ಬಸವಾದಿ ಶಿವಶರಣರ ವಚನಗಳು ಕೈ ಬಿಡುವುದು ಆತಂಕಕಾರಿ ಬೆಳವಣಿಗೆ,ಸರಕಾರ ಸ್ಪಷ್ಟೀಕರಣ ನೀಡಲು ಆಗ್ರಹ  : ಸಂಗಮೇಶ ಎನ್ ಜವಾದಿ.

Spread the love

ಬಸವಾದಿ ಶಿವಶರಣರ ವಚನಗಳು ಕೈ ಬಿಡುವುದು ಆತಂಕಕಾರಿ ಬೆಳವಣಿಗೆ,ಸರಕಾರ ಸ್ಪಷ್ಟೀಕರಣ ನೀಡಲು ಆಗ್ರಹ  : ಸಂಗಮೇಶ ಎನ್ ಜವಾದಿ.

ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ನೆಲೆಯಿಂದ ಗುರುತಿಸಬಹುದಾದ ಸಾಹಿತ್ಯಗಳಲ್ಲಿ ವಿಭಿನ್ನವಾಗಿ ರಚಿತವಾಗಿರುವ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ಹಾಡಿದರೆ ಹಾಡಿನ ರುಚಿ, ಕೇಳಿದರೆ ಗದ್ಯ ಬರಹದಂತೆ ಭಾಸವಾಗುವ ಪದ್ಯ ಮತ್ತು ಗದ್ಯಕ್ಕಿಂತ ವಿನೂತವಾಗಿ ದಿನನಿತ್ಯದ ಜನಸಾಮಾನ್ಯರ ಅನುಭವಗಳನ್ನೆ ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟ ಜೀವ ಸೆಲೆಯಾಗಿದೆ.ಅದಕ್ಕಾಗಿ ಅನುಭವಗಳ ಮತ್ತು ಅನುಭಾವದ ಅಭಿವ್ಯಕ್ತಿ ಮಾಧ್ಯಮವನ್ನಾಗಿ ವಚನವನ್ನು ಜನಸಂಪರ್ಕ ಮಾಧ್ಯಮವನ್ನಾಗಿ ಮಾನವೀಯ ನೆಲೆಯಲ್ಲಿ ಬಳಸಿದ ಸಾಹಿತ್ಯವೇ ಶರಣರ ವಚನ ಸಾಹಿತ್ಯವಾಗಿದೆ. ವಚನಗಳಲ್ಲಿ ಕಂಡು ಬರುವ ವಿಶಿಷ್ಟ ಮೌಲ್ಯಗಳಲ್ಲಿ ಬಹುತೇಕ ಮನುಷ್ಯ ನಡಾವಳಿಗಳು, ಬದುಕುವ ರೀತಿ, ನೀತಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತಿಡಿರುವುದು ಹಾಗೂ  ಮಾನವೀಯ ನೆಲೆಯಲ್ಲಿ ಹೇಗೆ ಬಗೆಹರಿಸಬಹುದನ್ನು ಕಾಣುತ್ತೇವೆ.ಆದಕಾರಣ

ವಚನಕಾರರು ಸಮಾಜದಲ್ಲಿದ್ದಂತಹ ರಾಜಪ್ರಭುತ್ವ, ಅಂಧಾನುಕರಣೆ, ಮೌಢ್ಯಗಳು, ಕಂದಾಚಾರಗಳು, ಲಿಂಗ-ತಾರತಮ್ಯ, ಸ್ತ್ರೀ ಅಸಮಾನತೆ, ವೃತ್ತಿತಾರತಮ್ಯ, ವರ್ಗಬೇದ, ಭಾಷಾ ವೈಷಮ್ಯಗಳು ಹಲವು ದೈವಗಳ ಆರಾಧನೆ ಧರ್ಮ, ಧರ್ಮಗಳಲ್ಲಿದ್ದ ಕಚ್ಚಾಟ ಮುಂತಾದವುಗಳನ್ನು ಸರಿಪಡಿಸಲು ಬಸವಾದಿ ಪ್ರಮಥರು ಹಗಲಿರುಳು ಶ್ರಮಿಸಿದ್ದಾರೆ.ಅದಕ್ಕಾಗಿ ವಚನ ಸಾಹಿತ್ಯ ಎಂಬುದು ಕೊನೆಯಿರದ ತೀರ, ಅದರಲ್ಲಿ ಮಾನವ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೆ ನಿಜ ಶರಣನಾಗುತ್ತಾನೆ. ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ ಮತ್ತು ಅದರಿಂದ ತಿಳಿಯುವುದು ಸಾಕಷ್ಟಿದೆ. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯ ಕುರಿತು ಸಂದೇಶ ನೀಡಿದ ಶರಣರು, ಮನಸ್ಸಿನಿಂದ ಮನಸ್ಸಿನ ಸಂಪರ್ಕವೇ ಅನುಭಾವ. ಅದುವೇ ವಚನದ ಜೀವಾಳ. ಮನುಷ್ಯನಿಗೆ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ ಎಂದು ತೋರಿಸಿಕೊಟ್ಟ ಶರಣರ ಸಂಸ್ಕಾರದ ಬದುಕು ಸರ್ವರಿಗೂ ಮಾದರಿಯಾಗಿದೆ. ಹೀಗಾಗಿ ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಇಂದಿನ ಪೀಳಿಗೆಯವರಿಗೆ ಶರಣರ ಆದರ್ಶ ಜೀವನದ ಸಂದೇಶ ಅಗತ್ಯವಿದೆ. ಜೀವನದ ನಿಜ ಸತ್ಯ, ಅಂಕು-ಡೊಂಕುಗಳನ್ನು ತಿದ್ದಿ ಹೇಳಿರುವುದು ಶರಣರು. ಅದನ್ನು ಪಾಲಿಸುವುದು, ಆಚರಣೆಗೆ ತರುವುದು ನಮ್ಮೆಲ್ಲರ ಜವಾಬ್ದಾರಿ. ಕಾರಣ ವಚನ ಸಾಹಿತ್ಯದ ಅಗತ್ಯತೆ ಇಂದಿನ ದಿನಗಳಲ್ಲಿ ಬಹಳ ಹೆಚ್ಚಾಗಿ ಕಾಡುತ್ತಿದೆ. ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಹೀಗಿರುವಾಗ ಇಂದಿನ ಸಮಾಜಕ್ಕೆ ವಚನ ಸಾಹಿತ್ಯದ ವಿಚಾರಗಳ ಚಿಂತನೆಗಳು ಬಹಳಷ್ಟು ಅವಶ್ಯಕತೆ ಪಡೆದುಕೊಂಡಿದೆ.

ಅದಕ್ಕಾಗಿ ಇದನ್ನು ಗಂಭೀರವಾಗಿ ಪರಿಗಣಿಸುವ ಮನೋಭಾವ ಸರ್ವರಲ್ಲಿಯೂ ಮೂಡಬೇಕಾಗಿದೆ.ಹಾಗಾಗಿ ವಚನ ಸಾಹಿತ್ಯದಿಂದ ಈಗಿನ ಸರಕಾರ ಹಾಗೂ ಸಮಾಜ ಕಲಿಯುವುದು ಸಾಕಷ್ಟಿದೆ ಎನ್ನುವುದು ಮರೆಯಬಾರದು. ಈ ನಿಟ್ಟಿನಲ್ಲಿ ಸರಕಾರ ನಡೆ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವಚನಗಳನ್ನು ಪಠ್ಯ ಪುಸ್ತಕದಿಂದ ಕೈಬಿಡವ ಆತಂಕಕಾರಿ ವಿಷಯವನ್ನು ಕೇಳಿ ಬರುತ್ತಿದೆ.ಇದು ನಿಜವಾದರೆ, ಈ ನಡೆ ನಿಜಕ್ಕೂ ಆಘಾತಕಾರಿಯಾಗಲಿದೆ. ಒಂದು ವೇಳೆ ಸರಕಾರ ಮತ್ತು ಶಿಕ್ಷಣ ಇಲಾಖೆ ಶರಣರ ವಚನಗಳನ್ನು ಪಠ್ಯ ಕ್ರಮದಿಂದ  ಕೈ ಬಿಟ್ಟರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ. ಯಾಕೆಂದರೆ ಸಮಾನತೆಯನ್ನು ಬೋಧಿಸಿದ ಶರಣರಿಗೆ ಅನ್ಯಾಯ ಮಾಡಲು ಹೋದರೆ ಖಂಡಿತಾ ನಾವು ಸಹಿಸುವುದಿಲ್ಲ.ಅಲ್ಲದೇ ಬಸವ ಅನುಯಾಯಿಗಳಿಗೆ ಕಿರುಕುಳ ಕೊಡುತ್ತಿರುವ ಸಂಗತಿಗಳು ಅಲ್ಲಲ್ಲಿ ಕೇಳಿಬರುತ್ತಿವೆ ಇದು ಸಹ ಖಂಡನೀಯವಾದ ನಡೆಯಾಗಿದೆ. ಶರಣರ ಇತಿಹಾಸ ಇಡೀ ವಿಶ್ವವೇ ಒಪ್ಪಿ ತಲೆಬಾಗಿದೆ. ಹೀಗಿರುವಾಗ ಇಂತಹ

ಸಣ್ಣತನವನ್ನು ತೋರುವುದು ಸರಕಾರಕ್ಕೆ ಖಂಡಿತಾ ಶೋಭೆ ತರುವುದಿಲ್ಲ.ಇದು ಸತ್ಯವೇ ಆದರೆ ಖಂಡಿತಾ ಸರಕಾರಕ್ಕೆ ಒಳ್ಳೆಯದಾಗುವುದಿಲ್ಲ. ಖಂಡನೀಯ: ವಚನಗಳು ಕನ್ನಡದ ಆಸ್ತಿ. ಇವುಗಳನ್ನು ‘ಕನ್ನಡ ಪಠ್ಯ ಪುಸ್ತಕ’ಗಳಿಂದ ತೆಗೆದಿದ್ದನ್ನು ನಾವ್ಯಾರೂ ಸಹಿಸಿಕೊಳ್ಳುವುದಿಲ್ಲ. ಈಗಿನ ಕರ್ನಾಟಕ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬಸವಣ್ಣ ಸೇರಿದಂತೆ ಎಲ್ಲಾ ವಚನಕಾರರ ವಚನಗಳನ್ನೂ ಕೈಬಿಟ್ಟಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ.ಇದು ಸತ್ಯವೇ ಎನ್ನುವುದು ಹೌದಾದರೆ, ಖಂಡಿತಾ ಖಂಡಿಸುತ್ತೇವೆ. ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಚ್ಚರಿಕೆ ಇರಲಿ. ಇನ್ನೂ ಕರ್ನಾಟಕ ರಾಜ್ಯದಲ್ಲಿ ಲಿಂಗಾಯತ ಮುಖ್ಯಮಂತ್ರಿಗಳು ಇದ್ದರೂ ಸಹ ರಾಜಕೀಯ ಅನಿವಾರ್ಯತೆಯಿಂದ ಸೈದ್ಧಾಂತಿಕವಾಗಿ ಲಿಂಗಾಯತ ಹಾಗೂ ಶರಣರ ವಿರೋಧಿಸುವ ಪಟ್ಟಭದ್ರರ ಮನಸ್ಥಿತಿಯ ಕೈಗೊಂಬೆಯಾಗಿದ್ದಾರೆ ಎನ್ನುವ ಭಾವನೆ ಬಸವಾಭಿಮಾನಿಗಳಲ್ಲಿ ಮೂಡುತಿದೆ.ಸ್ವಾಭಿಮಾನ ಇರುವ ಬಸವಾದಿ ಶರಣರ ಅನುಯಾಯಿಗಳು ಮತ್ತು ಎಲ್ಲ ವರ್ಗದ ಜನ ದನಿ ಎತ್ತಬೇಕಾಗಿದೆ. ಆದಕಾರಣ ಲಿಂಗಾಯತ ಮಠಾಧೀಶರು, ಬಸವಾಭಿಮಾನಿಗಳು ಸೇರಿ ಪ್ರತಿಭಟನೆ ಮಾಡಲು ಮುಂದಾಗುವುದು ಅನಿವಾರ್ಯತೆ ಎದುರಾಗಲಿದೆ.  ಅದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಸುಮ್ಮನೆ ಕೂಡದೆ ನಿಜಾಂಶವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಅದೇ ರೀತಿ ರ್ನಾಟಕದ ಶಿಕ್ಷಣ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯದ ಕುರಿತು ಶೀಘ್ರವೇ ಕರ್ನಾಟಕ ಜನತೆಗೆ ಸ್ಪಷ್ಟೀಕರಣ ನೀಡುವುದು ಸೂಕ್ತ ಮತ್ತು ಸಮಂಜಸವಾಗಿದೆ. ಕೊನೆಯ ಮಾತು : ಮಾನವೀಯತೆ ಮನುಜ ಮತ ಬಯಸುವ ಹಾಗೂ ಬಸವಾದಿ ಶರಣರನ್ನು ಆರಾಧಿಸುವವರು ಮೊದಲಿದ್ದ ಹಾಗೆ ಪಠ್ಯದಲ್ಲಿ ವಚನಗಳನ್ನು ಸೇರಿಸುವಂತೆ ಆಗ್ರಹ ಪಡಿಸುವ ಕೆಲಸ ಮಾಡಬೇಕು ಜೊತೆಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಚನ ಸಾಹಿತ್ಯ ಅಧ್ಯಯನ, ಸಂಶೋಧನೆ ಆಗಬೇಕು ಅದೇ ರೀತಿ ವಚನ ವಿಶ್ವವಿದ್ಯಾಲಯ ಶೀಘ್ರವಾಗಿ ಆರಂಭಿಸಬೇಕು. ಇವುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಚ್ಚರವಿರಲಿ.ಈ ನಾಡಿನಲ್ಲಿ ಬಸವಾದಿ ಶರಣರ ತತ್ವಗಳು ಅವರ ಆದರ್ಶಗಳೆ ಮನುಕುಲಕ್ಕೆ ಶ್ರೀ ರಕ್ಷೆ. ಇದನ್ನು ಮರೆಯಬಾರದು. ಈ ಅನ್ಯಾಯದ ವಿರುದ್ಧ ಧ್ವನಿಎತ್ತಿ ಹೋರಾಟ ಮಾಡೋಣ,ಮಾಡುವ ಕಾಲ ಬಂದಿದೆ. ಒಂದಾಗಿ, ಒಗ್ಗಟ್ಟಿನಿಂದ ಬಸವಾದಿ ಶರಣರ ಚಿಂತನೆಗಳನ್ನು ಮರೆಮಾಚಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ನಮ್ಮ ದಿಟ್ಟ ಹೋರಾಟದ ಮೂಲಕ ಉತ್ತರ ಕೊಟ್ಟು ಪಾಠ ಕಲಿಸೋಣ, ಕಲಿಸಬೇಕಾಗಿದೆ.

ವರದಿ – ಸಾಹಿತಿ, ಪ್ರಗತಿಪರ ಚಿಂತಕರು,  ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *