ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ….

Spread the love

ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ….

ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ “ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ” ಯನ್ನು ಆಚರಣೆ ಮಾಡಲಾಯಿತು. ಈ ವೇಳೆ ಪ್ರಾಥಮಿಕ ಆರೋಗ್ಯ ಅಧಿಕಾರಿಗಳಾದ ಡಾ, ಪವನ್ ಕುಮಾರ್ ಅವರು ಮಾತನಾಡಿ, ಸಾರ್ವಜನಿಕರು ಡೆಂಗ್ಯೂವಿನ ಬಗ್ಗೆ ನಿರ್ಲಕ್ಷ್ಯಮಾಡಬಾರದು. ಡೆಂಗ್ಯೂವಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಹಾಗಾಗಿ ಸಾರ್ವಜನಿಕರು ತಮ್ಮಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗ್ಯೂವನ್ನು ತಡೆಗಟ್ಟಬಹುದು ಎಂದು ಹೇಳಿದರು. ನಂತರ ಆರೋಗ್ಯ ಹಿರಿಯ ನಿರೀಕ್ಷಣಾ ಅಧಿಕಾರಿ ಶಂಕ್ರಣ್ಣ ಅಂಗಡಿಯವರು ಮಾತನಾಡಿ, ಈಡಿಸ್ ಸೊಳ್ಳೆಗಳಿಂದ ಹರಡುವ ಡೆಂಗ್ಯೂವಿಗೆ ನಿರ್ದಿಷ್ಟ ಚಿಕಿತ್ಸೆ ಲಸಿಕೆ ಲಭ್ಯವಿರುವುದಿಲ್ಲ ಈಡಿಸ್ ಸೊಳ್ಳೆಗಳು ಮನೆಯವರ ಒಳಾಂಗಣ ಮತ್ತು ಹೊರಾಂಗಣದಲ್ಲಿನ ಶುದ್ಧ ನೀರಿನ ಸಂಗ್ರಹಗಳಲ್ಲಿ ಬೆಳೆಯುವುದರಿಂದ ಇದರ ನಿರ್ಮೂಲನೆಗೆ ಇತರ ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವ ಅಗತ್ಯವಾಗಿರುತ್ತದೆ, ಡೆಂಗ್ಯೂ ತಡೆಗಟ್ಟುವ ಮೂಲಕ ಬನ್ನಿ ಎಲ್ಲರೂ ಕೈಜೋಡಿಸೋಣ ಎಂದರು, ಇದೇ ಸಂದರ್ಭದಲ್ಲಿ ಗುರು ಸಿದ್ದನಗೌಡ, ಹೇಮಾಕ್ಷಿ, ಅಂಜುಮ ಬೇಗಂ, ಶಾರದಾ, ಆಶಾ ಕಾರ್ಯಕರ್ತೆಯರ ದೇವಕ್ಕ ವಡ್ಡರ, ನವೀನ ಸುರೇಶ ಇನ್ನು ಹಲವಾರು ಉಪಸ್ಥರಿದ್ದರು,

ವರದಿ – ಹುಸೇನಬಾಷಾ ಮೋತೆಖಾನ್

Leave a Reply

Your email address will not be published. Required fields are marked *