ಕೂಡ್ಲಿಗಿ:ಸ್ನೇಹಿತರ ಬಳಗದಿಂದ ಕರೋನಾ ಸೋಂಕು ತಪಾಸಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸ್ನೇಹಿತರ ಬಳಗದಿಂದ ಪಟ್ಟಣದ ಹತ್ತು ವಾರ್ಡ್ ಗಳ ನಾಗರೀಕರಿಗೆ ಉಚಿತವಾಗಿ. ಸೋಂಕು ಲಕ್ಷಣಗಳ ತಪಾಸಣೆ ಮಾಡಲಾಯಿತು.ತಹಶಿಲ್ದಾರರಾದ ಎಸ.ಮಹಾಬಲೇಶ್ವರ ರವರ ಸಹಕಾರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಷಣ್ಮುಖ ನಾಯ್ಕರವರ ಸಹಕಾರದೊಂದಿಗೆ ಪಟ್ಟಣದ ಹತ್ತು ವಾರ್ಡ್ ಗಳಲ್ಲಿನ ಪ್ರತಿಯೊಂದು ಮನೆಯ ಸರ್ವ ಸದಸ್ಯರನ್ನು ಸೋಂಕು ಪ್ರಾಥಮಿಕ ಗುಣಲಕ್ಷಣಗಳನ್ನು ತಪಾಸಣೆ ಮಾಡಲಾಯಿತು.ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರು,ಶಿಕ್ಷಕರು, ಅಧಿಕಾರಿಗಳ ನೇತೃತ್ವದಲ್ಲಿ ,ಸ್ನೇಹಿತರ ಬಳಗ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಮುಂದಾಳತ್ವದಲ್ಲಿ. ಕೂಡ್ಲಿಗಿ ಪಟ್ಟಣದ 10ವಾರ್ಡ್ ಗಳ ಪ್ರತಿಯೊಂದು ಮನೆಗಳಲ್ಲಿನ ಪ್ರತಿ ಸದಸ್ಯರಿಗೆ, ಕರೋನಾ ಪ್ರಾಥಮಿಕ ಪರೀಕ್ಷೆಗಳನ್ನ ಮಾಡಲಾಯಿತು ಸ್ಯಾನಿಟೇಷನ್, ಮಾಸ್ಕ್ ಧರಿಸುವಂತೆ ಸಾರ್ವಜನಿಕ ವಲಯದಲ್ಲಿ ಜಾಗ್ರತೆ ಮೂಡಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಟಿ.ಸಲೀಂ, ದಾದಾ ಕಲಂದರ್, ಖಾದರ್ ಭಾಷಾ, ಮುನ್ನ ಶರೀಫ್, ಮತ್ತು ಅವರ ಸ್ನೇಹಿತರೊಂದಿಗೆ ಕೊರೋನಾ ಕೋವಿಡ್ 19 ಲಕ್ಷಣಗಳ ತಪಾಸಣೆ ಮಾಡಲಾಯಿತು. ಕೆಲ ಇಲಾಖಾ ಅಧಿಕಾರಿಗಳು ಹಾಗೂ ಕೆಲ ಇಲಾಖಾ ಸಿಬ್ಬಂದಿಗಳೊಂದಿಗೆ ಪಟ್ಟಣದ10ವಾರ್ಡ್ ಗಳಲ್ಲಿನ, ಪ್ರತಿಯೊಂದು ಮನೆಗಳಿಗೆ ಸ್ನೇಹಿತರ ಬಳಗದ ತೆರಳಿ ಕರೋನಾ ಜಾಗ್ರತೆ ಮೂಡಿಸಿದರು.ಇದೇ ಸಂದರ್ಭದಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹೆಮಾನ್ ಮಾತನಾಡಿ,ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು,ಪರಸ್ಪರ ಅಂತರ ಕಾಪಾಡಬೇಕಿದೆ ಮತ್ತು ಮನೆಯಲ್ಲಿ ವಿಶ್ರಾಂತಿ ಯಾಗಿರೋದು ತುಂಬಾ ಉತ್ತಮ ಎಂದು ಸ್ನೇಹಿತರ ಬಳಗದ ಅಧ್ಯಕ್ಷರಾದ ಅಬ್ದುಲ್ ರಹೆಮಾನ್ ನುಡಿದಿದ್ದಾರೆ. ಶಿಕ್ಷಕರು ಹಾಗೂ ಶಿಕ್ಷಕಿಯರು,ಬಿಎಲಓ ರವರು,ಆರೋಗ್ಯ ಸಹಾಯಕಿಯರು,ಅಂಗನವಾಡಿ ಸಹಾಯಕಿಯರು,ಆಶಾಕಾರ್ಯಕರ್ತರು ಮತ್ತಿತರರು ತಪಾಸಣೆಯಲ್ಲಿ ಕಾರ್ಯ ನಿರ್ವಹಿಸಿದರು.
ವರದಿ – ಚಲುವಾದಿ ಅಣ್ಣಪ್ಪ