ಕ.ರ.ವೇ ವತಿಯಿಂದ 3ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಲಾಯಿತು….
ಕೂಡುಗೆ ಗಣಪತಿ ಪೆಂಡಾಲ್ ನಲ್ಲಿ ತುಂಬಾ ವರ್ಷದಿಂದ ಮಲಗುತ್ತಿದ್ದ 3ಜನ ಅನಾಥರನ್ನು ಕೂಡಿಗೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸದಸ್ಯರ ಸಹಕಾರದೊಂದಿಗೆ ಹಾಗೂ ಪತ್ರಿಕೆಯ ವರದಿಗಾರರ ಸಹಕಾರದೊಂದಿಗೆ ಹಾಗೂ ಕೂಡಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಇಂದು 3ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಾದ ಶಶಿಕುಮಾರ್ (ಅಟೆಂಡರ್) ಹಾಗೂ ಮಂಜು ಪೌರಕಾರ್ಮಿಕರು ಗ್ರಾಮ ಪಂಚಾಯಿತಿ ಕೂಡಿಗೆ ಖುದ್ದಾಗಿ ಹೋಗಿ ಸೇರಿಸಲಾಯ್ತು. ಕೊಡಗು ಜಿಲ್ಲೆಯ ಕಾವೇರಿ ತಾಲ್ಲೂಕಿನ (ಕುಶಾಲನಗರ ) ಕೂಡಿಗೆ ಗ್ರಾಮ ಪಂಚಾಯಿತಿಗೆ ಸೇರಿದ ಗಣಪತಿ ಪೆಂಡಾಲ್ ನಲ್ಲಿ ತುಂಬಾ ವರ್ಷದಿಂದ 3ಜನ ಅನಾಥರು ಈ ಪೆಂಡಾಲ್ ನಲ್ಲಿ ಮಲಗುತ್ತಿದ್ದರು ಇದನ್ನು ಗಮನಿಸಿದ ಪತ್ರಕರ್ತರಾದ ಕೂಡಿಗೆ ಗಣೇಶ್ ರವರು ಗ್ರಾಮ ಪಂಚಾಯಿತಿಗೆ ತಿಳಿಸಿರುತ್ತಾರೆ . ಇದನ್ನರಿತ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾದ ಪುನೀತ್ ರವರು ಮತ್ತು ಪತ್ರಕರ್ತರಾದ ಗಣೇಶ್ ರವರು ಇವರಿಬ್ಬರು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಅವರನ್ನು ಫೋನ್ ನಲ್ಲಿ ಸಂಪರ್ಕಿಸಿದ ತಕ್ಷಣ ಕರವೇ ಫ್ರಾನ್ಸಿಸ್ ಡಿಸೋಜಾ ರವರು ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸುವ ಅಂತ ಹೇಳಿದಾಗ ಗ್ರಾಮ ಪಂಚಾಯಿತಿಯವರು ಒಪ್ಪಿಕೊಂಡರು . ಇದೇ ಸಂದರ್ಭದಲ್ಲಿ ನಾವು ತಿಳಿಸಿದೆವು 1ಆಂಬ್ಯುಲೆನ್ಸ್ ಮಾಡಿಕೊಡಿ ಹಾಗೂ ಆಟೋರಾಜ ಫೌಂಡೇಶನಿಗೆ 1ಲೆಟರ್ ಮಾಡಿಕೊಡಿ ಎಂದು ತಿಳಿಸಿದೆವು . ಪಂಚಾಯಿತಿ ಕಡೆಯಿಂದ ನಮ್ಮ ಕಡೆಯಿಂದ ಯಾವೆಲ್ಲ ಸೌಲತ್ತು ಇದೆ ಎಲ್ಲವನ್ನೂ ಕೊಡುತ್ತವೆಂದು ಒಪ್ಪಿಕೊಂಡರು . ಹಾಗಾಗಿ ಈದಿನ ಆಂಬ್ಯುಲೆನ್ಸ್ ನಲ್ಲಿ 3ಜನ ಅನಾಥರನ್ನು ಇದರಲ್ಲಿ ಒಬ್ಬ ಮಹಿಳೆ ಅವರು ಅಂದಾಜು ವಯಸ್ಸು 75 ವರ್ಷ ಹಾಗೂ ಇನ್ನೆರಡು ಜನ ವೃದ್ಧರು ಇವರಿಗೂ ಸಹ ಅಂದಾಜು ವಯಸ್ಸು 75 ರಿಂದ 80 ಆಗಿರುತ್ತದೆ . ಇದರಲ್ಲಿ ಒಬ್ಬ ಮಹಿಳೆಗೆ ಏಳಲು ಸಹ ಆಗದೆ ಮಲಗಿದ ಜಾಗದಲ್ಲೇ ಇದ್ದರು . ಇನ್ನೊಬ್ಬ ವೃದ್ಧರಿಗೆ ಕಣ್ಣು ಕಾಣಿಸದ ಸ್ಥಿತಿಯಲ್ಲಿತ್ತು . ಇದನ್ನೆಲ್ಲ ನೋಡಿದ ಕರವೇ ಕಾರ್ಯಕರ್ತರು ಮನ ಮರಗುವಾ ಸ್ಥಿತಿಯಾಗಿತ್ತು . ಇಂದು ಈ 3ಜನರನ್ನು ಬೆಂಗಳೂರು ಆಟೋರಾಜ ಫೌಂಡೇಶನ್ ಅನಾಥಾಶ್ರಮಕ್ಕೆ ಸೇರಿಸಲಾಯ್ತು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗಳಾದ ಪುನೀತ್ ರವರು ತುಂಬಾ ಸಹಕಾರ ಕೊಟ್ಟಿದ್ದಾರೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ . ಹಾಗೆಯೇ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹಮೀದ್ ರವರು ಸಹ ತುಂಬಾ ಸಹಕಾರ ಕೊಟ್ಟಿರುತ್ತಾರೆ ಇವರಿಗೂ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ . ಹಾಗೆಯೇ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ . ಹಾಗೆಯೇ ಕೂಡಿಗೆ ಪ್ರಸಿದ್ಧಿ ಪತ್ರಕರ್ತರಾದ ಗಣೇಶ್ ರವರಿಗೆ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ . ಹಾಗೂ ಆಂಬ್ಯುಲೆನ್ಸ್ ನವರಿಗೂ ಧನ್ಯವಾದ ಅರ್ಪಿಸುತ್ತೇನೆ .. ಹಾಗೆಯೇ ನಮ್ಮ ಜೊತೆ ಬಂದತಹ ಕೂಡಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಶಶಿಕುಮಾರ್ (ಅಟೆಂಡರ್ ) ಗ್ರಾಮ ಪಂಚಾಯ್ತಿ ಕೂಡಿಗೆ ಹಾಗೂ ಮಂಜು ಪೌರಕಾರ್ಮಿಕರು ಇವರಿಬ್ಬರಿಗೂ ಸಹ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕರವೇ ಫ್ರಾನ್ಸಿಸ್ ಡಿಸೋಜಾ 9449255831 ಮತ್ತು 9686095831..
ವರದಿ – ಸಂಪಾದಕೀಯ