ಸಮಾಜಸೇವೆಯೆ ನನ್ನುಸಿರು, ವಿಶೇಷಚೇತನರ ನೋವುಗಳಿಗೆ ಸ್ಫಂಧಿಸಿದ ಸಕ್ಷಮ ಸಂಸ್ಥೆ,,,
22/04/2021 ರ ಗುರುವಾರ ಶಿವಮೊಗ್ಗ ತಾಲ್ಲೂಕಿನ ರೈಲ್ವೆ ನಿಲ್ದಾಣದ ಬಳಿ ಒಬ್ಬರು ವಯಸ್ಸಾದ ವಿಶೇಷಚೇತನರು ಕಂಡು ಬಂದರು. ಅವರ ಹತ್ತಿರ ಹೋಗಿ ಮಾತಡಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದಾಗ ನಿಜಕ್ಕೂ ಮನಸ್ಸಿಗೆ ತುಂಬಾ ಬೇಸರವಾಯಿತು.ತಮ್ಮ ಮನಸ್ಸಿನಲ್ಲಿ ಹಡಗಿದ್ದ ನೋವಿನ ಸರಪಳಿಯನ್ನು ಮತ್ತು ಪಟ್ಟ ಕಷ್ಟವೆಲ್ಲ ನನ್ನ ಬಳಿ ಹಂಚಿಕೊಳ್ಳುತ್ತಾ ಒಂದು ಹೊತ್ತು ಊಟಕ್ಕೂ ಸಹ ಅವರು ತಮ್ಮ ಜೀವನವನ್ನು ಸಾಗಿಸುವುದಕ್ಕೆ ರೈಲ್ವೆ ನಿಲ್ದಾಣವನ್ನು ಅವಲಂಬಿಸಿದ್ದಾರೆ ಎಂಬುವುದು ಬೇಸರ ಸಂಗತಿ. ಅವರಿಗೆ ಈ ಬೇಸಿಗೆಯ ತಾಪಮಾನದಲ್ಲಿ ಕೈ-ಕಾಲುಗಳು ಸುಡುವ ರಣಬಿಸಿಲಿನಲ್ಲಿ ಹೊಡಾಡುವುದಕ್ಕೆ ಆಗದೆ ನೆಲದಮೇಲೆ ತೆವಳುತ್ತಾ ಇದ್ದರು. ಇವರ ಹತ್ತಿರ ಎರಡೂ ದಿನಗಳ ಕಾಲವಕಾಶವನ್ನು ಪಡೆದು ಭರವಸೆಯನ್ನು ಕೊಟ್ಟಂತೆ ನನ್ನ ಬಳಿಯಲ್ಲಿ ಮತ್ತೊಂದು ವೀಲ್ ಚೇರ್ ಇದದ್ದನ್ನೂ 24/04/2021 ಶನಿವಾರ ಇವತ್ತು ಇವರಿಗೆ ನಮ್ಮ ಸಕ್ಷಮ ಸಂಸ್ಥೆಯ ಪರವಾಗಿ ತಲುಪಿಸಿದಾಗ ಈ ವೀಲ್ ಚೇರ್ ನ್ನೂ ಕಂಡಕೂಡಲೇ ಇವರ ಮುಖದಲ್ಲಿ ಆದ ಮಂದಹಾಸಕ್ಕೆ ಪಾರವೇ ಇರಲಿಲ್ಲ. ಇದರ ಜೊತೆಯಲ್ಲಿ ನನ್ನ ಪರಿಚಯವನ್ನು ಮಾಡಿಕೊಂಡು ನಿಮಗೆ ದೇವರು ಆರೋಗ್ಯ, ಆಯಸ್ಸು ಕೊಡಲೀ ಸರ್ ಎಂದು ಶುಭಹಾರೈಸಿದರು. ನಾನು ಕೆಲವರಲ್ಲಿ ಕೈಜೋಡಿಸಿ ಕೇಳಿಕೊಳ್ಳೋದು ಇಷ್ಠೆ ನೀವು ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳದಿದ್ದರು ಪರವಾಗಿಲ್ಲ. ಆದರೆ ದಯವಿಟ್ಟು ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಮೂರು ಹೊತ್ತು ಊಟ ಕೊಡಿ ಸಾಕು ಮತ್ತೊಬ್ಬರ ನೋವು/ನಲೀವುಗಳಲ್ಲಿ ಭಾಗಿಯಾಗಿ ಆ ನೋವುಗಳಿಗೆ ತನ್ನಿಂದಾದ ಸಹಾಯ ಅಸ್ತ ಮಾಡುವುದೆ ನೀಜವಾದ ಮಾನವಿಯ ಗುಣ,..
ವರದಿ – ಸಂಪಾದಕೀಯ.