆದಕಾರಣ
ವರ್ತಮಾನದಲ್ಲಿ ಬುದ್ಧರು ಹೇಳುವ ವೈಚಾರಿಕ ಮಾತುಗಳನ್ನು ನಾವು ಅನುಸರಿಸಿಕೊಂಡು ಹೋದರೆ ನಮ್ಮ ಜೀವನದಲ್ಲಿ ನಾವು ಯಶಸ್ಸನ್ನು ಕಾಣಬಹುದು. ಈ ನಿಟ್ಟಿನಲ್ಲಿ ಬುದ್ಧರ ಸ್ವಾಭಿಮಾನಿ ಚಳವಳಿ ಮೊದಲು ದಲಿತ ಕೇರಿಗಳಿಂದ ದಲಿತೇತರ ಬೀದಿಗಳಿಗೂ ಹಬ್ಬಿ ಅವರ ವಿಚಾರ, ತತ್ವಸಿದ್ಧಾಂತಗಳು ಸರ್ವಜನರ ಕಲ್ಯಾಣಕ್ಕಾಗಿ, ಸ್ವಾಭಿಮಾನಿ ನಾಡಿನ ಹುಟ್ಟಿಗಾಗಿ, ಮಾನವೀಯತೆಯ ಅಭಿವೃದ್ಧಿಗಾಗಿ ಸರ್ವಸ್ವವನ್ನೂ ಧಾರೆಯೆರೆದಿದ್ದಾರೆ ಹಾಗೆ ದುಡಿದಿದ್ದಾರೆ.
ಇವರ ತತ್ವಗಳನ್ನು ಪಾಲಿಸಿಕೊಂಡು ಬಂದಲ್ಲಿ ಅಂದರೆ ವರ್ತಮಾನದ ವಿಶ್ವದಲ್ಲಿ ಖಂಡಿತಾ ಶಾಂತಿ ನೆಲೆಸುತ್ತೆ. ಈ ಸಾಧಕರ ಎಲ್ಲಾ ವಿಚಾರಗಳೂ ಎಲ್ಲ ಕಾಲಕ್ಕೂ ಪೂರ್ಣ ಪ್ರಮಾಣದಲ್ಲಿ ಪ್ರಸ್ತುತವಾಗದಿರಬಹುದು. ಆದರೆ ಸಾಧಕರ ಚಾರಿತ್ರಿಕ ಮಹತ್ವದ ತತ್ವಗಳು ಸದಾಕಾಲದಲ್ಲೂ ಜೀವಂತವಾಗಿರುತ್ತದೆ. ಕೆಲವು ಮುಖ್ಯ ಆಶಯಗಳು ಸಮಕಾಲೀನ ಮಹತ್ವ ಮತ್ತು ಪ್ರಸ್ತುತತೆಯನ್ನು ಪಡೆದಿರುತ್ತವೆ. ಹಾಗಾಗಿ ಇವರ ನಿಲುವು ಸಮಾಜ ಮುಖಿ ಚಳವಳಿಯ ಕೆಲವು ಪ್ರಮುಖ ವಿಚಾರಗಳೂ ಪರಿಕಲ್ಪನೆಗಳೂ ಇಂದಿಗೂ ಪ್ರಸ್ತುತವೆನಿಸುತ್ತವೆ. ಈ ದಾರ್ಶನಿಕರ ಚಳವಳಿಯೊಳಗಿನ ಆಂತರಿಕ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆದರ್ಶದ ಸಮಾಜದ ಮಾದರಿಯೆಂದು ಪರಿಗಣಿಸಬೇಕು ಮತ್ತು ಇವರ ಚಿಂತನೆಗಳು ಇಂದಿನ ಸಮಾಜದಲ್ಲಿ ಚರ್ಚೆಯಾಗುವುದು ವಿಶೇಷ ಅಲ್ಲ. ಅಸ್ಪೃಶ್ಯರಲ್ಲದವರ ನಡುವೆ ಇವು ಹೆಚ್ಚು ಚರ್ಚೆಯಾಗಬೇಕು. ದೇಶದ ಎಲ್ಲಾ ಸಮಾಜ ಬಾಂಧವರು ಬುದ್ಧ ರವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ
ಜಯಂತಿ ಆಚರಣೆ ಮಾಡುವುದು ಒಳ್ಳೆಯದು. ನಮ್ಮ ಬದುಕನ್ನು ಪರಿವರ್ತಿಸುವ ಪ್ರತಿಮೆಗಳು ಎಂದು ಅನ್ವಯಿಸಿಕೊಂಡರೆ ಆಗ ಜಗತ್ತಿನಲ್ಲಿ ಅಂದರೆ ಈ ಕ್ಷಣದಲ್ಲಿ, ನನ್ನೊಳಗೆ ಪರಿವರ್ತನೆಯಾಗುವುದು ಸಾಧ್ಯ. ಆದ್ದರಿಂದ ಮಾನವೀಯ ಮಹಾಸಾಧಕರಾದ ಇವರು ವಿಶ್ವದ ಸುದ್ದಿ ಕೇಂದ್ರವಾಗಿದ್ದಾರೆ.ಸಮಾಜಿಕ, ಶೈಕ್ಷಣಿಕ ಕ್ರಾಂತಿಯ ಕಾರಣಕ್ಕಲ್ಲ, ಇವತ್ತಿನ ಧಾರ್ಮಿಕ ಹಕ್ಕೊತ್ತಾಯ ಮತ್ತು ರಾಜಕೀಯ ಕಾರಣಗಳಿಗಾಗಿ, ಸದಾ ಅರಿವು, ಐಕ್ಯತೆ ಮತ್ತು ಪ್ರಯತ್ನಶೀಲತೆಯನ್ನು ಉಳಿಸಿಕೊಂಡಿರಬೇಕೆಂಬ ಇವರ ಮೂಲಮಂತ್ರಗಳು ಇದ್ದ ಕಾರಣಗಳಿಂದ ಇವರ ಚಿಂತನೆಗಳು ಈ ವರ್ತಮಾನದ ಕಾಲದ ಮನುಕುಲದ ಉದ್ಧಾರಕ್ಕಾಗಿ ಅವಶ್ಯಕತೆ ಇದ್ದೆ ಇದೆ. ಇವರ ಬದುಕು ಮತ್ತು ಆಚರಣೆಯಿಂದ ಕಲಿಯಬೇಕಾದ್ದು ಬಹಳಷ್ಟು ಇದೆ ಎನ್ನುವುದನ್ನು ಅರಿತು, ನಮ್ಮ ಮೂಲ ಅಭಿವೃದ್ಧಿ – ಆನಂದ ಆಶಯಕ್ಕಾಗಿ ಎಂದೂ ದಣಿವರಿಯದ ದುಡಿಮೆ ಮಾಡಬೇಕು, ನಂಬಿದ ತತ್ವಕ್ಕಾಗಿ ಎಂದು ಹಿಂದೆ ಸರಿಯಬಾರದು. ದಿಟ್ಟತನ ಮತ್ತು ಆಶಾವಾದ
ಈ ಕಾಲ ನಮ್ಮೆದುರು ದೀರ್ಘ ನಡಿಗೆಯ ಸವಾಲನ್ನು ಇರಿಸಿದೆ ಎನ್ನುವುದು ಸುಳ್ಳಲ್ಲ ಹಾಗಾಗಿ ಸವಾಲನ್ನು ಸ್ವೀಕರಿಸಿ ಮುನ್ನಡೆಯಲು ಇವರ ವಿಚಾರಗಳ ಚೇತನ ಸ್ಪೂರ್ತಿದಿಂದ ವಿಶ್ವಾಸವನ್ನು ಪಡೆದುಕೊಳ್ಳೋಣ.
ಉಪಸಂಹಾರ: ಸರ್ವರ ಜನರ ದನಿಯಾದ ಬುದ್ಧ ಲವರ ತತ್ವಾದರ್ಶಗಳು ಇಂದಿನ ಪ್ರಸ್ತುತ ಜಗತ್ತಿನ ಸಮಾಜಕ್ಕೆ ಅನಿವಾರ್ಯ ಎನ್ನುವುದು ಯಾರು ಮರೆಯುವಂತಿಲ್ಲ.ಹಾಗಾಗಿ ಬುದ್ಧ ರವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಿದಾಗ ಮಾತ್ರ ವರ್ತಮಾನ ಕಾಲ, ಅಭಿವೃದ್ಧಿಯ ಕಾಲವಾಗಲಿದೆ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳುವ ಮೂಲಕ ಸತ್ಯದ ಸನ್ಮಾರ್ಗದಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನ ಮಾಡೋಣ ಜೊತೆಗೆ ಇವರು ಹೇಳಿರುವ ಸಮಾನತೆ, ಸಹಬಾಳ್ವೆ, ಸಾಮಾಜಿಕ ಕ್ರಾಂತಿಕಾರಿ ಚಿಂತನೆಗಳು ಜನಮಾನಸಕ್ಕೆ ಮುಟ್ಟಿಸುವ ಕೆಲಸ ನಿರಂತರವಾಗಿ ಮಾಡೋಣ.ಆದ್ದರಿಂದ ಸ್ವಹಿತಾಸಕ್ತಿಯ ಸಾಧನವಾಗಿ ಇವರನ್ನು ದಯವಿಟ್ಟು ಯಾರು ಬಳಸಬೇಡಿ. ನಾವು ಎಂದಿನಂತೆ ಗೌರವಿಸುತ್ತೇವೆ. ಗೌರವಿಸುತ್ತಲೇ ವಿಶ್ಲೇಷಿಸುತ್ತೇವೆ. ವಿಶ್ಲೇಷಿಸುತ್ತ ಸಮಕಾಲೀನಗೊಳಿಸುತ್ತೇವೆ. ಬುದ್ಧ ರವರ ಸೌಹಾರ್ದ ಸಮತಾ ಸಾಧಕರ ಜತೆಗೂಡಿಸಿ ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದಿಗಳಿಗೆ ನೈತಿಕ ಪಾಠ ಹೇಳುತ್ತೇವೆ. ಸ್ವಾರ್ಥ ರಾಜಕಾರಣ ಮತ್ತು ಧರ್ಮಕಾರಣಗಳಿಗೆ ಉತ್ತರಿಸುತ್ತ ಹೋಗುತ್ತೇವೆ.ಹೀಗೆ ಇವರ ತತ್ವಗಳನ್ನು ಜೀವಶಕ್ತಿಯಾಗಿಸುತ್ತೇವೆ.ಇದು ನಮ್ಮಂಥವರ ವಿನಯಪೂರ್ವಕ ಆಶಯ.
ಆಶಯ ಮಾತು – ಪರಿವರ್ತನೆಯ ಆಶಯದ ವಿಚಾರವಾದ ವ್ಯಕ್ತಿಯ ಜತೆಗೆ ಸಮೂಹದ ಪರಿವರ್ತನೆಗೆ ನಾಂದಿ ಹಾಡುತ್ತದೆ.ವಿಚಾರವಂತರು ಶ್ರೀಮಂತರಾಗಲ್ಲ. ಅವರ ವಿಚಾರಗಳೇ ದೊಡ್ಡ ಶ್ರೀಮಂತಿಕೆ. ಅವರೆಂದೂ ಅಮಿಷಗಳ ಜತೆ ಹೋಗುವುದಿಲ್ಲ. ಹೋಗಬಾರದು. ಹಿತಾಸಕ್ತಿಯ ಜತೆಗೆ ಹೋದಾಗ ವಿಚಾರವಾದಕ್ಕೆ ಗೆಲುವು ತಂದು ಕೊಡಲು ಹೇಗೆ ಸಾಧ್ಯ? ನಾವೂ ಕೂಡಾ ಮೂಲಭೂತವಾದ, ಜಾತಿವಾದದ ಜತೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಯಾವತ್ತಿಗೂ ಅಂತಹ ಪ್ರಮೇಯ ಬರುವುದಿಲ್ಲ ಎನ್ನುವ ವಿಚಾರಗಳನ್ನು ಇಂದಿನ ಜನಸಾಮಾನ್ಯರಲ್ಲಿ ಮೂಡಲಿ ಎನ್ನುವುದೇ
ಈ ಲೇಖನದ ಬಯಕೆ ಹಾಗೂ ಶಾಂತಿಯ ನಾಡಲಿ ಅಶಾಂತಿಯನ್ನು ಸೃಷ್ಟಿಸಿ, ಸಮಾನತೆಯ ಜಾಗದಲ್ಲಿ ಅಸಮಾನತೆಯನ್ನು ಸೃಷ್ಟಿಸಿ, ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವಂತಹ ಅಮಾನವೀಯ ಸಮಾಜದಲ್ಲಿ ಸಮಾನತೆಯ ಸಮಾಜದ ಕನಸು ಕಾಣುವ ಜೀವಸೆಲೆ ಈ ದಾರ್ಶನಿಕರ ಉಜ್ವಲ್ ಭವಿಷ್ಯದ ತತ್ವಗಳಾಗಿವೆ ಬಂಧುಗಳೆ.
ಲೇಖಕರು :ಸಂಗಮೇಶ ಎನ್ ಜವಾದಿ,ಬೀದರ ಜಿಲ್ಲೆ.