ಜುಮಲಾಪೂರ ಗ್ರಾಮ ಪಂಚಾಯಿತಿಯಿಂದ ಗ್ರಾಮದ ಜನರಿಗೆ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭ,,,,,
ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಜುಮಲಾಪೂರ ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ. ಕೂಲಿ ಕಾರ್ಮಿಕರಿಂದ ಕಟ್ಟೆ ಕಡೆದು ಹೂಳೆತ್ತುವ ಕೆಲಸ ಮಾಡಿದರು. ಸುಮಾರು 400 ಕೂಲಿ ಕಾರ್ಮಿಕರು ಕೆಲಸ ಮಾಡಿದರು. ಈ ಸಂಧರ್ಭದಲ್ಲಿ ಕಾಯಕ ಮಿತ್ರರಾದ ಭಾರ್ಗವಿ ರೇಣುಕರಾಜ ಇದ್ಲಾಪುರ ಕೂಲಿಕಾರರರಿಗೆ ಪ್ರತಿಯೊಬ್ಬರು ಕೂಡ ಬೆಳಿಗ್ಗೆ ಒಂದು ಹಾಜರಿ ಮದ್ಯಾಹ್ನ ಒಂದು ಹಾಜರಿ ಕಡ್ಡಾಯವಿರುತ್ತದೆ ಇದು ಸರ್ಕಾರದ ಆದೇಶವಿರುತ್ತದೆ ಎಂದು ತಿಳಿಸಿದರು. ತದನಂತರ ಅಭಿವೃದ್ಧಿ ಅಧಿಕಾರಿಗಳು ದೊಡ್ಡಪ್ಪ ಚವ್ಹಾಣರು ಮಂಗಳೂರು ಬೆಂಗಳೂರು ಹೋಗುವ ಬದಲು ಇದ್ದ ಊರಲ್ಲೆ ಇದ್ದು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೆಳಿದರು. ನಂತರ ಡಿ ಎಸ್ ಎಸ್ ಘಟಕದ ಅಧ್ಯಕ್ಷ ಶಂಕರಪ್ಪ ಚಲವಾದಿ ಮಾತನಾಡಿ ಯೋಜನೆಯಲ್ಲಿ 18 ವರ್ಷದ ಒಳಗಿನ ಮಕ್ಕಳು ಯಾರು ಕೆಲಸ ಮಾಡುವಂತಿಲ್ಲ ಕೆಲಸ ಮಾಡುವದು ಕಾನೂನು ಬಾಹಿರ. ಯೋಜನೆಯಲ್ಲಿ ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಸರಿಸಮನಾದ ಕೂಲಿ ಇರುತ್ತದೆ. ಊರಿನ ಈ ಯೋಜನೆ ಉಪಯೋಗವನ್ನು ಪಡೆದುಕೊಂಡು ನಮ್ಮ ಊರಿನಲ್ಲಿ ಇದ್ದುಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿ ವಲಸೆ ಹೋಗುವುದನ್ನು ನಿಲ್ಲಿಸಬೇಕೆಂದು ವಿನಂತಿ ಮಾಡಿಕೊಂಡರು. ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಬೇರೆ ಕಡೆಗೆ ವಲಸೆ ಹೋಗದೆ ನರೇಗಾ ಯೋಜನೆ ಕೆಲಸವನ್ನು ಸದುಪಯೋಗ ಮಾಡಿಕೊಂಡು ಆರೋಗ್ಯದಿಂದ ಬಾಳಿ ಎಂದು ಕಿವಿಮಾತು ಹೆಳಿದರು ಈ ಸಂಧರ್ಭದಲ್ಲಿ ಊರಿನ ಕೂಲಿಕಾರ್ಮಿಕರಾದ ಶಂಕರಪ್ಪ ನಾಯಕ ನಿಂಗಪ್ಪ ನಾಯಕ್ ಸುಭಾಷ್ ಚಂದ್ರ ರಮೇಶ ರಾಟಿ ನೂರಾರು ಕೂಲಿಕಾರು ಇದ್ದರು.
ವರದಿ – ಸಂಪಾದಕೀಯ