ಮುಧೋಳದಲ್ಲಿ ಮಳೆಗಾಗಿ ಮಕ್ಕಳಿಂದ ಗುರ್ಜಿ ಪೂಜೆ, ಪ್ರಾರ್ಥನೆ.
ಯಲಬುರ್ಗಾ: ರೈತರು ಜಮೀನು ಹಸನು ಮಾಡಿ ಮಳೆಗಾಗಿ ಕಾಯುತ್ತಿದ್ದು, ತಾಲ್ಲೂಕಿನ ಸಮೀಪದ ಮುಧೋಳ. ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಗುರ್ಜಿ ಪೂಜೆಯನ್ನು ಮಾಡಲಾಯಿತು. ಪ್ರಾರ್ಥಿಸುತ್ತ ಗ್ರಾಮದ ಪ್ರತಿಯೊಂದು ಮನೆಗೆ ಸುಣ್ಣ ಕೊಡತಿನಿ ಸುರಿ ಮಳೆಯೇ ಎಂದು ಹಾಡುತ್ತಾ ಮನೆ ಮನೆಗೆ ತೆರಳಿ, ನೀರು ಹಾಕಿಸಿಕೊಂಡರು. ಪ್ರತಿ ಮನೆಯಲ್ಲೂ ದವಸ ಧಾನ್ಯ ಪಡೆದರು. ಗ್ರಾಮದ ದೇವಸ್ಥಾನಗಳಿಗೆ ತೆರಳಿ ವರುಣನಿಗಾಗಿ ಪ್ರಾರ್ಥಿಸಿ ಪೂಜೆ, ಜನಪದ ಹಾಡು ಗುರ್ಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೇ, ಕಪ್ಪತ ಮಳೆಯೇ, ಸುರಿ ಮಕ್ಕಳು ಗುರ್ಜಿ ಹೊತ್ತುಕೊಂಡು ಮಳೆಗಾಗಿ ಸುರಿಯೇ ಮಳೆರಾಯ, ಬಣ್ಣ ಕೊಡತಿನಿ ಬಾ ಮಳೆಯೆ ಎಂದು, ಸಲ್ಲಿಸಿದರು.
ವರದಿ – ಹುಸೇನಬಾಷಾ ಮೊತೇಖಾನ್