ಕುಷ್ಟಗಿ ತಾಲೂಕಿನ ಯಲಬುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಪ್ರಾರಂಭವಾಗಿದ್ದು, ಶೈಕ್ಷಣಿಕ ಪಠ್ಯ ತರಗತಿಗಳನ್ನು ಇಂದು ಗಿಡಕ್ಕೆ ನೀರೆರೆಯುವ ಮೂಲಕ ಪುನಾರಂಭಿಸಿದರು.
ಮುಖ್ಯ ಗುರುಗಳಾದ ಸಿದ್ದಯ್ಯ ಗುರುವಿನ ಅವರ ನೇತೃತ್ವದಲ್ಲಿ ಶಾಲೆಯ ಎಲ್ಲ ಕೊಠಡಿಗಳನ್ನು ಬಿಸಿಯೂಟ ಕೋಣೆ ಹಾಗೂ ಶಾಲಾ ಆವರಣವನ್ನು ಸ್ವಚ್ಚ ಗೊಳಿಸಿ ರಂಗೋಲಿ ಹಾಕಿ ಶಾಲಾ ಮುಂಭಾಗದಲ್ಲಿ ತೆಂಗಿನ ತಳಿರು ತೋರಣಗಳಿಂದ ಸಿಂಗರಿಸಿ ಮದುವಣಗಿತ್ತಿಯಂತೆ ಸಿಂಗರಿಸಿ ಮಕ್ಕಳಿಗೆ ಹೂ ಹಾಗೂ ಚಾಕಲೇಟ್ ನೀಡಿ ಶಾಲೆಗೆ ಬರ ಮಾಡಿಕೊಂಡರು. ಊರಿನ ಬೀದಿ ಬೀದಿ ಗಳಲ್ಲಿ ಸಂಚರಿಸಿ ಮಕ್ಕಳು ಬ್ಯಾನರ್ ಹಿಡಿದು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಘೋಷಣೆ ಕೂಗುತ್ತ ಶಾಲೆಯತ್ತ ಹೆಜ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಶ್ರೀಮತಿ ಲಕ್ಷ್ಮೀಬಾಯಿ ಹೊನ್ನಪ್ಪ ಅಳ್ಳಳ್ಳಿ ಅಧ್ಯಕ್ಷರು ಗ್ರಾ.ಪಂ. ಹಿರೇಬನ್ನಿಗೋಳ ಶ್ರೀ ಆದಪ್ಪ ಬಳೂಟಗಿ ಗ್ರಾ.ಪಂ.ಸ,ಶ್ರೀ ಧರ್ಮಣ್ಣ ಛೋಪಡೆ ಗ್ರಾ.ಪಂ.ಸ,ಶ್ರೀ ಮತಿ ಹುಸೇನಬೀ ಬನ್ನೆಟ್ಟಿ ಗ್ರಾ.ಪಂ.ಸ,ಶ್ರೀ ಜಯಪ್ಪ ಭೋಸ್ಲೆ ಪಾಲಕರು ಶ್ರೀಮತಿ ರೇಣುಕಾ ಬಂಡಿ ಅಂ.ಕಾ, ಶಾಲಾ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು,
ವರದಿ – ಹುಸೇನ್ ಭಾ಼ಷ ಮೋತೆಖಾನ್