ಜುಮಲಾಪೂರ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಅತ್ತ್ಯುತ್ತಮ ಪ್ರಶೆಂಟೆಜ್,,,,
ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಜುಮಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುಮಲಾಪೂರ ಗ್ರಾಮದಲ್ಲಿ 1994 ರಲ್ಲಿ ಪ್ರಾರಂಭಗೊಂಡ ಪ್ರೌಡ ಶಾಲೆ ಶಿಕ್ಷಣ. ಅಂದಿನಿಂದ ಹಿಂದಿನವರೆಗೆ ಗಮನಿಸಿದರೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಭಾರಿ ಅತ್ಯುತ್ತಮ ಪ್ರಶೆಂಟೆಜ್ (98.50%) ಮಾಡಿರುವುದು ಶಿಕ್ಷಕರ ಅತ್ಯುತ್ತಮ ಮಾರ್ಗದರ್ಶನ ಅಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಶಾಲೆಯ ಬಾಲಕಿ ಸುಕನ್ಯಾ ಬಸಪ್ಪ ಗೊರೆಬಾಳ ಸಾ ರಾಂಪೂರ 606 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ. ನಂದೀಶ ಹನುಮಪ್ಪ ಮಡ್ಡೇರ ಸಾಸ್ವಿಹಾಳ ಬಾಲಕ 602 ಅಂಕ ಪಡೆದು ದ್ವಿತೀಯ ಸ್ಥಾನ. ಪಾಂಡಪ್ಪ ಬಸಪ್ಪ ಟಕ್ಕಳಕಿ ಜುಮಲಾಪೂರ 598 ಅಂಕ ಪಡೆದು ತೃತೀಯ ಸ್ಥಾನ ಪಡೆದು ಈ ಶಾಲೆಯ ಕಿರ್ತಿಗೆ ಬಾಜನರಾಗಿದ್ದಾರೆ. ಒಟ್ಟು ಶಾಲೆಯಲ್ಲಿ 67 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 27 ಬಾಲಕರು. 40 ಬಾಲಕಿಯರು. ಪೈಕಿ ಒಬ್ಬ ಬಾಲಕಿ ಅನುತ್ತಿರ್ಣಳಾಗಿದ್ದು. ಒಟ್ಟು 66 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಯ ಕಿರ್ತಿಗೆ ಬಾಜನರಾಗಿದ್ದಾರೆ.ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮನಗೌಡ ಪಾಟೀಲ ಪತ್ರಿಕೆಗೆ ತಿಳಿಸಿದರು..
ವರದಿ – ಸಂಪಾದಕೀಯ