ಕೊಡಗು ಜಿಲ್ಲಾಧಿಕಾರಿಯ ಜೊತೆ ಮಡಿಕೇರಿ ತಾಲೂಕಿನ ಪಾಲೆಮಾಡು ಕಾನ್ಶೀರಾಮ್ ನಗರದ ಸ್ಮಶಾನ ಭೂಮಿಯ ಸಮಸ್ಯೆ ಕುರಿತು ಚರ್ಚಿಸಲಾಯಿತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ,,,,
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮಟ್ಟದ ನಿಯೋಗ ನಿನ್ನೆ ತಾರೀಕು 23-05-2022 ರಂದು ಕೊಡಗು ಜಿಲ್ಲಾಧಿಕಾರಿ ಸತೀಶ್ ಇವರನ್ನು ಭೇಟಿಯಾಗಿ ಮಡಿಕೇರಿ ತಾಲೂಕಿನ ಪಾಲೆಮಾಡು ಕಾನ್ಶೀರಾಮ್ ನಗರದ ಸ್ಮಶಾನ ಭೂಮಿಯ ಸಮಸ್ಯೆ ಕುರಿತು ಚರ್ಚಿಸಲಾಯಿತು. ದಲಿತರು ಆದಿವಾಸಿಗಳು, ಸೇರಿದಂತೆ ಗ್ರಾಮದ ಎಲ್ಲಾ ಜಾತಿ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮಳೆ ಚಳಿಯಲ್ಲಿ ಕಳೆದ 15 ದಿನಗಳಿಂದ ಹೋರಾಟ ನಡೆಸಿದ್ದಾರೆ.ಹನ್ನೆರಡು ವರ್ಷಗಳಿಂದ ಹಿರಿಯರನ್ನು ಸಮಾಧಿ ಮಾಡಿದ ಸ್ಮಶಾನ ಭೂಮಿಯನ್ನು ಮತ್ತು ವಾಸಿಸುವ ಜಾಗವನ್ನು ಕಿತ್ತು, ಕ್ರಿಕೆಟ್ ಸಂಸ್ಥೆ ಗೆ ಕೊಡಲು ಜಿಲ್ಲಾಡಳಿತ ಮುಂದಾಗಿದೆ.ಈಗಾಗಲೇ 11 ಎಕರೆ ಸರ್ಕಾರಿ ಪೈಸಾರಿ ಭೂಮಿಯನ್ನು ಕ್ರಿಕೆಟ್ ಸಂಸ್ಥಗೆ ಕೊಡಲಾಗಿದೆ. ಇಷ್ಟಕ್ಕೂ ತೃಪ್ತಿಗೊಳ್ಳದ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಇತರೆ ರಾಜಕಾರಣಿಗಳು 3 ಎಕರೆ ಸ್ಮಶಾನ ಭೂಮಿ ಮತ್ತು ಜನ ವಸತಿ ಜಾಗವನ್ನು ಅತಿಕ್ರಮಿಸಲು ಜಿಲ್ಲಾ ಧಿಕಾರಿಗಳಿಗೆ ಒತ್ತಡ ತಂದಿದ್ದಾರೆ. ಸ್ಟೇಡಿಯಂ ಭೂಮಿಯನ್ನು ಪುನಃ ಸರ್ವೇ ನಡೆಸಿ ಜನರು ಸ್ಮಶಾನ ಭೂಮಿಯನ್ನು ಉಳಿಸಿಕೊಡಲು ಜಿಲ್ಲಾ ಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ಭೂಮಿ ಉಳಿಯದಿದ್ದರೆ 6 ತಿಂಗಳ ಹಿಂದೆ ನಿರ್ಣಯಿಸಿದಂತೆ ಬೇರೆ ಕಡೆ ಭೂಮಿ ಕೊಡುವುದಾಗಿ ಹೇಳಿದರು.ಆದರೆ ಸ್ಥಳೀಯ ಜನರು ಸ್ಮಶಾನ ಭೂಮಿ ಬಿಟ್ಟು ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಇದಲ್ಲದೆ ಸ್ಟೇಡಿಯಂ ಭೂಮಿಗೆ ಹೊಂದಿಕೊಂಡಿರುವ ಸರ್ಕಾರಿ ಪೈಸಾರಿ ಭೂಮಿಯನ್ನು, ಭೂ ಮಾಲಿಕ ಮತ್ತು ವಾಣಿಜ್ಯೋದ್ಯಮಿ ಪೃಥ್ವಿ ದೇವಯ್ಯನಿಗೆ ಕಾನೂನು ಬಾಹಿರವಾಗಿ ಮಂಜೂರಿ ಮಾಡಲಾಗಿದೆ. ಈ ಭೂಮಿಮನ್ನು ಸ್ಟೇಡಿಯಂಗೆ ಬಳಸಿ ಕೊಳ್ಳಲು ಜನರು ಒತ್ತಾಯಿಸುತ್ತಿದ್ದಾರೆ. ಮಡಿಕೇರಿಯಿಂದ 20 ಕಿಲೋಮೀಟರ್ ದೂರದಲ್ಲಿ, ರಸ್ತೆ ಇತರೆ ಅನುಕೂಲಗಳಿಲ್ಲದ ಈ ಜಾಗದಲ್ಲಿ ರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣ ಮಾಡುವುದು ಅತ್ಯಂತ ಅವೈಜ್ಞಾನಿಕವೆಂದು ಕೆಲವರು ಹೇಳುತ್ತಾರೆ. ಕೊಡಗು ಜಿಲ್ಲಾ ಕೇಂದ್ರದ ಹತ್ತಿರ ಈ ಸ್ಟೇಡಿಯಂ ನಿರ್ಮಿಸಿದರೆ ಮಾತ್ರ ಉಪಯೋಗವಾಗುತ್ತದೆ. ಇಲ್ಲದಿದ್ದರೆ ನೂರಾರು ಕೋಟಿ ಹಣ ನೀರಲ್ಲಿ ಹೋಮಾ ಮಾಡಿದಂತಾಗುತ್ತದೆ. ನಿಯೋಗದಲ್ಲಿ ಭೂಮಿ-ವಸತಿ ಹೋರಾಟ ಸಮಿತಿಯ ಕಾರ್ಯದರ್ಶಿಗಳಾದ ಡಿ.ಹೆಚ್.ಪೂಜಾರ್, ಡಿ.ಎಸ್.ನಿರ್ವಾಣಪ್ಪ, ಕುಮಾರ್ ಸಮತಳ, ಕೆ.ಮರಿಯಪ್ಪ, ಅಮೀನ್ ಮೊಹಿಸಿನ್, ಮೊಣ್ಣಪ್ಪ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಗಜೇಂದ್ರ ಬೆಂಗಳೂರು, ಕೊಡಗು ಜಿಲ್ಲೆಯ ಎಸ್.ಆರ್.ಮಂಜುನಾಥ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ, ಮತ್ತಿತರರು ಇದ್ದರು. ಕಾರ್ಯದರ್ಶಿ ಮಂಡಳಿ ಪರವಾಗಿ ಡಿ.ಹೆಚ್.ಪೂಜಾರ್.
ವರದಿ – ಸಂಪಾದಕೀಯ