ಗ್ರಾಮ ದೇವತೆಯ ದ್ಯಾಮಮ್ಮ ದೇವಿಯ ಉತ್ಸವ,,,,
ಯಲಬುರ್ಗಾ ತಾಲೂಕ ಮುರಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ದ್ಯಾಮಮ್ಮ ದೇವಿಯ 4ನೇ ವರ್ಷದ ಜಾತ್ರಾಮಹೋತ್ಸವ ಜರುಗಿತು, ಬೆಳಿಗ್ಗೆ ಮಹಿಳೆಯರಿಂದ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಕುಂಬ, ಕಳಸ, ಕಲಾವಿದರ ಗೊಂಬೆ ಕುಣಿತ ಜರುಗಿತು, ಇದಕ್ಕು ಮೋದಲು ಘಟಸ್ಥಾಪನೆ ಹಾಕುವುದು. ಮೂರು ದಿನ ಕಾಲ ದೇವಿಯು ಗ್ರಾಮದ ಪ್ರತಿ ಮನೆ ಮನೆಗೆ ತೇರಳಿ ಪ್ರದಕ್ಷಣೆಗೆ ಹೊರಟು ಉಡಿ ತುಂಬಿಸಿಕೋಳ್ಳುವಳು, ಇಂದು ಮಂಗಳವಾರ ದಿವಸ. ಶ್ರೀ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಅಕ್ಕಿಪಾಯನ, ಅಗ್ನಿಕೊಂಡ ಕಾರ್ಯಕ್ರಮಗಳು ನೆರವೇರುವುದು ಗ್ರಾಮದ ಸ್ಥಳೀಯ ಕಲಾವಿದರಿಂದ ತಾಯಂದಿರಿಂದ ಸೋಪಾನಪದ ಶನಿವಾರ ಸಂಜೆ ಭಕ್ತಿ ಸುಧೆ ರಸಮಂಜರಿ ಕಾರ್ಯಕ್ರಮ ರವಿವಾರ ಸಂಜೆ ದುರ್ಗಾದೇವಿ ಮತ್ತು ಗ್ರಾಮದವರಿಂದ ಭಜನೆ ಕಾರ್ಯಕ್ರಮ ಜರುಗೀದವು ಇಂದು ಸಂಜೆ ಗೀ ಗೀ ಪದಗಳು ಮಂಗಳವಾರ ಸಂಜೆ ಮುರಡಿ ತಾಂಡಾದ ಮಹಿಳೆಯರಿಂದ ಬಂಜಾರ ಸಮಾಜದ ಸಂಪ್ರದಾಯ ಪದಗಳ ಕಾರ್ಯಕ್ರಮ ಜರಗುವದು ಎಂದು ಜಾತ್ರೆಯ ಸದ್ಭಕ್ತರು ತಿಳಿಸಿದರು,.
ವರದಿ – ಹುಸಸೇನಬಾಷಾ ಮೋತೆಖಾನ್