ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು….
ಸಿರುಗುಪ್ಪ : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಕೈಜಾರಿ ನೀರಿನಲ್ಲಿ ಬಿದ್ದ ಸೋಪು ತಡೆಯಲು ಹೋಗಿ ಕಾಲು ಜಾರಿ ಈಜು ಬಾರದೇ ಇಬ್ಬರು ಬಾಲಕಿಯರು ನೀರು ಪಾಲಾದ ಘಟನೆ ತಾಲೂಕಿನ ಹಚ್ಚೋಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಶ್ರೀಧರಗಡ್ಡೆ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ಬಟ್ಟೆ ತೊಳೆಯಲು ಐವರು ಬಾಲಕಿಯರು ತೆರಳಿದ್ದು, ಕೈಜಾರಿದ ಸೋಪು ಹಿಡಿಯಲು ಹೋಗಿ ಒಬ್ಬರನ್ನೊಬ್ಬರು ರಕ್ಷಿಸಲು ಐದು ಜನ ಬಾಲಕಿಯರು ನೀರು ಪಾಲಾಗಿದ್ದು ಸ್ಥಳೀಯರು ಮೂವರು ಬಾಲಕೀಯರನ್ನು ರಕ್ಷಿಸಿದ್ದಾರೆ. ಆದರೆ ಮಹೇಶ್ವರಿ(13) ತಂದೆ ಮಾರೆಣ್ಣ, ಶ್ರೀದೇವಿ(14) ತಂದೆ ಕುಪ್ಪಳಪ್ಪ, ವರ್ಷದ ಬಾಲಕಿಯರು ದುರದೃಷ್ಟವೆಂಬ0ತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸ್ಥಳೀಯರು ತಿಳಿಸಿದ್ದಾರೆಂದು ಮೃತ ಬಾಲಕೀಯರು ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ತಿಳಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬ0ದಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಈ ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಡಿವೈಎಸ್‌ಪಿ ಎಂ.ಸತ್ಯನಾರಾಯಣರಾವ್, ಸಿಪಿಐ ಯಶವಂತ ಬಿಸ್ನಳ್ಳಿ, ಹಚ್ಚೊಳ್ಳಿ ಠಾಣೆ ಪಿಎಸ್‌ಐ ನಾಗರತ್ನಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ -ಬಾಲರಾಜ ಯಾದವ್