ಕಲಿಕಾ ಚೇತರಿಕೆ ಕಲಿಕೆಯ ಕೊನೆಯವರೆಗೂ ಇರಲಿ : ಸಂಗಮೇಶ ಎನ್ ಜವಾದಿ.

Spread the love

ಕಲಿಕಾ ಚೇತರಿಕೆ ಕಲಿಕೆಯ ಕೊನೆಯವರೆಗೂ ಇರಲಿ : ಸಂಗಮೇಶ ಎನ್ ಜವಾದಿ.

ಚಿಟಗುಪ್ಪಾ ಶಿಕ್ಷಕರು ಹಾಗೂ ಮಕ್ಕಳಲ್ಲಿ ಶಾಲಾ ಆರಂಭೋತ್ಸವದಂದು ಇರುವ ಉತ್ಸಾಹ, ಉತ್ತೇಜನ ಕಲಿಕೆಯ ಕೊನೆಯವರೆಗೂ ಇರಬೇಕು.ಅಂದಾಗ ಮಾತ್ರ ವಿಧ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಾಹಿತಿ, ಪತ್ರಕರ್ತ ಸಂಗಮೇಶ ಎನ್ ಜವಾದಿಯವರು ಹೇಳಿದರು. ನಗರದ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2022 – 23 ನೇ ಶೈಕ್ಷಣಿಕ ವರ್ಷದ ಕಲಿಕಾ ಚೇತರಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು  ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸುವುದೇ ಸರಕಾರಿ ಶಾಲೆಯ ಮುಖ್ಯ ಗುರಿಯಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳು, ಸಮಾಜಿಕ ಹೊಣೆಗಾರಿಕೆ, ದೇಶ ಪ್ರೇಮ, ಭಾವೈಕ್ಯತೆಯ ನೀತಿಯ ಪಾಠಗಳನ್ನು ಸಹ ಬೋಧಿಸುವ ಮತ್ತು ಬಿತ್ತುವ ಕೆಲಸ ಆಗಬೇಕು.ಅಂದಾಗಲೇ ಶಿಕ್ಷಣ ಯೋಜನೆಗಳ ಗುರಿ ತಲುಪಲು ಸಾಧ್ಯ. ಜೊತೆಗೆ ಭಾರತೀಯ ಸಂಸ್ಕೃತಿ ವಿಶ್ವದಾದ್ಯಂತ ಬೆಳಗುತ್ತದೆ ಎಂದು ತಿಳಿಸಿದರು. ಶಿಕ್ಷಣ ಸಂಯೋಜಕ ಮಾಧವರಾವ ಮಾತನಾಡಿ ಕೋವಿಡ್ ಕಾರಣದಿಂದ ಹಲವು ದಿನಗಳ ಕಾಲ ವಿಧ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿದಿರುವುದರಿಂದ ಈ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಆಚರಣೆ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕು ಎಂದರು. ಸಿ ಆರ್ ಪಿ ಸುಭಾಷ್ ಚವ್ಹಾಣ ಮಾತನಾಡಿ ಪ್ರಾರಂಭದ ಹದಿನೈದು ದಿವಸಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಕಲಿಕಾ ಮಟ್ಟ ಹೆಚ್ಚಿಸಬೇಕೆಂದು ತಿಳಿಸಿದರು. ಸಮಾಜಿಕ ಕಾರ್ಯಕರ್ತ ಅಸ್ಲಾಂ ಸ್ವೀಟ್ಸ್ ಹೌಸ್ ಮಾತನಾಡಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು  ಅದಕ್ಕಾಗಿ ಮಕ್ಕಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರುಬಾಯಿ ಪವಾರ್ ರವರು ಮಾತನಾಡಿ 2022 -23 ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಆಚರಣೆ ಮಾಡಲಾಗುತ್ತಿದೆ. ಈ ಸಮಯದಲ್ಲಿ ಮಕ್ಕಳಿಗೆ ಅಕ್ಷರ ಪಾಠಗಳ ಜೊತೆಗೆ ಅವರ ಕಲಿಕಾ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಅವರ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಹೆಚ್ಚು ಶ್ರಮ ವಹಿಸಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀನಿವಾಸ ಕೊಡಂಬಲ, ಉಪಾಧ್ಯಕ್ಷರಾದ ಶಬಾನಾಬೇಗಂ, ಶಿಕ್ಷಕರಾದ ಅಂಬಿಕಾ, ಪಂಚಶೀಲಾ, ಬಸವರಾಜ ಮೇತ್ರೇ, ರೇವಣ್ಣಪ್ಪಾ, ಗುಂಡಪ್ಪಾ ಕೋರೆ, ಸಂಜೀವ ಬೊಸ್ಲೇ,ಮಶ್ವಲೀನ,ಆಪ್ರೀನಾ ಫಾತಿಮಾ,ಸಾದಿಯಾ ಸುಲ್ತಾನ್ ಸೇರಿದಂತೆ ಮಕ್ಕಳ ಪಾಲಕರು ಹಾಜರಿದ್ದರು.

ವರದಿ – ಸಂಗಮೇಶ ಎನ್.ಜವಾದಿ.

Leave a Reply

Your email address will not be published. Required fields are marked *