ಕೆಲಸ ಮಾಡದ ಕಾರ್ಪೊರೇಟರ್ ಗಳ ಕತ್ತಿನಪಟ್ಟಿ ಹಿಡಿದು ಮನೆ ಮುಂದೆ ಧರಣಿ ಕುಳಿತುಕೊಳ್ಳಿ.
ಪಾಲಿಕೆ ಸದಸ್ಯರ ವಿರುದ್ದ ಸಂಸದ ಪ್ರತಾಪ್ ಸಿಂಹ ಆಕ್ರೋಷ ಮೈಸೂರು ನಗರದಲ್ಲಿ ಮಳೆ ಅವಾಂತರ ಹಿನ್ನಲೆ ಹಾನಿ ಪ್ರದೇಶಗಳಿಗೆ ಪ್ರತಾಪ್ ಸಿಂಹ ಭೇಟಿ, ಪರಿಶೀಲನೆ ನಡೆಸಿದ ವೇಳೆ ಕಾರ್ಪೊರೇಟರ್ ಗಳ ಕಾರ್ಯವೈಖರಿಗೆ, ಸಂಕಷ್ಟಕ್ಕೀಡಾಗಿರುವವರ ಸಮಸ್ಯೆ ಕೇಳದ ಕಾರ್ಪೊರೇಟರ್ಗಳ ವಿರುದ್ಧ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ. ನಿಮ್ಮ ಏರಿಯಾಗಳಲ್ಲಿ ಒಳಚರಂಡಿ ಸರಿ ಇಲ್ವಾ..?ನಿಮ್ಮ ಏರಿಯಾದಲ್ಲಿ ಕಸ ತೆಗೆದಿಲ್ಲವಾ…?ನಿಮ್ಮ ಏರಿಯಾದಲ್ಲಿ ಒಳಚರಂಡಿ ತುಂಬಿ ಹರಿಯುತ್ತಿದೆಯೇ..? ನಿಮ್ಮ ಏರಿಯಾದಲ್ಲಿ ಯಾವುದೇ ಸಮಸ್ಯೆ ಇದೆ ಅಂದ್ರೆ ಆಯಾ ನಗರಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಕುಳಿತುಕೊಳ್ಳಿ. ನಗರಪಾಲಿಕೆ ಸದಸ್ಯರ ಕುತ್ತಿಗೆ ಪಟ್ಟಿ ಹಿಡಿದು ಕೆಲಸ ಮಾಡಿ ಅಂತಾ ಕೇಳಿ.ಯಾವಾಗ ನಿಮ್ಮ ಕಾರ್ಪೊರೇಟರ್ಗಳ ಕುತ್ತಿಗೆ ಪಟ್ಟಿ ಹೀಡಿತೀರಾ ಆಗಷ್ಟೇ ನಿಮ್ಮ ಕೆಲಸ ಆಗುತ್ತೆ ಎಂದು ಮೈಸೂರು ಜನತೆಗೆ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.ನಾನು ಕಾರ್ಪೋರೇಟರ್ ಕೆಲಸ ಮಾಡಬೇಕೆಂದರೂ ತೊಂದರೆಯಿಲ್ಲ. ನಾನು ಅದನ್ನು ಮಾಡ್ತೀನಿ. ಆದರೆ, ನಗರದಲ್ಲಿ 65 ಮಂದಿ ಪಾಲಿಕೆ ಸದಸ್ಯರಿದ್ದಾರೆ ಅವ್ರು ಏನ್ಮಾಡ್ತಿದ್ದಾರೆ..?ಏರಟೆಲ್ ನವರಿಗೆ ಕೇಬಲ್ ಹಾಕಲು ರಸ್ತೆ ಅಗೆಯಲು ಕೊಡುತ್ತಾರೆ. ಅದೇ ಗ್ಯಾಸ್ ಪೈಪ್ ಲೈನ್ ಗೆ ವಿರೋಧಿಸುತ್ತಾರೆ. ಈ ಮನಸ್ಥಿತಿಯವರನ್ನ ಜನ ಅರ್ಥ ಮಾಡಿಕೊಳ್ಳಬೇಕು. ಜನಕ್ಕೆ ನಾನು ಈಗ ಒಂದು ಕರೆ ಕೊಡುತ್ತೇನೆ. ಹೋಗಿ ಕಾರ್ಪೊರೇಟರ್ಗಳ ಕುತ್ತಿಗೆ ಹಿಡಿದು ಕೆಲಸ ಮಾಡಿ ಅಂತಾ ಹೇಳಿ. ಪ್ರತಿಯೊಂದಕ್ಕೂ ನಾನು ಬರುವುದಕ್ಕೆ ಆಗಲ್ಲ. ವಿದ್ಯಾರಣ್ಯಪುರಂ ಕಸ ಘಟಕದಲ್ಲಿನ ಕಸ ತೆಗೆಸುವ ಕೆಲಸವನ್ನು ನಾನೇ ಮಾಡಿಸುತ್ತಿದ್ದೇನೆ. ಗ್ರೇಟರ್ ಮೈಸೂರು ಆದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದನ್ನು ಅರಿತು ಅದಕ್ಕೂ ನಾನೇ ಓಡಾಡುತ್ತಿದ್ದೇನೆ. ಪ್ರತಿನಿತ್ಯದ ಸಮಸ್ಯೆಗೆ ನಿಮ್ಮ ನಿಮ್ಮ ನಗರಪಾಲಿಕೆ ಸದಸ್ಯರ ಮನೆ ಮುಂದೆ ಹೋಗಿ ಧರಣಿ ಕೂರುವುದನ್ನು ಕಲಿತುಕೊಳ್ಳಿ.ಆಗ ತಾನಾಗಿಯೇ ಎಲ್ಲಾ ಕೆಲಸಗಳು ಸರಿಯಾಗುತ್ತವೆ ಎಂದು ಗರಂ ಆಗಿದ್ದಾರೆ…
ವರದಿ – ಸಂಪಾದಕೀಯ