ಕೌಶಲ್ಯದ ಬೆಳವಣಿಗೆಗೆ ಓದಿಗಿಂತ ಕಲಿಕೆಯ ಜಾಣ್ಮೆ ಮುಖ್ಯ–ನಾಗೇಶ್–
ಕೂಡ್ಲಿಗಿ: ವ್ಯಕ್ತಿಯ ಕೌಶಲ್ಯದ ಬೆಳವಣಿಗೆಯಲ್ಲಿ ಓದಿಗಿಂತ ಕಲಿಕೆಯ ಜಾಣ್ಮೆ ಮುಖ್ಯವಾಗುತ್ತದೆ ಎಂದು ಆಟೋಲೈವ್ ಕಂಪನೀಯ ಮುಖ್ಯಸ್ಥರಾದ ನಾಗೇಶ್ ರವರು ಹೇಳಿದರು ಅವರು ಪಟ್ಟಣದ ಸರಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಏರ್ಪಡಿಸಿದ ಪೊಲೋ ಕ್ಯಾಂಪಸ್ ಉದ್ಯೋಗಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡುತ್ತಾ ವಿದ್ಯಾರ್ಥಿಯು ಕೇವಲ ಓದಿನಲ್ಲಿ ಮುಂದಿದ್ದರೆ ಸಾಲದು ಅದರ ಜೊತೆಯಲ್ಲಿ ಆತನ ಕೌಶಲ್ಯವು ಅಷ್ಟೆ ಮುಖ್ಯವಾಗುತ್ತದೆ ಜೀವನ ರೂಪಿಸಿಕೊಳ್ಳಬೇಕಾದರೆ ಕೌಶಲ್ಯವನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ ಆಟೋಲೈವ್ ಕಂಪನೀಯಲ್ಲಿ ಉದ್ಯೋಗಕ್ಕಾಗಿ ಸಾಕಷ್ಟು ಅವಕಾಶಗಳಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕಾಗಿದೆ ಆಟೋಲೈವ್ ಕಂಪನಿಯು ಬಿಡಿಭಾಗಗಳನ್ನು ಅಲ್ಲದೆ ಇತರೆ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನೀಯಾಗಿದ್ದು ಉತ್ಸಾಹಿ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತೇವೆ ಮೊದಲ ಮೂರುವರ್ಷ ಪ್ರಾಯೋಗಿಕವಾಗಿ ನೇಮಿಸಿಕೊಂಡು ೧೮೦೦೦ ಸಾವಿರದ ವರೆಗೆ ವೇತನವನ್ನು ನೀಡಲಾಗುವುದು ನಂತರ ಅವರ ಕಾರ್ಯಕ್ಷಮತೆಯ ಮೇಲೆ ನೇಮಕಾತಿ ಮಾಡಿಕೊಳ್ಳುವುದಲ್ಲದೆ ಅವರ ವೇತನವನ್ನುಹೆಚ್ಚಿಸಲಾಗುವುದು ಎಂದರು ಕೂಡ್ಲಿಯ ಸರಕಾರಿ ಡಿಪ್ಲೋಮಾ ಕಾಲೇಜಿನ ಪ್ರಾಚಾರ್ಯರಾದ ಮಲ್ಲಪ್ಪ ಸರ್ಜಾಪೂರವರು ತಮ್ಮ ಕಾಲೇಜಿಗೆ ನಮ್ಮನ್ನು ಬರಮಾಡಿಕೊಂಡು ಈ ಭಾಗದ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಹೆಚ್ಚುಶ್ರಮಿಸುತ್ತಿದ್ದಾರೆ ಅದರ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದರು ಕ್ಯಾಂಪಸ್ ನಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಯುವಜನತೆÀ ಪಾಲ್ಗೊಂಡಿದ್ದರು ಹಲವಾರು ಜನರ ನೇಮಕಾತಿಯು ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಮಲ್ಲಪ್ಪ ಸರ್ಜಾಪೂರವರು ನಮ್ಮ ಕಾಲೇಜಿಗೆ ಗ್ರಾಮೀಣ ಪ್ರದೇಶದಿಂದ ಬಂದAತಹ ವಿದ್ಯಾರ್ಥಿಗಳಿದ್ದಾರೆ ಓದಿನಲ್ಲಿಯು ಮುಂದಿದ್ದಾರೆ ದೈಹಿಕವಾಗಿಯು ಬಹಳ ಸಮರ್ಥರಿದ್ದಾರೆ ಅವರನ್ನು ನಿಮ್ಮ ಕಂಪನಿಗೆ ಆಯ್ಕೆ ಮಾಡಿಕೊಂಡರೆ ಉತ್ತಮ ಕೆಲಸ ನಿರ್ವಹಿಸಬಲ್ಲರು ಎಂಬುದರಲ್ಲಿ ಎರಡು ಮಾತಿಲ್ಲವೆಂಬ ಭರವಸೆಯ ಮಾತುಗಳನ್ನಾಡಿದರು ಈ ಸಂದರ್ಭದಲ್ಲಿ ಕಂಪನಿಯಿAದ ಕೆ,ಪಿ ಈಶ್ವರನಾಯ್ಕ, ಅಶೋಕಕುಮಾರ ಎಂ ಕೆ, ಸಂತೋಷ ವೈಎಸ್ ಸೇರಿದಂತೆ ಇದ್ದರು ಥಾವರೆನಾಯ್ಕ ಸ್ವಾಗತಿಸಿದರು ಶ್ರೀಮತಿ ಉಮಾ ವಂದನಾರ್ಪಣೆಯನ್ನು ಮಾಡಿದರು ಶ್ರೀಮತಿ ರೂಪಾ ನಿರೂಪಿಸಿದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭಂದ್ರ ಕೂಡ್ಲಿಗಿ-9008937428