ವಿವಿಧ ಕಾಮಗಾರಿಗಳು  ಇತರೆ ಇಲಾಖೆಗಳ ಸಲಕರಣೆಗಳ ಉದ್ಘಾಟನೆ ….

Spread the love

ವಿವಿಧ ಕಾಮಗಾರಿಗಳು  ಇತರೆ ಇಲಾಖೆಗಳ ಸಲಕರಣೆಗಳ ಉದ್ಘಾಟನೆ ….

ಯಲಬುರ್ಗಾ: ಪಟ್ಟಣ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳು, ತಾಲೂಕು ಪಂಚಾಯತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ನೀಡಿದ ಅಮೃತ ಕಿರು ಉದ್ದಿಮೆ ಚಕ್ ವಿತರಣೆ, ವಿಕಲಚೇತನರಿಗೆ ವೀಲ್ ಚೇರ್ ವಿತರಣೆ, ಮಹಿಳ ಸ್ವಸಹಾಯ ಸಂಘಗಳಿಗೆ ಯಂತ್ರಗಳ ವಿತರಣೆ, ಮಾಸಿಕ ಸಂತೆಗೆ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಅವರು ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಿರು ಉದ್ಯಮ ಸ್ಥಾಪನೆಗಾಗಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಚೆಕ್ ವಿತರಣೆ ಮಾಡಿದರು. ತಾಲೂಕು ಪಂಚಾಯತ ಅನುದಾನದಡಿ ವಿಕಲಚೇತನ ಸ್ವ ಸಹಾಯ ಸಂಘಗಳಿಗೆ ಜೀವನೋಪಾಯ ಚಟುವಟಿಕೆ ಕೈಗೊಳ್ಳುವ ಯಂತ್ರಗಳು ಮತ್ತು ವೀಲ್ ಚೇರ್  ವಿತರಣೆ ಮಾಡಿದರು. ಸಂಜೀವಿನಿ ತಾಲೂಕು ಅಭಿಯಾನದ ನಿರ್ವಹಣಾ ಘಟಕ ಯಲಬುರ್ಗಾದಡಿ ಮಹಿಳಾ ಸ್ವ ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮೇಳ ಮತ್ತು ಮಾಸಿಕ ಸಂತೆ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸ್ವಚ್ಛ ಭಾರತ ಯೋಜನೆಯಡಿ ಬೆವೂರು ಸ್ವಚ್ಛ ಸಂಕೀರ್ಣ ಘಟಕ, ಚಿಕ್ಕಮ್ಯಾಗೇರಿ ಸ್ವಚ್ಛ ಸಂಕೀರ್ಣ ಘಟಕ,  ಡಿಜಿಟಲ್ ಲೈಬ್ರೇರಿ, ಅಂಗನವಾಡಿ ಕೇಂದ್ರಗಳಿಗೆ ವಿವಿಧ ಆಟಿಕೆ ಸಾಮಾನುಗಳು, ಗ್ರಾಮ ಪಂಚಾಯಿತಿಗಳ ವಿವಿಧ ಯೋಜನೆಗಳಡಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಉದ್ಘಾಟಿಸಿದರು. ಮಾನ್ಯ ಜಿಲ್ಲಾಧಿಕಾರಿಗಳಾದ ವಿಕಾಸ್ ಸುರಾಳ್ಕರ್, ಜಿಲ್ಲಾ ಪಂಚಾಯತ ಕೊಪ್ಪಳ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫೌಜಿಯಾ ತರನ್ನುಮ್, ತಾಲೂಕು ತಹಸೀಲ್ದಾರ್ ರಾದ ಶ್ರೀಶೈಲ್ ತಳವಾರ, ತಾ.ಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಹೊಸಮನಿ, ಬಿ ಇ ಓ ಯಲಬುರ್ಗಾ ಮೌನೇಶ್ ಬಡಿಗೇರ್, ಅಕ್ಷರ ದಾಸೋಹ ಎಫ್ ಎಮ್ ಕಳ್ಳಿ, ಸಹಾಯಕ ನಿರ್ದೇಶಕರಾದ ಮಹೇಶ್ ಎಚ್., ನಿಂಗನಗೌಡ, ಗೀತಾ ಅಯ್ಯಪ್ಪ, ಪ,ಪಂ ಅಧ್ಯಕ್ಷರಾದ ಅಮರೇಶ್ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಳಕಪ್ಪ ತಳವಾರ ಹಾಗೂ ತಾ.ಪಂ ಸಿಬ್ಬಂದಿ, ವಿವಿಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ಗ್ರಾಮಗಳ ಸ್ವಸಹಾಯ ಸಂಘದ ಮಹಿಳೆಯರು ಇನ್ನು ಹಲವಾರು ಉಪಸ್ಥಿತರಿದ್ದರು,

ವರದಿ – ಹುಸೇನ್ ಭಾ಼ಷ ಮೋತೆಖಾನ್

Leave a Reply

Your email address will not be published. Required fields are marked *