* “ತಾಜ್ ಮಹಲ್-೨”ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ *

Spread the love

* “ತಾಜ್ ಮಹಲ್ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ

ನವಲಗುಂದ : ನವಲಗುಂದ ನಗರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ “ತಾಜ್ ಮಹಲ್-೨” ಕನ್ನಡ ಚಲನಚಿತ್ರದ ಧ್ವನಿಸುರುಳಿಯೊಂದು ಬಿಡುಗಡೆಗೊಂಡು ಹೊಸದೊಂದು ಇತಿಹಾಸವೇ ನಿರ್ಮಾಣವಾಯಿತು. ಇದರ ಕೇಂದ್ರಬಿಂದುವಾಗಿದ್ದ ಮನ್ವರ್ಷಿ ನವಲಗುಂದ ತಮ್ಮ ಊರಿನ ಬಗೆಗೆ ಇರುವ ಅಭಿಮಾನವೇ ಇದಕ್ಕೆಲ್ಲ ಕಾರಣವಾದದ್ದು.

ಗ್ರಾಮದ ಮುಖ್ಯ  ಅತಿಥಿಗಳಾಗಿ ಸಕ್ಕರೆ ,ಕೈಮಗ್ಗ ಮತ್ತು ಜವಳಿ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಆಗಮಿಸಿ ಧ್ವನಿಸುರುಳಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿ ತಮ್ಮೂರ ಹುಡುಗ ಮನ್ವರ್ಷಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೂಜ್ಯ ಶ್ರೀ ವೀರೇಂದ್ರ ಮಹಾಸ್ವಾಮಿಗಳು ,ಅಜಾತನಾಗಲಿಂಗಸ್ವಾಮಿಗಳವರ ಆಶೀರ್ವಾದದ ನುಡಿಗಳೂ ಚಿತ್ರತಂಡಕ್ಕೆ ದೊರಕಿತು.

‘ತಾಜ್ ಮಹಲ್-೨’ ಚಿತ್ರದ ನಿರ್ದೇಶಕ ಹಾಗೂ ನಟ ದೇವರಾಜ್ ಕುಮಾರ್ ಮಾತನಾಡಿ ಇಡೀ ನವಲಗುಂದದ ಸಮಸ್ತ ಕಲಾರಾಧಕ ಬಳಗವೇ ಇಲ್ಲಿ ಸೇರಿದ್ದು ನಮ್ಮ ತಂಡಕ್ಕೆ ಬಲ ತಂದಿದೆ. ಚಿತ್ರದ ಶತದಿನೋತ್ಸವದ ಸಂಭ್ರಮಾಚರಣೆಯನ್ನು ಇಲ್ಲಿಯೇ ಮಾಡುವದಾಗಿ ಹೇಳಿ ಚಿತ್ರವನ್ನು ಗೆಲ್ಲಿಸಲು ವಿನಂತಿಸಿದರು. ಸೃಷ್ಟಿ ಅವರ ಭರತನಾಟ್ಯ, ಹಾಸ್ಯನಟ ರಿತೇಶ್ , ಅವಿನಾಶ್ ಗಂಜಿಹಾಳ ಅವರ ವಿವಿಧ ನಟರುಗಳ ಧ್ವನಿ ಅನುಕರಣೆ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ಸಾಹಸ ನಿರ್ದೇಶಕ ಚಂದ್ರು ಬಂಡೆ ಅವರ ಭಾವುಕ ಮಾತುಗಳು ಜನಮನ ತಲುಪಿದವು. ಅತಿಥಿಗಳಾಗಿ ಎ.ಬಿ.ಕೊಪ್ಪದ, ಕೇಶವ್ ಕರ್ಜಗಿ, ಶಿವಾನಂದ ಕರಿಗಾರ, ಮಹಾಂತೇಶ ಕಲಾಲ್, ಅಪ್ಪಣ್ಣ ಹಳ್ಳದ್, ಡಾ.ಕಲ್ಮೇಶ್ ಹಾವೇರಿಪೇಟ್, ಸಂತೋಷ್ ಬಡಿಗೇರ್, ಅರವಿಂದ್ ಮುಳಗುಂದ, ಮಮ್ಮಿಗಟ್ಟಿ, ವಿಕ್ರಮ್ ಕುರಿಯವರ್, ವಿಕಾಸ್ ತದ್ದೇವಾಡಿ, ಸಚಿನ್ ಪತ್ತಾರ , ಡಾ.ಪ್ರಭು ಗಂಜಿಹಾಳ ಆಗಮಿಸಿದ್ದರು. ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಸಂತೋಷ ಕಮ್ಮಾರ, ರವೀಂದ್ರ ರಾಮದುರ್ಗಕರ್ ಅವರ ಗೀತನಮನ ಜರುಗಿತು.    ವಿನೂತಾ ನಿರೂಪಿಸಿದರು.     ಇಂಪಲ್ಸ್ ಪಿಯು ಕಾಲೇಜ್ ಹುಬ್ಬಳ್ಳಿ, ಬಸವರಾಜ್ ಪರಸಣ್ಣವರ, ಮನ್ವರ್ಷಿ ನವಲಗುಂದ ಗೆಳೆಯರ ಬಳಗ ಕಾರ್ಯಕ್ರಮ ಆಯೋಜಿಸಿತ್ತು. ಎಪ್ಪತ್ತು ದಿನಗಳ ಕಾಲ ಸಕಲೇಶಪುರ, ಬೆಂಗಳೂರು, ಗಗನಚುಕ್ಕಿ, ಬರಚುಕ್ಕಿ ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದ್ದು, ತಾರಾಗಣದಲ್ಲಿ ಸಮೃದ್ಧಿ ಶುಕ್ಲಾ, ದೇವರಾಜ್ ಕುಮಾರ್, ರಿತೇಶ್, ಜಿಮ್ ರವಿ, ವಿಕ್ಟರಿ ವಾಸು, ಶೋಭರಾಜ್, ತಬಲಾನಾಣಿ, ಕಾಕ್ರೋಚ್ ಸುಧಿ, ಶಿವರಾಂ, ವಾಣಿಶ್ರೀ, ಲಕ್ಷ್ಮೀ ಸಿದ್ದಯ್ಯ ಮೊದಲಾವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ವಿಕ್ರಂ ಸೆಲ್ವಾ, ಸಾಹಿತ್ಯ ಸಂಭಾಷಣೆ, ಸಹನಿರ್ದೇಶನ ಮನ್ವರ್ಷಿ ನವಲಗುಂದ, ಗಾಯಕರು ವಿಜಯ್ ಪ್ರಕಾಶ್,ರಾಜೇಶ್ ಕೃಷ್ಣನ್, ವರ್ಷ ಬಿ ಸುರೇಶ್, ಶ್ರೀರಕ್ಷಾ, ಪ್ರಿಯಾರಾಮ್ , ನೃತ್ಯ ಸಂಯೋಜನೆ ಬಿ.ಧನಂಜಯ್, ಸಾಹಸ ಚಂದ್ರು ಬಂಡೆ, ಸಂಕಲನ ವಿಜಯ್ ಎಮ್ ಕುಮಾರ್, ಪಿಆರ್‌ಓ ಸುಧೀಂದ್ರ ವೆಂಕಟೇಶ್, ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ್, ಡಾ.ವೀರೇಶ್ ಹಂಡಗಿ ಅವರದಿದ್ದು,  ನಿರ್ದೇಶನವನ್ನು ದೇವರಾಜ್ ಕುಮಾರ್ ಮಾಡಿದ್ದಾರೆ. ಶ್ರೀ ಗಂಗಾಂಬಿಕೆ ಎಂಟರ್ಪ್ರೈಸೆಸ್ ನಿರ್ಮಾಪಕರಾಗಿದ್ದಾರೆ. ಚಿತ್ರ ಇದೇ ಸಪ್ಟಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.   

ವರದಿ: ಡಾ.ಪ್ರಭು ಗಂಜಿಹಾಳಮೊ: ೯೪೪೮೭೭೫೩೪೬

Leave a Reply

Your email address will not be published. Required fields are marked *