ಕೂಡ್ಲಿಗಿ:ಪ್ರಾಮಾಣಿಕರಿಗೆ ನೇಮಕಾತಿಯಲ್ಲಿ ಮಾನ್ಯತೆ ಕೊಡಿ– ಕರವೇ ಒತ್ತಾಯ..
ವಿಜಯ ನಗರ ಜಿಲ್ಲೆ, ಕರ್ನಾಟಕ ರಕ್ಷಣಾ ವೇದಿಕೆ ಕೂಡ್ಲಿಗಿ ತಾಲೂಕು ಘಟಕ. ತಾಲೂಕು ಅಧ್ಯಕ್ಷರಾದ ಕಾಟೇರ್ ಹಾಲೇಶ್ ಮತ್ತು ಯುವ ಘಟಕದ ಎಂ. ಓಬಳೇಶ, ಕಾರ್ಯದರ್ಶಿ ಸಾಲುಮನಿ ರಾಘವೇಂದ್ರ ಇವರ ನೇತೃತ್ವದಲ್ಲಿ. ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸೈ ನೇಮಕಾತಿಯಲ್ಲಿ, ಜರುಗಿರುವ ಅಕ್ರಮ ನೇಮಕ ಹಗರಣಕ್ಕೆ ಸಂಬಂಧಿಸಿದಂತೆ. ಭಾಗಿಯಾಗಿರುವ ಕಿಂಗ್ ಪಿನ್ ಗಳಿಗೆ ತಕ್ಕ ಶಿಕ್ಷೆ ಆಗಬೇಕು. ಪ್ರಾಮಾಣಿಕ ಪ್ರತಿಭಾವಂತರಿಗೆ, ನ್ಯಾಯ ದೊರಕಿಸಬೇಕೆಂದು ಕರವೇ ಸರ್ಕಾರಕ್ಕೆ ಒತ್ತಾಯಿಸಿದೆ. ಯೋಗ್ಯ ಪ್ರತಿಭಾವಂತರಿಗೆ ಸೂಕ್ತ ನ್ಯಾಯ ಕೊಡಬೇಕು, ಅವಿರಿಗೆ ಮರು ಪರೀಕ್ಷೆ ನಡೆಸದಂತೆ ನೇಮಕ ಮಾಡಿಕೊಳ್ಳಬೇಕು ಈ ಕುರಿತು ಸರ್ಕಾರ ಶೀಘ್ರವಾಗಿ ಆದೇಶ ಹಿಂಪಡಿಯಬೇಕೆಂದು ಕರವೇ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹೋರಾಟಗಾರರು ಮಾತನಾಡಿ, ಪ್ರಕರಣ ಸಂಬಂಧಿಸಿದಂತೆ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ,ಗೃಹ ಸಚಿವರಾದ ಅರಗ ಜ್ಞಾನೇಂದ್ರ ರಿಗೆ ಹಕ್ಕೊತ್ತಾಯ ಮಾಡಿದ್ದಾರೆ. ಸದ್ಯದ ಗೊಂದಲದ ವಾತಾವರಣದಿಂದಾಗಿ ಬಡ ವಿದ್ಯಾರ್ಥಿಗಳು ಹಾಗೂ ಪ್ರತಿಭಾನ್ವಿತ ಅಭ್ಯಾರ್ಥಿಗಳು,ಆರ್ಥಿಕ ಸಂಕಷ್ಟಟಕ್ಕೆ ಸಿಲುಕಿದ್ದಾರೆ ಮತ್ತು ಮಾನಸಿಕ ಯಾತೆನೆ ಅನುಭವಿಸುವಂತಾಗಿದೆ. ಸರ್ಕಾರ ಅರ್ಥ ಮಾಡಿಕೊಂಡು ಆದೇಶ ಹಿಂಪಡಿಯಬೇಕು ಎಂದು ಅವರು ಒತ್ತಾಯಿಸಿದರು. ಉಪ ತಹಶೀಲ್ದಾರ್ ಅರುಂಧತಿ ನಾಗಾವಿ ರವರಿಗೆ ಮನವಿ ಪತ್ರ ಸಲ್ಲಿಸಿದರು. ಪತ್ರಕರ್ತ ಹಾಗೂ ಹೋರಾಟಗಾರ ಎಲೆ. ನಾಗರಾಜ,ಆರ್.ಎಂ. ಕಾಶೀನಾಥ್,ಹೆಗ್ಡಾಳ್ ಮಹೇಶ್, ಮಹಮದ್ ತೋಪಿಕ್.ಬಣಕಾರ್ ವೀರಭದ್ರಪ್ಪ, ನಾಗಪ್ಪ, ಆನಂದ, ಅಜ್ಜಪ್ಪ ಇನ್ನಿತರರು ಉಪಸ್ಥಿತರಿದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428