ಬೆಂಗಳೂರು ನಗರದ ಸಿಟಿ ಸೆಂಟರ್ ಹೋಟೆಲ್ ನಲ್ಲಿ ನಡೆದ ಎಎಪಿ ರಾಜ್ಯ ಪದಾಧಿಕಾರಿಗಳ ಸಭೆ,,,,,,

Spread the love

ಬೆಂಗಳೂರು ನಗರದ ಸಿಟಿ ಸೆಂಟರ್ ಹೋಟೆಲ್ ನಲ್ಲಿ ನಡೆದ ಎಎಪಿ ರಾಜ್ಯ ಪದಾಧಿಕಾರಿಗಳ ಸಭೆ,,,,,,

ಕರ್ನಾಟಕ ವಿಷನ್ 2023 ಗ್ರಾಮ ಸಂಪರ್ಕ ಅಭಿಯಾನ  ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ಗ್ರಾಮ ಸಂಪರ್ಕ ಅಭಿಯಾನ ಚಾಲನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಮಾತನಾಡಿ 2023 ಚುನಾವಣಾ ವಿಷನ್ ಏನು ಎಂಬುದನ್ನು ವಿಸ್ತರಿಸಿದರು. ಆಮ್ ಆದ್ಮಿ ಪಾರ್ಟಿಯ ಯೋಜನೆಗಳು

* ಈಡೀ ದೇಶಕ್ಕೆ ಎಎಪಿ ಒಂದೇ ಭರವಸೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಯಾವುದೇ ಭರವಸೆ ಉಳಿಸಿಕೊಂಡಿಲ್ಲ. ಹಾಗಾಗಿ ಜನ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಎಎಪಿ ಒಂದು ಪ್ರಯಾಣವನ್ನು ಆರಂಭಿಸಿದೆ. ಅದನ್ನು ಯಶಸ್ವಿಗೊಳಿಸಬೇಕಾಗಿದೆ. ಆ ಪ್ರಯಾಣವೇ ವಿಷನ್ 2023.

* ನಮ್ಮ ಉದ್ದೇಶದ ಚುನಾವಣೆಯೇ ಆಗಿರಬೇಕು. ಏನೇ ಕೆಲಸ ಮಾಡಿದರೂ ಅದು ಚುನಾವಣೆಯ ಮೇಲಿರಬೇಕು ಜೊತೆಗೆ ನಮ್ಮ ಸರ್ಕಾರ ರಚಿಸುವುದಾಗಿರಬೇಕು.

*ಎಲ್ಲಾ ರಾಜಕೀಯ ಪಕ್ಷದ ವ್ಯಕ್ತಿಗಳು ಬಿಳಿ ಬಟ್ಟೆಯನ್ನು ಹಾಕಿಕೊಂಡು ಎಸಿ ರೂಮ್ ಗಳಲ್ಲಿ ಕೂತು ತಂತ್ರಗಳನ್ನು ರೂಪಿಸುತ್ತಾರೆ. ಆದರೆ ಆ ರಣನೀತಿಯನ್ನು ಕಾರ್ಯಗತಗೊಳಿಸಬೇಕಾದರೆ  ಎಲ್ಲರೂ ಬೀದಿಗಿಳಿದು ನಿಯತ್ತಾಗಿ ಕಾರ್ಯನಿರ್ವಹಿಸಬೇಕಾಗಿದೆ.

* ಚುನಾವಣೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಸಂಘಟನೆ, ವಿಚಾರ ವಿನಿಮಯ, ಪ್ರಚಾರ, ಅಭ್ಯರ್ಥಿ ಎಲ್ಲರೂ ಮುಖ್ಯವಾಗಿರುತ್ತದೆ. ಇದರಲ್ಲಿ ಯಾವುದಾದರೂ ಒಂದು ಸರಿಯಾದ ರೀತಿಯಲ್ಲಿ ಇಲ್ಲವಾದರೆ ಪ್ರಯತ್ನ ಯಶಸ್ವಿಯಾಗುವುದಿಲ್ಲ.

* ಗ್ರಾಮ ಸಂಪರ್ಕ ಅಭಿಯಾನದ ಮೂಲ ಉದ್ದೇಶ ರಾಜ್ಯಾದ್ಯಂತ ಸಂಘಟನೆಯನ್ನು ಅಭಿವೃದ್ಧಿಪಡಿಸುವುದು. ಜೊತೆಗೆ ಪ್ರತಿ ಗ್ರಾಮದ ಬೂತ್ ಮಟ್ಟದಲ್ಲಿ ಎಎಪಿ ಯನ್ನು ವಿಸ್ತರಿಸುವುದಾಗಿದೆ.

* ಸಂಘಟನೆ ಎಂದು ಹೇಳುವುದು ಸುಲಭ ಆದರೆ ಅದನ್ನು ಕಟ್ಟುವುದು ಮತ್ತು ಬೆಳೆಸುವುದು ಕಷ್ಟ. ಚುನಾವಣೆಯಲ್ಲಿ ವಿಜೇತರಾಗಬೇಕಾದರೆ ಸಂಘಟನೆ ತುಂಬಾ ಮುಖ್ಯವಾಗುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಭೂಮಿಯಲ್ಲಿರುವ ನೀರನ್ನು ಮೇಲೆ ತರಬೇಕಾದರೆ ಬೋರ್ ವೆಲ್ ಹೇಗೆ ಸಹಕಾರಿಯಾಗುತ್ತದೆಯೋ ಅದೇ ರೀತಿ ಚುನಾವಣೆಯಲ್ಲಿ ವಿಜೇತರಾಗಬೇಕಾದರೆ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವುದು ಮುಖ್ಯ.

*ಸಂಘಟನೆಯನ್ನು ಬೆಳೆಸಲು ದುರಾಂಕಾರ ಇರಬಾರದು. ಗಮನ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಸಂಘಟನೆಯನ್ನು ಕಟ್ಟಲು ಸಾಧ್ಯವಿಲ್ಲ.

*ಯಾವ ವಿಷಯ ಅಥವಾ ವಿಚಾರಕ್ಕೆ ಗಮನ ಹರಿಸಿದರೆ ಸೂಕ್ತ ಎಂಬುದನ್ನು ತಿಳಿದು ಗಮನಹರಿಸಬೇಕು.

* ಪ್ರಚಾರ ಮತ್ತು ವಿನಿಮಯ ನಿರಂತರವಾಗಿರಬೇಕು. ಸಂಘಟನೆ ಕಟ್ಟುವಲ್ಲಿ ಯಾವುದೇ ತಪ್ಪುಗಳಾದರೂ ಅದನ್ನು ಸರಿದೂಗಿಸಿಕೊಂಡು ಮುಂದುವರೆಯಬೇಕಾಗಿದೆ.

* ನಮ್ಮ ವಿರೋಧಿ ಪಕ್ಷಗತೋರಿಸಿದ್ದೇವೆ ಎು ದೌರ್ಬಲ್ಯಗಳನ್ನು ಗುರುತಿಸಬೇಕು. ಬಿಜೆಪಿ ಜೆಡಿಸಿ ಬಿಜೆಪಿ ಹಣ ಬಲ ತೋಳ್ಬಲದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ನೋಡಿದರೆ ನಾವು ಆರೋಗ್ಯ, ಶಿಕ್ಷಣದಂತಹ ಮೂಲಭೂತ ಸೌಕರ್ಯಗಳತ್ತ ಗಮನಹರಿಸಿ ಆ ಮೂಲಕ ಶಕ್ತಿ ಪ್ರದರ್ಶಿಸಿ ಜಯಶೀಲರಾಗಬೇಕಿದೆ.

*ರಾಜಕೀಯದಲ್ಲಿ ಒಬ್ಬರಿಗೆ ಮತ್ತೊಬ್ಬರ ಬೆಂಬಲ ಸಿಕ್ಕಿದಾಗ ಚುನಾವಣೆಯಲ್ಲಿ ಯಶಸ್ವಿ ಸಾಧಿಸಬಹುದು.

# ಒಂದು ವಿಧಾನಸಭಾ ಕ್ಷೇತ್ರದಲ್ಲಿ 1 ರಿಂದ 5 ಮಂದಿ ಅಕಾಂಕ್ಷಿಗಳು ಇರಬೇಕು. ಅದರಲ್ಲಿ ಚುನಾವಣೆಗೆ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಲು ಸಾಧ್ಯ. ಪಕ್ಷ ಯಾರನ್ನು ಆಯ್ಕೆ ಮಾಡುತ್ತದೆಯೋ ಉಳಿದವರು ಅವರಿಗೆ ಬೆಂಬಲವಾಗಿರಬೇಕು.

* ವಿಚಾರ ವಿನಿಮಯವು ಬರೀ ಪದಗಳಾಗಿರಬಾರದು ಅದು ಭಾವನಾತ್ಮಕವಾಗಿದ್ದಾಗ ಮಾತ್ರ ಜನರ ಮನಮುಟ್ಟಲು ಸಾಧ್ಯ. ಜೊತೆಗೆ ನಮ್ಮ ಉದ್ದೇಶ ಯಾವುದಾಗಿರುತ್ತದೆಯೋ ಅದನ್ನು ಎಲ್ಲಾ ಕಡೆ ಪಸರಿಸಬೇಕಿದೆ.

* ಸಂಘಟನೆಯನ್ನು ಜೋನಲ್ ಮಟ್ಟ, ಜಿಲ್ಲಾ ಮಟ್ಟ, ವಿಧಾನಸಭಾ ಮಟ್ಟ, ಮತದಾಬ ಕೇಂದ್ರ ಮಟ್ಟ, ಮತಗಟ್ಟೆ /ಗ್ರಾಮ ಮಟ್ಟದ ರೀತಿಯಲ್ಲಿ ಮಾಡಬೇಕಿದೆ. ಜೊತೆಗೆ ಎಲ್ಲಾ ಕಡೆ ಸಭೆಗಳನ್ನು ನಡೆಸಿ ನೇಮಕಾತಿಯನ್ನು ಮಾಡಿಯನ್ನು ಗ್ರಾಮ ಮಟ್ಟದಲ್ಲೂ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಿದೆ.

* ಫೇಸ್‌ಬುಕ್‌, ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್, ಲಿಂಕ್ ಡಿನ್  ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿದೆ.

ಜೊತೆಗೆ ಚುನಾವಣೆಯಲ್ಲಿ ಯಶಸ್ವಿಯಾಗಬೇಕಾದರೆ ಜನರಿಂದ ವೋಟ್ ಕೇಳುವುದಕ್ಕಿಂತ ಪ್ರೀತಿ, ವಿಶ್ವಾಸದಿಂದ ಜನತೆಯ ಮನಸ್ಸನ್ನು ಗೆದ್ದರೆ ವೋಟ್ ಗಳಿಸುವುದು ಸುಲಭ ಎಂದರು.

ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ ಈ 10 ವರ್ಷಗಳ ಹಿಂದೆ ಪರ್ಯಾಯ ರಾಜಕೀಯದ ಬಗ್ಗೆ ಮಾತನಾಡಿದರೆ ಎಲ್ಲರೂ ನಗುವರು ಮತ್ತು ನಮ್ಮ ಟೋಪಿ ಹಾಕಿಕೊಂಡವರನ್ನು ಕಂಡರು ಹುಚ್ಚರು ಎಂದು ಗಹಗನಿಸುವವರು. ಆದರೆ ಇಂದು ಆ ಪರ್ಯಾಯ ರಾಜಕೀಯವನ್ನು ಬಯಸಿ ಇಷ್ಟು ಮಂದಿ ಪಕ್ಷ ಸೇರಿರುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದರು.

10 ವರ್ಷದ ಹಿಂದೆ ಸಾಮಾನ್ಯರು ಚುನಾವಣೆಗೆ ನಿಲ್ಲಬಹುದು ಎಂದು ತೋರಿಸಿದ್ದೇವೆ. ಗೆದ್ದ ಮೇಲೆ ಹೇಗೆ ಕೆಲಸ ಮಾಡಿದ್ದೇವೆ ಎಂದು 7 ವರ್ಷದ ಹಿಂದೆ ತೋರಿಸಿಕೊಟ್ಟಿದ್ದೇವೆ. ಒಮ್ಮೆ ಗೆದ್ದಿದ್ದಾರೆ ಮತ್ತೆ ಗೆಲುವು ಸಾಧಿಸಲ್ಲ ಎಂದವರಿಗೆ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಧೂಳಿಪಟವನ್ನಾಗಿ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.

ನಾವು ಈಗ ಕರ್ನಾಟಕ ಜನತೆಗೆ ನೀಡಬೇಕಾಗಿರುವುದು 2023 ರ ಕರ್ನಾಟಕದ ವಿಷನ್

* ಕರ್ನಾಟಕದ ಪ್ರತಿಯೊಬ್ಬ ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು.

*ಯುವಕರೇ ಉದ್ಯೋಗ ಸೃಷ್ಠಿಸಿ 10 ಮಂದಿ ಕೆಲಸ ನೀಡುವಂತಾಗಬೇಕು.

* ಪ್ರತಿಯೊಬ್ಬ ನಾಗರೀಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ನೀಡಬೇಕು

* ಉಚಿತ ನೀರು, ವಿದ್ಯುತ್ ಬಿಲ್, ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಬೇಕು

*ಮನೆ ಬಾಗಿಲಿಗೆ ಸೇವೆ ಒದಗಿಸಬೇಕು

ಈ ಎಲ್ಲಾ ಕೆಲಸಗಳನ್ನು ಮಾಡುವುದು ನಮ್ಮ ವಿಷನ್ ಆಗಿದೆ.

ಈ ಎಲ್ಲಾ ಕೆಲಸ ಮಾಡಲು ಪ್ರತಿಯೊಂದು  ಬೂತ್ ಮಟ್ಟದಲ್ಲಿ ಜನರನ್ನು ಸಂಘಟಿಸಬೇಕು ಜೊತೆಗೆ ಬೀದಿಗಿಳಿಸಿ ಜನರ ವಿಶ್ವಾಸ ಗಳಿಸಬೇಕಿದೆ ಎಂದರು.

ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಮಾತನಾಡಿ ಮಹಿಳೆಯರದು ಶೇ.48 ರಷ್ಟು ಮತಗಳಿವೆ. ಅದರಲ್ಲಿ ಶೇ. 60 ರಷ್ಟು ಗಳಿಸಿದರೆ ನಮ್ಮ ಪಕ್ಷ ಗೆಲುವು ಸಾಧಿಸುತ್ತೇವೆ. ಹಾಗಾಗಿ ಮಹಿಳೆಯರನ್ನು ಸಂಘಟನೆ ಮಾಡುವುದು ಮುಖ್ಯ ಎಂದು ತಿಳಿಸಿದರು.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈಗಿನ ರಾಜಕೀಯ ಪರಿಸ್ಥಿತಿ ಹೀನಾಯ ಸ್ಥಿತಿ ತಲುಪಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕೊಡದಿದ್ದರೆ ಇದಕ್ಕೆ ನಾವೇ ಕಾರಣರಾಗುತ್ತೀವಿ. ಹಾಗಾಗಿ ರಾಜ್ಯಕ್ಕೆ ಪರ್ಯಾಯ ವ್ಯವಸ್ಥೆ ಆಗತ್ಯವಿದ್ದೇ. ಎಎಪಿಯೇ ಪರ್ಯಾಯ ವ್ಯವಸ್ಥೆ ಎಂದು ಪಕ್ಷ ಸೇರ್ಪಡೆಯಾಗಿದ್ದೇನೆ.

ಈಗಿನ ರಾಜಕೀಯ ಪಕ್ಷಗಳಿಗೆ ಕನಿಷ್ಟ ರಾಜಕೀಯ ಮಾನದಂಡಗಳಿಲ್ಲ. ಯಾರಿಗೂ ಮಾನ ಮರ್ಯಾದೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮೇಕೆದಾಟು ಮಾಡದೆ ಈಗ ಹೋರಾಟ ಮಾಡುತ್ತಿದ್ದಾರೆ. ಈಗ ದೇವೇಗೌಡರು ಮಕ್ಕಳು, ಮೊಮ್ಮಕ್ಕಳನ್ನು ಹಿಂದೆ ಇಟ್ಟು ಕೊಂಡು ಜಲಧಾರೆ ಮಾಡುತ್ತಿದ್ದಾರೆ ಅವರು ಅಧಿಕಾರದಲ್ಲಿದ್ದಾಗ ಏನು ದಬ್ಬಾಕಿದರು ಎಂದು ಖಾರವಾಗಿ ನುಡಿದರು.

ಪ್ರತಿ ಹಳ್ಳಿಗಳಲ್ಲಿ ತಂಡಗಳನ್ನು ಕಟ್ಟಿ 2023 ರ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಬದಲಾವಣೆಯ ಉತ್ತರ ಕೊಡಬೇಕಿದೆ ಎಂದರು.

ದೇವೇಗೌಡ ಕುಟುಂಬ ಶಾಶ್ವತವಾಗಿ ವಿಶ್ರಾಂತಿ ತೆಗೆದುಕೊಳ್ಳಲಿ. ಎಲ್ಲಾ ರಾಜಕೀಯ ಪಕ್ಷಗಳು ಭ್ರಷ್ಟಾಚಾರವನ್ನು ಮಾಡಿ ಹೀಗೆ ಸುತ್ತುವುದಕ್ಕೆ ಮಾನ ಮರ್ಯಾದೆ ಇಲ್ಲವ ಎಂದು ಕಟುವಾಗಿ ಟೀಕೆ ಮಾಡಿದರು.

ಕರ್ನಾಟಕದ ಘನತೆ, ನ್ಯಾಯ, ಕಾನೂನು ಕ್ರಮಗಳನ್ನು ನ್ಯಾಯಯುತವಾಗಿ ತರಲು ನಾವೆಲ್ಲರೂ ಕೈಜೋಡಿಸಿ ಕಾರ್ಯ ನಿರ್ವಹಿಸಿ ಹೊಸ ನಾಡನ್ನು ಕಟ್ಟೋಣ ಎಂದರು.

ನಿವೃತ್ತ ಕೆಎಎಸ್ ಅಧಿಕಾರಿ ಮಾತನಾಡಿ, ಸರ್ಕಾರದ ಅಧಿಕಾರಿಯಾಗಿ 15-20 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ.  ನಮ್ಮಲ್ಲಿ  ಶೇ.10, ಶೇ.20, ಶೇ.30, ಶೇ.40, ಶೇ. 50 ರಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಕಿತ್ತೊಗೆಯಲೆಂದು ಜೊತೆಗೆ ಅರವಿಂದ್ ಕೇಜ್ರೀವಾಲ್ ಅವರ ಕೆಲಸದ ಪ್ರೇರಣೆಯಿಂದ ಪಕ್ಷವನ್ನು ಸೇರಿದ್ದೇನೆ ಎಂದರು.

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕೆ 10 ವರ್ಷದಲ್ಲಿ 28 ವರ್ಗಾವಣೆಗಳಾಗಿವೆ. ಹಾಗಾಗಿ ಈ ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕಾದರೆ ರಾಜಕೀಯ ಮಾರ್ಗ ಸರಿಯೆಂದು ಪಕ್ಷ ಸೇರಿದ್ದೇನೆ.

ದೇಶದಲ್ಲಿ ಕೋಮುವಾದ ಮತ್ತು ರಾಷ್ಟ್ರವಾದ  ತಾಂಡವವಾಡುತ್ತಿದೆ. ಈ ಹಿಂದೆ ಬ್ರಿಟಿಷರು ಒಡೆದು ಆಳುವ ನೀತಿ ಜಾರಿಗೆ ತಂದಂತ್ತೆ ಇಂದು ಜಾತಿ ಆಧಾರದಲ್ಲಿ ದೇಶವನ್ನು ಹೊಡೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಲೋಕಸಭಾ ಸದಸ್ಯ ಡಾ.ವೆಂಕಟೇಶ್,  ರಾಜ್ಯ ಸಹ ಸಂಚಾಲಕ ವಿಜಯ ಶರ್ಮ, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, ಸೇರಿದಂತಾ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ – ಸಂಪ-ಸಂಪಾದಕೀಯ.

Leave a Reply

Your email address will not be published. Required fields are marked *