ತ್ರಿಲಿಂಗೇಶ್ವರ ಪ್ರೌಢ ಶಾಲೆಯ ವಾರ್ಷಿಕ ಪರೀಕ್ಷಾ ಫಲಿತಾಂಶ ಶೇಕಡಾ,92,47%ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು,,,
ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾವರ್ಧಕ ಸಮಿತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಸಕ್ತ ವರ್ಷದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 93 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 86 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇವರಲ್ಲಿ ಜಯಶ್ರೀ ಟಿ ಬಿಂಗಿ ಎಂಬ ವಿದ್ಯಾರ್ಥಿನಿ 598, ಅಂಕ ಪಡೆದು ಶೇಕಡ 95,68% ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಮತ್ತು ತನುಶ ಪಿ ಪುರಾಣಿಕ ಎಂಬ ವಿದ್ಯಾರ್ಥಿ 591, ಅಂಕ ಪಡೆದು ಶೇಕಡ 94,56% ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಮತ್ತು ಕಾರ್ತಿಕ ಎಸ್ ಮಾಸಗಟ್ಟಿ ಎಂಬ ವಿದ್ಯಾರ್ಥಿ 590, ಅಂಕ ಪಡೆದು ಶೇಕಡ 94,40% ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಹಾಗೂ ನಿರ್ಮಲಾ ಬಿ ದೇವಕ್ಕಿ ಎಂಬ ವಿದ್ಯಾರ್ಥಿನಿಯು ಕೂಡ 584 ಅಂಕ ಪಡೆದು ಶೇಕಡ 93.44 ಚತುರ್ಥಿ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಈ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾವರ್ಧಕ ಸಮಿತಿಯ ಅಧ್ಯಕ್ಷರಾದ ಚಂದ್ರು ಹನುಮಂತರಾವ್ ದೇಸಾಯಿ ಹಾಗೂ ಕಮಿಟಿಯ ಸರ್ವ ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರೆಲ್ಲರೂ ಸೇರಿ ಹರ್ಷವನ್ನು ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ,
ವರದಿ – ಹುಸೇನಬಾಷಾ ಮೋತೆಖಾನ್