ಪೂಜಾರಹಳ್ಳಿ ಕೆರೆ ಉಳಿಸಿ ಹೋರಾಟ, ಜಿಲ್ಲಾಧಿಕಾರಿಗೆ ಮನವಿ,,,
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮದ ಕೆರೆ,ಅಕ್ರಮ ಕೋರರಿಂದ ರಕ್ಷಿಸಿ ಎಂದು ವಿಜಯನಗರ ಜಿಲ್ಲಾಧಿಕಾರಿಗಳಲ್ಲಿ ಗ್ರಾಮಗಳ ನೂರಾರು ರೈತರು ಜೂನ್ 3ರಂದು ಎಐಟಿಯುಸಿ ಮುಖಂಡ ಹೆಚ್.ವೀರಣ್ಣ ನೇತೃತ್ವದಲ್ಲಿ ಮನವಿ ಮಾಡಲಿದ್ದಾರೆ. ಈ ಕುರಿತು ವೀರಣ್ಣ ಮಾತನಾಡಿದ್ದು ಕೆರೆ ನೂರಾರು ವರ್ಷಗಳ ಇತಿಹಾಸ ಹೊಂದಿದೆ, ಸಾವಿರಾರು ಜನರ ಜೀವನಾಡಿಯಾಗಿದೆ ಅದನ್ನು ಅಕ್ರಮ ಕೋರರು ಲಗ್ಗೆಹಾಕಿ ವಶಕ್ಕೆ ಪಡೆಯೋ ವಿಪಲ ಯತ್ನ ಮಾಡಿದ್ದಾರೆ.ಅವರ ವಿರುದ್ಧ ಕಾನೂನು ಸಮರ ಸಾರಿದ್ದು, ನ್ಯಾಯಾಲಯದಲ್ಲಿ ಹೋರಾಟಗಾರರ ಪರವಾಗಿ ಆದೇಶ ಬಂದಿದೆ. ಆದರೂ ಅಕ್ರಮಕೋರರು ತಮ್ಮ ಪ್ರಯತ್ನ ಬಿಟ್ಟಿಲ್ಲ ಕಾರಣ ಕೆರೆಯನ್ನು ಕಬಳಿಸುವ ದುಸ್ಸಾಹಸ ಮಾಡುತ್ತಿದ್ದಾರೆ,ಕಾರಣ ಜಿಲ್ಲಾಧಿಕಾರಿಗಳು ಖದ್ದು ಸ್ಥಳ ಪರಿಶೀಲಿಸಿ ದಾಖಲುಗಳ ಆಧರಿಸಿ ರೈತರ ಪರ ದ್ವನಿಯಾಗಬೇಕಿದೆ. ಅದಕ್ಕಾಗಿ ಅವರಲ್ಲಿ ನೂರಾರು ರೈತರು ಜೂನ್ 3ರಂದು ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೆಟ್ಟಿಯಾಗಿ,ಕೆರೆ ಉಳಿಸಲು ಮನವಿ ಮಾಡಲಿದ್ದಾರೆಂದು ಅವರು ತಿಳಿಸಿದರು. ಹೋರಾಟ ಅಛಲ ನ್ಯಾಯಯುತವಾದ ರೇತಪರ ತಮ್ಮ ಹೋರಾಟಕ್ಕೆ,ಜಯ ಖಚಿತ ಕೆರೆ ಉಳಿವಿಗಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆದಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ಹಂತ ಹಂತವಾಗಿ, ಹೋರಾಟ ಕಾನೂನು ರೀತ್ಯ ತೀವ್ರಗೊಳಲ್ಲಿದೆ ಎಂದು, ಹೋರಾಟಗಾರ ಎಐಟಿಯುಸಿ ಮುಖಂಡ ಹೆಚ್.ವೀರಣ್ಣ ತಿಳಿಸಿದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428