ತಾವರಗೇರಾದಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಆದ್ಯತೆ ನೀಡಿದ ಅಮರೇಶ ಕುಂಬಾರ್.

Spread the love

ತಾವರಗೇರಾದಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಆದ್ಯತೆ ನೀಡಿದ ಅಮರೇಶ ಕುಂಬಾರ್.

 

2023ರ ವಿಧಾನಸಭಾ ಚುನಾವಣೆಯ ಜಿದ್ದಾ/ಜಿದ್ದಿ ನಡುವೆ ಪ್ರಭಾವ ಬಿರುತ್ತಿರುವ ಕೆಲವು ಯುವ ಮುಖಂಡರುಗಳಿಂದ  ಕೆಲವು ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಇದನ್ನು ಚುನಾವಣಾ ವರ್ಷ ಎಂದು ಕರೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ತಾವರಗೇರಾ ನ್ಯೂಸ್  ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೆ ಮಾತನಾಡಲು ಪ್ರಯತ್ನಿಸಿದೆ. ಅದರಂತೆ ಮೊದಲ ಬಾರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಅಮರೇಶ್ ಕುಂಬಾರ್ ಅವರು ನಮ್ಮ ಜೊತೆಗೆ ಮಾತನಾಡಿದ್ದಾರೆ.

*ಯುವ ಕಾಂಗ್ರೆಸ್ ಮುಖಂಡ ಸ್ಥಾನದ ಜವಾಬ್ದಾರಿ ಹೇಗೆ ಪಡೆದಿರಿ?ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕನಾಗಿದ್ದೆ. ಪಕ್ಷದಲ್ಲಿ ನನ್ನ ನಿಷ್ಠೆ ಹಾಗೂ ಸೇವೆಯನ್ನು ಗುರುತಿಸಿ ಹಿರಿಯರು ನನ್ನನ್ನು ಯುವ ಕಾಂಗ್ರೆಸ್ ಮುಖಂಡ ನನ್ನಾಗಿ ಆಯ್ಕೆಮಾಡಿದರು. ಯುವ ಕಾಂಗ್ರೆಸ್ಸಿನ ಎಲ್ಲ ಮಿತ್ರರ ಸಹಾಯ ಮತ್ತು ಅವರ ಬೆಂಬಲದೊಂದಿಗೆ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ.

* ತಾವರಗೆರಾ ದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಯುವ ಕಾರ್ಯಕರ್ತರಿಗೆ ಯಾವ ಯಾವ ಜವಾಬ್ದಾರಿಗಳು ಇವೆ?
ಮುಂದಿನ ವರ್ಷ ಚುನಾವಣೆ ಇರುವುದರಿಂದ ಸಹಜವಾಗಿ ಯುವಕಾಂಗ್ರೆಸ್ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದೇವೆ.

* ಮುಂಬರುವ ವಿಧಾನಸಭಾ ಚುನಾವಣೆಗೆ ತಾವರಗೇರಾದಲ್ಲಿ ಯುವ ಕಾಂಗ್ರೆಸ್ ಹೇಗೆ ಸಿದ್ಧತೆ ನಡೆಸಿದೆ?
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಪ್ರತಿ ತಾವರಗೇರಾ ಪಟ್ಟಣ ಹಾಗೂ ಗ್ರಾಮೀಣ ಭಾಗದ ಬೂತ್ ಮಟ್ಟದಲ್ಲಿ ಯುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ, ಜವಾಬ್ದಾರಿ ನೀಡಿ ಪಕ್ಷದ ಸಂಘಟನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳು ಸಾಧನೆಗಳ ಕುರಿತು ಮತದಾರರಿಗೆ ಮನವರಿಕೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಹಾಗೂ ಚುನಾವಣೆಗೆ ನೆರವಾಗಲಿದೆ.

* ಯುವ ಕಾಂಗ್ರೆಸ್ ಮುಖಂಡರಾಗಿ ನೀವು ಯಾವ ಯಾವ ಕಾರ್ಯಗಳನ್ನು ಹಮ್ಮಿಕೊಂಡಿದ್ದೀರಿ?
ಯುವ ಕಾರ್ಯಕರ್ತರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತೈಲ ದರ ಏರಿಕೆ ಮತ್ತು ರೈತ ವಿರೋಧಿ ನೀತಿಗಳು, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಆಹಾರ ಪೊಟ್ಟಣಗಳನ್ನು ಪೂರೈಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪ್ರತಿಭಾ ಪುರಸ್ಕಾರಗಳನ್ನು ನೀಡಿದ್ದೇವೆ. ತಾಲೂಕ ಮಟ್ಟದವರೆಗೂ ಯುವ ಕಾಂಗ್ರೆಸ್ ಸದೃಢ ಗೊಳಿಸಲಾಗಿದೆ.

ಕುಷ್ಟಗಿ ವಿಧಾನಸಭಾ ಚುನಾವಣೆಗೆ ಕುಷ್ಟಗಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು?
ಅದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತೆ. ಯಾರೇ ಅಭ್ಯರ್ಥಿಯಾದರೂ ಸರಿ ಹಿರಿಯರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವೆವು. ಕಾಂಗ್ರೆಸ್ ಭದ್ರಕೋಟೆಯಾದ ಕುಷ್ಟಗಿಯಲ್ಲಿ ಮತದಾರರು ಅಮರೇಗೌಡ ಪಾಟೀಲ್ ಬಯ್ಯಾಪುರ ಸಾಹೇಬರ ಆಡಳಿತದಲ್ಲಿ ಜಾರಿಯಾಗಿದ್ದ ಜನಪರ ಕಾರ್ಯಕ್ರಮಗಳನ್ನು, ಅವರ ವ್ಯಕ್ತಿತ್ವವನ್ನು ಸ್ಮರಿಸುತ್ತಿದ್ದಾರೆ. ಈ ಬಾರಿಯೂ ಕುಷ್ಟಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ಖಚಿತ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *