“ಯಾವುದೇ ಸೇವಾ ಗೌರವಧನ ಭತ್ಯೆಯ ಭದ್ರತೆಯಿಲ್ಲದೆ ಬಿಸಿಯೂಟ ಅಡುಗೆಯ ಮಹಿಳಾ ನೌಕರರನ್ನು ಬೀದಿಗೆ ತಳ್ಳಿದ ರಾಜ್ಯ ಸರ್ಕಾರ” ಕೇಂದ್ರ ಸರ್ಕಾರ ಸಂಬಂಧಪಟ್ಟ ಇಲಾಖೆ?
ಅಥಣಿ: 2000ನೇಯ ಇಸವಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ರವರು ಸರ್ಕಾರಿ ಶಾಲೆಗೆ ಬರುವ ಮಕ್ಕಳು ಮಧ್ಯಾಹ್ನದ ಊಟದ ಸಮಯದಲ್ಲಿ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಅಕ್ಷರ ದಾಸೋಹವೆಂಬ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಅದೇ ಗ್ರಾಮದಲ್ಲಿರುವ ಬಡಕುಟುಂಬದ ಮಹಿಳೆಯರಿಗೆ ಉದ್ಯೋಗ ಕೊಡಿಸುವ ದ್ರೃಷ್ಟಿಯಿಂದ ತಿಂಗಳಿಗೆ ಬರೀ ಅಡುಗೆಯ ಮುಖ್ಯ ಮೇಲ್ವಿಚಾರಕಿಯರಿಗೆ ರೂ 250 ಮುಖ್ಯ ಅಡುಗೆಯವರಿಗೆ ರೂ150 ಅಡುಗೆಯ ಸಹಾಯಕರಿಗೆ ರೂ150 ಇಷ್ಟು ಕಡಿಮೆ ಗೌರವಧನವನ್ನು ನೀಡುವುದರ ಮೂಲಕ ಕೆಲಸಕ್ಕೆ ಸೇರಿಸಿಕೊಂಡಿದೆ. ಆದರೆ ಅಲ್ಲಿಂದ ಇಲ್ಲಿಯವರೆಗೆ 21 ವರ್ಷಗಳ ಕಾಲ ಮಧ್ಯದಲ್ಲಿ ಬಂದು ಹೋಗಿರುವ ಸರ್ಕಾರಗಳು ಕಾಟಾಚಾರಕ್ಕೆ ಒಂದಿಷ್ಟು ಸಂಬಳ ಹೆಚ್ಚಿಸಿ ಈಗ ಇವರಿಗೆ ಕೊಡುವ ತಿಂಗಳ ಗೌರವ ಧನ ಕೇವಲ 2600ರೂ ಮಾತ್ರ. ಆದರೆ ಇಂದಿನ ಆಡಳಿತ ಸರ್ಕಾರ ಈ ಬಿಸಿಯೂಟ ಅಡುಗೆಯ ಮಹಿಳಾ ಸಿಬ್ಬಂದಿಗಳನ್ನು 60ವರ್ಷದ ವಯೋಮಿತಿಯ ನೆಪವಿಟ್ಟುಕೊಂಡು ಈ ವರ್ಷದ ಜೂನ್ ಶಾಲಾ ಪ್ರಾರಂಭದ ಸಂದರ್ಭದಲ್ಲಿ ಇವರನ್ನು ಕೆಲಸದಿಂದ ತೆಗೆಯಬೇಕೆಂಬ ತುರ್ತು ಆದೇಶದ ಸುತ್ತೋಲೆ ಹೊರಡಿಸಿ ಪೂರ್ವಾಪರ ಆಲೋಚಿಸಿದೇ ಜಾರಿಗೆ ತರುವುದರ ಮೂಲಕ ಇಷ್ಟು ಕಡಿಮೆ ಸಂಬಳದಲ್ಲಿ ದುಡಿಸಿಕೊಂಡು ಅವರಿಗೆ ಯಾವುದೇ ಸೇವಾ ಭದ್ರತೆ ಇಲ್ಲದೆ ದಿಢೀರನೆ ಈ ಮಹಿಳೆಯರನ್ನು ಬೀದಿಗೆ ತಳ್ಳಿರುವ ಇಂದಿನ ಆಡಳಿತ ಸರ್ಕಾರ. ಅದೇ ಕೆಲಸವನ್ನೇ ನಂಬಿರುವ ಈ ಮಹಿಳೆಯರು ಈ ದುಡಿಮೆಯಿಂದ ಬಂದ ಸಂಬಳದಲ್ಲಿ ಕುಟುಂಬ ನಿರ್ವಹಿಸುತ್ತಿರುವ ಅನೇಕ ಶ್ರೀಸಾಮಾನ್ಯ ಬಡ ಕುಟುಂಬಗಳ ಪರಿಸ್ಥಿತಿ ತುಂಬಾ ಚಿಂತಾಜನಕವಿದೆ. ಬರೀ ಅಥಣಿ ತಾಲೂಕಿನಲ್ಲಿಯೇ 45 ಬಿಸಿಯೂಟ ಅಡುಗೆ ತಯಾರಿಸುವ ಮಹಿಳೆಯರನ್ನು ತೆಗೆದು ಹಾಕದ್ದಾದರೇ ಇಡೀ ರಾಜ್ಯಾದ್ಯಂತ 6600 ಮಹಿಳೆಯರಿದ್ದು ಹೀಗಿರುವಾಗ ಸರ್ಕಾರ ತಾನು ತೆಗೆದುಕೊಂಡ ನಿರ್ಧಾರದಿಂದ ಮುಂದಿನ ಇವರ ಭವಿಷ್ಯದ ಬದುಕಿನ ಬಗ್ಗೆಯಾಗಲಿ ಅಥವಾ ಇವರೊಂದಿಗೆ ಸಮಾಲೋಚನೆಯ ಚರ್ಚೆಯಾಗಲಿ ಮಾಡದೇ ಕೊನೆಗೆ ಗೌರವ ಸೇವಾ ಭದ್ರತೆಯ ಭತ್ಯೆಯನ್ನು ನೀಡುವವರೆಗಾದರೂ ಕೆಲಸ ಮಾಡುವ ಅವಕಾಶ ಕೊಟ್ಟು ನಂತರ ಈ ಮಹಿಳೆಯರನ್ನು ಕೆಲಸದಿಂದ ತೆಗೆದು ಬಿಡುವ ನಿರ್ಧಾರಕ್ಕೆ ಬರುವುದು ಸೂಕ್ತವೆನಿಸುತ್ತದೆ. ಜಾರಿಗೆ ತಂದ ಆದೇಶವನ್ನು ಹಿಂಪಡೆದು ಮಹಿಳೆಯರನ್ನು ಮರುನೇಮಕ ಮಾಡಿಕೊಳ್ಳದಿದ್ದರೆ ಅಥವಾ ಇವರಿಗೆ ಸೇವಾ ಗೌರವಧನಭತ್ಯೆಯನ್ನು ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಇನ್ನಾದರೂ ರಾಜ್ಯ ಆಡಳಿತ ಸರ್ಕಾರದ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳು ಈ ಮಹಿಳೆಯರ ಮತ್ತು ಇವರ ಕುಟುಂಬದ ಮುಂದಿನ ಭವಿಷ್ಯದ ಉಪಜೀವನದ ಬಗ್ಗೆ ಆಲೋಚಿಸಿ ನಿರ್ಧಾರ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸೂಕ್ತವೆನಿಸುತ್ತದೆ. ಬಡ ಕುಟುಂಬದಿಂದ ಅಡುಗೆ ಸಿಬ್ಬಂದಿಗಳು ಇದ್ದಾರೆ ಅವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ? ಸಂಬಂಧಪಟ್ಟವರು ಬಡ ಹೊಟ್ಟೆಯ ಮೇಲೆ ಹೊಡೆಯದಂತೆ ನೋಡಿಕೊಳ್ಳುತ್ತಾರೆ? “ನಾನು ಬಳ್ಳಿಗೇರಿ ಬಿ ಬಿ ಇಮ್ಮಡಿ ಸರ್ಕಾರಿ ಪ್ರೌಢಶಾಲೆ ಒಳಗೆ ಅಡಿಗಿ ಮಾಡುತಿದ್ನೀರಿ ಆದ್ರ ಈ ಸರ್ಕಾರ ನಮನ ಇಷ್ಟ ದಿನ ಕಡಿಮಿ ಪಗಾರದಾಗ ದುಡಸ್ಕೊಂಡು ಈಗ ಹೇಳ್ದ ಕೇಳ್ದೆ ನಮ್ಮನ್ನ ಕೆಲಸದಿಂದ ತಗ್ದ ನಮಗ ಯೋವುದೇ ಸೇವಾ ಗೌರವ ಧನ ಭತ್ಯೆ ಕೊಡಲಾರ್ದ ನಮ್ಮನ್ನ ಬಿಡಿಸಿ ಬೀದಿಗಿ ತಳ್ಳಿದ್ರ ನಾಂವ್ ಬದುಕುದ್ಯಾಂಗ್ರೀ ಈ ಸರ್ಕಾರಕ್ಕ್ ಇವರಿಗೀ 60 ವರ್ಷ ವಯಸ್ಸಾದದ್ದ್ ಗೊತೈತಿ.ಆದ್ರ ವಯಸ್ಸಾದ ಮ್ಯಾಲ ಇವರ ಜೀವನಾ ಹೆಂಗ್ ನಡೆಸಬೇಕು ಅನ್ನೂದರೆ ಗೊತ್ತಾಗಾಂಗಿಲೆನ್ರೀ ಈ ಸರ್ಕಾರದವರೀಗಿ ನಮಗ ಬದಕಾಕ ಸೇವಾಗೌರವಧನ ಭತ್ಯೆಯರ ಕುಡ್ರೀ ಇಲ್ಲಾ ಅಂದ್ರ ಮತ್ತ್ ನಮ್ನ ಕೆಲ್ಸಕ್ಕಾದ್ರು ತೊಗೊಳ್ರಿ.ನಮಗ ನ್ಯಾಯ ಸೀಗುತಕ ಸಾಲಿ ಮುಂದ ಧರ್ಣಿನ ಕುಂಡತಿವರೀ ಆಗ್ ಮುಂದ ಆಗುದಕೆಲ್ಲಾ ಈಗೀನ ಸರ್ಕಾರನ ಹೋಣೆ ರ್ರೀ”.ಇನ್ನೇನಾದರೂ ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟವರು ಮಾನ್ಯ ಶಾಸಕರು ಇತ್ತ ಕಡೆ ಗಮನಹರಿಸಿ ಅಕ್ಷರ ದಾಸೋಹ ಬಿಸಿ ಊಟ ಅಡುಗೆ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಂಡು ಅವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ ಅಥವಾ ನಿಗೂಢ? ಶ್ರೀಮತಿ ಸುವರ್ಣಾ ಕುರಬರ. ಅಕ್ಷರ ದಾಸೋಹ ಬಿಸಿಯೂಟ ದ ಮುಖ್ಯ ಅಡುಗೆ ತಯಾರಕರು. ಬಿ ಬಿ ಇಮ್ಮಡಿ ಸರ್ಕಾರಿ ಪ್ರೌಢಶಾಲೆ ಬಳ್ಳಿಗೇರಿ. ತಾ: ಅಥಣಿ.ಜಿ: ಬೆಳಗಾವಿ. ✍️ ಹನುಮಂತ ಬಿ ಕುರಬರ.