ಕೊಪ್ಪಳ : ವ್ಯಾಸರಾಯರು ತಮ್ಮ ಅಗಾಧವಾದ ತಪೋಶಕ್ತಿ ಮೂಲಕ ‘ರಾಮಧೂತ’ ಹನುಮಂತನನ್ನು ಹಂಪಿ ಸಮೀಪದ ತುಂಗಭದ್ರಾ ನದಿ ತಟದಲ್ಲಿರುವ ಚಕ್ರತೀರ್ಥದ ಬಳಿ ಯಂತ್ರದಲ್ಲಿ ಕಟ್ಟಿ ಹಾಕಿದ್ದರು ಎಂಬುದು ಇತಿಹಾಸ..!
ವ್ಯಾಸರಾಯರು ಪ್ರತಿ ದಿನ ತುಂಗಭದ್ರಾ ನದಿ ತಟದಲ್ಲಿ ಧ್ಯಾನ ಮಾಡುತ್ತಿರುವಾಗ ಅವರ ಕಲ್ಪನೆಯಲ್ಲಿ ಹನುಮಂತ ಕಾಣಿಸುತ್ತಿದ್ದ, ಆಗ ಅವರು ಆ ಕಲ್ಪನೆಯ ಆಕಾರವನ್ನು ಕಲ್ಲು ಬಂಡೆಯ ಮೇಲೆ ಅಂಗಾರ ಅಥವಾ ಇದ್ದಿಲು ಸಹಾಯದಿಂದ ಬಿಡಿಸುತ್ತಿದರು. ಆದರೆ, ಕೆಲ ಹೊತ್ತಿನಲ್ಲಿಯೇ ಅವರು ಬಿಡಿಸಿದ ಚಿತ್ರದಿಂದ ಜೀವಂತ ಕೋತಿವೊಂದು ಹಾರಿ ಕಲ್ಲು ಬಂಡೆಯಿಂದ ಹೊರಗೆ ಬರುತ್ತಿತ್ತು. ಅಲ್ಲದೆ, ಅವರು ಬಿಡಿಸಿದ ಚಿತ್ರ ಕೂಡಲೇ ಅಳಿಸಿ ಹೋಗುತ್ತಿತ್ತು. ಮತ್ತೆ ಚಿತ್ರ ಬರೆದರು ಪುನಃ ಮತ್ತೊಂದು ಜೀವಂತ ಕೋತಿ(ಹನುಮಂತ) ಬಂಡೆಯಿಂದ ಹಾರಿ ಹೊರಗೆ ಬರುತ್ತಿತ್ತು, ಹೀಗೆ 12 ಬಾರಿ ಆಯಿತು. ಆಗ ವ್ಯಾಸರಾಯರು ಯಂತ್ರ ಬರೆದು, ಅದರ ಮಧ್ಯೆ ಅವರ ಕಲ್ಪನೆಯಲ್ಲಿ ಕುಳಿತ ಭಂಗಿಯ ಹನುಮಂತನ ಚಿತ್ರ ಬರೆದರು ಆಗ ಅದರಿಂದ ಯಾವುದೇ ಕೋತಿ ಹೊರಗೆ ಬರಲಿಲ್ಲ ಮತ್ತು ಅದು ಅದ್ಭುತ ಮೂರ್ತಿ ಆಯಿತು. ಅದಕ್ಕೆ ಹಂಪಿಯಲ್ಲಿರುವ ಯಂತ್ರೋದ್ಧಾರಕ ಹನುಮಂತ ವಿಗ್ರಹದ ಹೊರ ವೃತ್ತದ ಸುತ್ತ 12 ಕೋತಿಗಳ ಚಿತ್ರಗಳಿವೆ. ವ್ಯಾಸರಾಯರು ತಮ್ಮ ತಪೋಶಕ್ತಿಯಿಂದ ಹನುಮಂತನನ್ನು ಕಟ್ಟಿ ಹಾಕಿದ್ರು ಅಂತ ನಂಬಿಕೆ ಕೂಡಾ ಪ್ರಚಲಿತ. ಯಂತ್ರೋದ್ಧಾರಕ ಹನುಮ ದೇವಸ್ಥಾನದಲ್ಲಿ ಕುಳಿತು ರಾಮಧೂತನನ್ನು ನೆನೆದರೆ ಸಿದ್ಧಿಯ ಆನಂಬಿಕೆ ಮಾತ್ರ ಇವತ್ತಿಗೂ ಅಚಲ. ಇಂತಹ ಇತಿಹಾಸವನ್ನು ಟಿಟಿಡಿ ಟ್ರಸ್ಟ್ ಕಣ್ಣಾರೆ ವೀಕ್ಷಿಸುವುದು ಅವಶ್ಯವಿದೆ..!?
(ಮುಂದುವರೆಯುವುದು…)
ಮಾಹಿತಿ : ಜಯಸಿಂಹ, ಉಪನ್ಯಾಸಕರು ಕೊಪ್ಪಳ.
ವರದಿ – ಶರಣಪ್ಪ ಕುಂಬಾರ