ನಿರ್ಲಕ್ಷವಹಿಸಿದ ಅಧಿಕಾರಿಗಳನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಜೈ ಕರುನಾಡು ರಕ್ಷಣಾ ಸೇನೆಯಿಂದ ಒತ್ತಾಯ,,,,

Spread the love

ನಿರ್ಲಕ್ಷವಹಿಸಿದ ಅಧಿಕಾರಿಗಳನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಜೈ ಕರುನಾಡು ರಕ್ಷಣಾ ಸೇನೆಯಿಂದ ಒತ್ತಾಯ,,,,

ಪುರಾತನ ಕಾಲದಿಂದಲೂ ಐತಿಹಾಸಿಕ ಹಿನ್ನೆಲೆಹೊಂದಿದ ವಿಜಯನಗರ ಸಾಮ್ರಾಜ್ಯ ವ್ಯಾಪ್ತಿಗೆ ಒಳಪಡುವ ಆನೆಗೊಂದಿ ಸಪ್ತ ಸರೋವರಗಳಲ್ಲಿ ಒಂದಾದ ಪಂಪಾ ಸರೋವರ ಹಾಗೂ ಜಯಲಕ್ಷ್ಮಿ ಗರ್ಭಗುಡಿಯನ್ನು ಕಿತ್ತು ಹಾಕಿ ಶ್ರೀ ಚಕ್ರ ಕಲಾಕೃತಿಗೆ ಧಕ್ಕೆ ಮಾಡಲಾಗಿದೆ ಎಂದು ಜೈ ಕರುನಾಡು ರಕ್ಷಣಾ ಸೇನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇ 25 ರಂದು ಸಂಜೆ ಗರ್ಭಗುಡಿಯನ್ನು ಸ್ಥಳಾಂತರ ಮಾಡಲಾಗಿದೆ ಹಳೇ ಮೂರ್ತಿ ಪ್ರತಿಷ್ಠಾನ ವೇಳೆಯಲ್ಲಿ ಮುತ್ತು ರತ್ನ, ಚಿನ್ನವನ್ನು ಕೆಳಗಡೆ ಹಾಕಿರಲಾಗಿರುತ್ತದೆ ಅಲ್ಲಿ ದೊರೆತಿರುವ ಸಂಪತ್ತನ್ನು ಲೂಟಿ ಮಾಡಲಾಗಿದೆ 14 ನೇ ಶತಮಾನದಲ್ಲಿ ಪಂಪಾಸರೋವರ ಜಯಲಕ್ಷ್ಮಿ ದೇಗುಲ ಸ್ಥಾಪಿತವಾಗಿರುವ ಕುರಿತು ಇತಿಹಾಸದಲ್ಲಿ ಉಲ್ಲೇಖವಿದೆ ಗರ್ಭಗುಡಿ ಕಿತ್ತೂಹಾಕಿರುವವರನ್ನು ಕೂಡಲೆ ಬಂಧಿಸಬೇಕು ಎಂದು ಜೈ ಕರುನಾಡು ರಕ್ಷಣಾ ಸೇನೆಯಿಂದ  ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *