ಹೊಸಹಳ್ಳಿ ಜಿಪಂಗೆ ತಕರಾರು, ಸೂಲದಹಳ್ಳಿ ಜಿಪಂ ಕ್ಷೇತ್ರವನ್ನಾಗಿ ಮುಂದುವರೆಸುವಂತೆ ಆಗ್ರಹ….

Spread the love

ಹೊಸಹಳ್ಳಿ ಜಿಪಂಗೆ ತಕರಾರು, ಸೂಲದಹಳ್ಳಿ ಜಿಪಂ ಕ್ಷೇತ್ರವನ್ನಾಗಿ ಮುಂದುವರೆಸುವಂತೆ ಆಗ್ರಹ….

-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಈವರೆಗೂ ಸೂಲದಹಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರವಾಗಿದ್ದನ್ನು ಈಗ ರದ್ದುಗೊಳಿಸಿದ್ದಕ್ಕೆ ವಿವಿದ ಗ್ರಾಮಗಳ ಗ್ರಾಮಸ್ಥರು ಹಾಗೂ ಮತದಾರರು ತೀವ್ರ ಆಕ್ಷೇಪ ವ್ಯೆಕ್ತಪಡಿಸಿದ್ದಾರೆ. ಸೂಲದಹಳ್ಳಿ ಜಿಪಂ ಕ್ಷೇತ್ರದ ಬಹುತೇಕ ಗ್ರಾಮಗಳ ಗ್ರಾಮಸ್ಥರು,ಜನಪ್ರತಿನಿಧಿಗಳು ಪಕ್ಷಾತೀತವಾಗಿ ಪ್ರತಿಭಟಿಸಿಲು ತಹಶಿಲ್ದಾರರ ಕಚೇರಿ ಮುಂದೆ ಜಮಾಯಿಸಿದ್ದರು. ಪರಿಶಿಷ್ಟ ಪಂಗಡದವರೇ ಅತೀ ಹೆಚ್ಚಿರುವ ಸೂಲದಹಳ್ಳಿ ಜಿಪಂ ಕ್ಷೇತ್ರದ ಮತದಾನ ಭಾಂದವರು, ಹಾಗೂ ಗ್ರಾಮಗಳ ಗ್ರಾಮಸ್ಥರು ಕ್ಷೆತ್ರವನ್ನ ಬದಲಿಸಿ ಏಕಾ ಏಕಿ ಹೊಸಹಳ್ಳಿ ಜಿಪಂ ಕ್ಷೇತ್ರವನ್ನಾಗಿ ಘೋಷಿಸಿರುವುದನ್ನ ಖಂಡಿಸಿದರು. ಬದಲಾವಣೆಗೆ ಕಾಣದ ಪಟ್ಟಭದ್ರ ರಾಜಕೀಯ ಪುಂಡರ ಕಿಡಿಗೇಡಿ ಕೃತ್ಯ ಇದಾಗಿದ್ದು, ಇದು ಅವೈಜ್ಞಾನಿಕ ನಿಲುವಾಗಿದೆ ಕಾರಣ ಅದನ್ನು ರದ್ಧು ಪಡಿಸಬೇಕಿದೆ ನಿರ್ಲಕ್ಷ್ಯ ತೋರಿದ್ದಲ್ಲಿ ಕಾನೂನು ರೀತ್ಯ ಹೋರಾಟ ಅನಿವಾರ್ಯ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಪರಿಶಿಷ್ಟ ಪಂಗಡವನ್ನು ರಾಜಕೀಯವಾಗಿ ಶೋಷಣೆಗೊಳಪಡಿಸುವ ಹುನ್ನಾರ ಇದಾಗಿದೆ, ಹಾಗಾಗಲು ಬಿಡುವುದಿಲ್ಲ ಚುನಾವಣೆಯನ್ನು ಭಹಿಷ್ಕರಿಸಲಾಗುವುದು ಮತ್ತು ಇದರ ಹಿಂದೆ ಇರುವ ಪುಂಡ ರಾಜಕಾರಣಿಗಳ ಹಾಗೂ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಅವೈಜ್ಞಾನಿಕ ನಿಲುವನ್ನು ತಾಳಿರುವ ಎಲ್ಲಾ ಕಾಣದ ಕೈಗಳಿಗೆ, ಮತದಾರರು ಹಾಗೂ ಗ್ರಾಮಗಳ ಗ್ರಾಮಸ್ಥರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಿಸಿದಂತೆ ತಮ್ಮ ತಕರಾರಿಗೆ ಮನ್ನಣೆ ನೀಡಬೇಕಿದೆ, ಶೀಘ್ರವಾಗಿ ಈವರೆಗಿದ್ದ ಸೂಲದಹಳ್ಳಿ ಜಿಪಂ ಕ್ಷೇತ್ರವನ್ನಾಗಿ ಘೋಷಿಸಿ ಮುಂದುವರೆಸಬೇಕು. ನಿರ್ಲಕ್ಷ್ಯ ತೋರಿದ್ದಲ್ಲಿ ಹೋರಾಟಗಳು ತೀವ್ರವಾಗಲಿವೆ, ಮತ್ತು ಕ್ಷೇತ್ರದ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಹಾಗು ಮತದಾರರು ಮುಂಬರುವ ಎಲ್ಲಾ ಚುನಾವಣೆಗಳನ್ನು ಭಹಿಷ್ಕರಿಸಲಾಗುವುದೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಕೀಲರು ಹಾಗೂ ಹೋರಾಟಗಾರರಾದ ಎಲ್.ಎಸ್.ಭಷೀರ್ ಅಹಮ್ಮದ್ ,ಬಸವರಾಜ ಮುಂತಾದವರು ಮಾತನಾಡಿದರು. ಪ್ರತಿಭಟನಾಕಾರರು ತಮ್ಮ ತಕರಾರು ಹಕ್ಕೊತ್ತಾಯ ಪತ್ರವನ್ನು, ತಹಶಿಲ್ದಾರರಾದ ಟಿ.ಜಗದೀಶ ರವರಿಗೆ ನೀಡಿದರು.ಸಂಸದರಿಗೆ, ಜಿಪಂ ಕಾರ್ಯನಿರ್ವಹಣಾಧಿಕಾರಿಗೆ, ಜಿಲ್ಲಾಧಿಕಾರಿಗೆ, ರಾಜ್ಯ ಕಾರ್ಯದರ್ಶಿಗೆ ತಹಶಿಲ್ದಾರರಿಗೆ ತಮ್ಮ ಹಕ್ಕೊತ್ತಾಯ ಪತ್ರವನ್ನು ನೀಡಿದ್ದಾರೆ.ಈ ಸಂದರ್ಭದಲ್ಲಿ ಸೂಲದಹಳ್ಳಿ ಕಲ್ಲೇಶಪ್ಪ, ಸಿದ್ಬದಪ್ಪ,ಬಸವರಾಜಪ್ಪ, ವಕೀಲರಾದ ನಾರಪ್ಪ,ರಾಜು, ತಿಪ್ಪೇಸ್ವಾಮಿ,ಗ್ರಾಪಂ ಅಧ್ಯಕ್ಷ ಎನ್.ಮಾರಪ್ಪ,ಸದಸ್ಯೆ ಭೋವಿ ಲಕ್ಷ್ಮೀದೇವಿ, ಎನ್.ವೃಷಭೇಂದ್ರಪ್ಪ, ಜಿ.ಪಿ.ಚಿತ್ತಪ್ಪ,ಮಾರಪ್ಪ,ಸುರೇಶ,ಚೌಡಮ್ಮ,ಪಿ.ವಿ.ಬಸವರಾಜ ಸೇರಿದಂತೆ.ಮಾಜಿ ಜಿಪಂ ಸದಸ್ಯರು,ಮಾಜಿ ತಾಪಂ ಸದಸ್ಯರು,ವಿವಿದ ಗ್ರಾಪಂ ಸದಸ್ಯರು, ಮಾಜಿ ಗ್ರಾಪಂ ಸದಸ್ಯರು,ವಿವಿದ ಪಕ್ಷಗಳ ಮುಖಂಡರು,ವಿವಿ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು, ರೈತ ಮುಖಂಡರು, ವಕೀಲರು, ನೂರಾರು ಗ್ರಾಮಸ್ಥರು ಮತ್ತು ಕ್ಷೇತ್ರದ ನೂರಾರು ಮತದಾರರು ಇದ್ದರು. ವಂದೆ ಮಾತರಂ

ವರದಿ:ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *