ಆಮ್ ಆದ್ಮಿ ಪಕ್ಷದಿಂದ ಮನೆಮನೆ ಅದ್ದೂರಿ ಪ್ರಚಾರದ ಜೊತೆಗೆ ದೆಹಲಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ವಿವರಿಸಲಾಯಿತು.
ದಿನಾಂಕ, 29-05-2022 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಸವಳಿ ಕ್ಯಾಂಪ್ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ರಮೇಶ್ ಕೋಟಿ ಮತ್ತು ಕಾರಟಿಗಿ ತಾಲೂಕ್ ಯುವ ಘಟಕ ಅಧ್ಯಕ್ಷರಾದ ದೇವೇಂದ್ರ ಕುಮಾರ, ಕಿರಣ್ ಕುಮಾರ್, ಹನುಮೇಶ್ ಆಮ್ ಆದ್ಮಿ ಪಕ್ಷದಿಂದ ಮನೆಮನೆ ಪ್ರಚಾರ ನಡೆಸಿದರು. ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಪ್ರಾಮಾಣಿಕ ಆಮ್ ಆದ್ಮಿ ಪಕ್ಷದ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ವಿವರಿಸಲಾಯಿತು. ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಮತದಾರರಲ್ಲಿ ಮನವಿ ಮಾಡಲಾಯಿತು.
ವರದಿ – ಸಂಪಾದಕೀಯ